SearchBrowseAboutContactDonate
Page Preview
Page 411
Loading...
Download File
Download File
Page Text
________________ ೪೦೬ | ಪಂಪಭಾರತಂ ವll ಕೇಳ್ತಾ ಪೂಜ್ ಪೂಾಗೆ ದೌಪದಿಗೆ ಬಚಿಯನಟ್ಟ ಬರಿಸಿಉlು ಸಾರಥಿ ಮಾಡು ಮತ್ನ ಸುತನುತ್ತರನಂ ತದಾತಿಸೆನ್ನ ಕೂ ಪಾರದ ಪಾರಮಂ ತಡೆಯದೆಯುವನೆಂಬುದುಮಂತ ಬಂದು ಪಂ | ಕೇರುಹವಕ್ಕೆ ಮತ್ನ ಸುತನಂ ನುಡಿದಳ ನಿನಗಾಜಿರಂಗದೊಳ್ ಸಾರಥಿಯಿಡಪ್ಪುದು ಶಿಖಂಡಿಯೆ ನಿನ್ನೊರಗುಂತೆ ಗಂಡರಾರ್ || ೯೭ ವ|| ಎಂಬುದುಂ ಬೃಹಂದಳೆಯಲ್ಲಿರುತ್ತರಂ ತನ್ನ ತಂಗೆಯುತ್ತರೆಯನ ಬಳಿಯನಟ್ಟಿ ಬರಿಸಿ ಉll. ಸಾರಥಿಯಫೊಡಪ್ಪನನಗೀತನ ಪೋ ಪರೇವರಿನ್ ನರಂ ಬಾರನೆನುತ್ತ ತನ್ನ ರಥಮಂ ತರವೇತ್ತಿರದೆಯ ಘೋರ ಕಾಂ | ತಾರಮನೊಂದು ಬೇಗ ಪರಿವಂತು ರಥಂ ಪರಿದತ್ತು ವೈರಿ ಕಾಂ ತಾರಮನಸ್ವೀಲಂಕದ ಬೃಹಂದಳೆ ಚೋದಿಸೆ ಚೋದ್ಯಮಪ್ಪಿನಂ | ವ|| ಅಂತು ಕಿಚಿದಂತರಮಂ ಪೋಗವೋಗಚಂt ಕರಿಘಟಿ ನೀಳಮೇಘಘಟೆಯಂತ ತುರಂಗದಲಂ ಸಮುದ್ರದೊಳ್ ತರತರದಿಂದಮೇಟ್ಟಿ ತರೆಯಂತ ರಥಂ ಮಕರಂಗಳಂತಗು ರ್ವುರಿವರಿಯುತ್ತುಮಿರ್ಪಣಿ ಬೃಹದ್ಬಡಬಾನಳನಂತ ತೋಜಿ ಭೀ ಕರತರವಾದುದುತ್ತರನ ಕಣೆ ಸುಯೋಧನನಸಾಗರಂ || ಈಗಲೇ ತನ್ನಿರಿ ಎಂದು ಉತ್ತರಕುಮಾರನು ವಿಜೃಂಭಿಸಲು (ಜಂಬ ಕೊಚ್ಚಲು) ಅದೆಲ್ಲವನ್ನೂ ಅರ್ಜುನನು ಕೇಳುತ್ತಿದ್ದನು. ವ|| ತಕ್ಷಣವೇ ಬ್ರೌಪದಿಗೆ ದೂತರ ಮೂಲಕ ಸಮಾಚಾರವನ್ನು ಕಳುಹಿಸಿ ಬರಮಾಡಿದನು. ೯೭. 'ಮತ್ಯನ ಮಗನಾದ ಉತ್ತರನಿಗೆ ನನ್ನನ್ನು ಸಾರಥಿಯನ್ನಾಗಿ ಮಾಡು. ಅವನ ಶತ್ರುಸೇನಾಸಮುದ್ರವನ್ನು ನಾನು ಜಯಿಸಿ ಬಿಡುತ್ತೇನೆ ಎಂದು ಹೇಳಿದನು. ಬ್ರೌಪದಿಯು ಉತ್ತರನಿಗೆ ಹಾಗೆಯೇ ಬಂದು ತಿಳಿಸಿದಳು. ಯುದ್ಧರಂಗದಲ್ಲಿ ನಿನಗೆ ಸಾರಥಿಯಾಗಬೇಕಾದರೆ ಶಿಖಂಡಿಯೇ ಆಗಬಹುದು. ನಿನಗೆ ಸಮಾನರಾದ ಶೂರರಾಗಿದ್ದಾರೆ ? ಎಂದಳು. ವ|ಉತ್ತರನು ತನ್ನ ತಂಗಿಯಾದ ಉತ್ತರೆಯ ಮೂಲಕ ಸಮಾಚಾರವನ್ನು ಕಳುಹಿಸಿ ಬೃಹಂದಳೆಯನ್ನು ಬರಮಾಡಿದನು. ೯೮. ಸಾರಥಿಯಾಗುವುದಾದರೆ ಈತನೇ ಸಮರ್ಥ ಬಿಡು; ಇತರರು ಏನು ಮಾಡಿಯಾರು ? ಇನ್ನು ಯಾರ ಸಹಾಯವನ್ನೂ ನಾನು ಅಪೇಕ್ಷಿಸುವುದಿಲ್ಲ. ಎಂದು ಹೇಳುತ್ತ ತನ್ನ ತೇರನ್ನು ತರಹೇಳಿ ಸಾವಕಾಶಮಾಡದೆ ಹೊರಟನು. ಭಯಂಕರವಾದ ಕಾಡನ್ನು ಕಿಚ್ಚು ಆವರಿಸಿದ ಹಾಗೆ ಶೂರನಾದ ಬೃಹಂದಳೆಯು ಆಶ್ಚರ್ಯವಾಗುವ ಹಾಗೆ ತೇರನ್ನು ನಡೆಸಿದನು. ಶತ್ರುಗಳೆಂಬ ಕಾಡಿನ ಕಡೆಗೆ ತೇರು ಧಾವಿಸಿತು. ವll ಹಾಗೆ ಸ್ವಲ್ಪ ದೂರ ಹೋಗುತ್ತಲು ೯೯. ಆನೆಯ ಸಮೂಹವು ಕರಿಯ ಮೋಡಗಳ ಸಮೂಹದಂತೆಯೂ ಕುದುರೆಯ ಸೈನ್ಯವು ಸಮುದ್ರದಲ್ಲಿ ವಿಧವಿಧವಾಗಿ ಏಳುವ ಅಲೆಗಳಂತೆಯೂ ತೇರುಗಳು ಮೊಸಳೆಗಳಂತೆಯೂ ದೊಡ್ಡ ಕಿಚ್ಚಿನಂತೆ ಹರಿದುಬರುತ್ತಿರುವ ಪದಾತಿಸೈನ್ಯವು ದೊಡ್ಡ ಬಡಬಾಗ್ನಿಯಂತೆಯೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy