________________
೪೦೦ | ಪಂಪಭಾರತಂ' ಮುಂದಿಟ್ಟು ಪೋದರಿವನನಿರುಳೊಳೆ ಸಂಸ್ಕರಿಸಲ್ಬಟ್ಟುಮೆಂದು ಕೊಂಡುಪೋಷಾಗಳಾ ಕಳಕಳಮಂ ಭೀಮಸೇನ ಕೇಳವಂದಿರೊಡನೆ ರೂಪುಗರೆದು ಪೊಬಲಂ ಪೂಣಮಟ್ಟು ಬಸಿಡಿಲೆಂಗುವಂತೆ ನಿಜಭುಜಶಿಖರಾಸ್ಕಾಲನಂಗೆಯ್ದುಮll ವನಿತಾಹೇತುವೆ ಕೇತುವಾಯು ನಿಮಗಂ ಗಾಂಧರ್ವರಿಂದಿಂದು ನಿ
ಮ್ಯ ನಿಷೇಕಂ ನೆರೆದತ್ತು ಸತ್ತಿರೆನುತ್ತುಂ ಪೊಕ್ಕಾರ್ದು ಕಾಳಾಂಬುದ | ಧ್ವನಿಯಿಂ ಬಾಚಿಯ ಚೆಲ್ವನಪ್ಪ ಬನಮಂ ಕಾಡಾನೆ ಪೊಯ್ದಂತೆ ಪೂ
ಮೈನಿಸಂ ಮಾಣದೆ ನೀಚ ಕೀಚಕನಿಕಾಯ ಧ್ವಂಸನಂ ಮಾಡಿದಂ || ೮೦
ವಗಿ ಅಂತಳವಿಗತಿಯ ಕೊರ್ವಿದ ಕೀಚಕವನಮಲ್ಲಮೊಂದಿರುಳೊಳೆ ಸಾಹಸ ಭೀಮನುದ್ಧಾಮಕೊಪದವದಹನಜ್ವಾಲಾಸಹಸಂಗಳಿನಮಳ್ಳಿದಂತಪ್ಪುದುಂ ನೇಸಮ್ ಮೂಡಿದಾಗಳಾ ಪಡೆಮಾತನಿರ್ದರಿರ್ದಲ್ಲಿಯ ಕೇಳುಮ ಪಡಲಿಟ್ಟಂತೆವೊಲಾಯ್ತು ಕೀಚಕಬಲ೦ ಗಂಧರ್ವರಿಂದಿಂದಿರು
ಛಡಿದೇ ಸಂಗಡಮಿಬ್ರುವಾಯ್ಕೆ ಪಟವೆಲ್ಲಂಗಮೇನಾಗದಿಂ | ದುಡಿದತ್ತಾಗದೆ ಮತ್ನ ನೊಂದು ಬಲಗೆಯ್ಯಂದಕ್ಕಟಾ ಎಂಬುದು ನುಡಿಯಲ್ಮಾರ್ತರುಮಿಲ್ಲ ಪಾರದರದೂಳ್ ಸತ್ತಂಗಬಿನ್ನರಾರ್ || ೮೧ ಕಂtt ರಾವಣನುಂ ಗಡ ಸೀತಾ
ದೇವಿಗೆ ಸೋಲದ ಫಲಮನೆಯ್ದಿದನಿವನಾ | ರಾವಣನಿಂ ಪಿರಿಯನೆ ಪೇ ಆವುದೊ ಶುಚಿಯಲ್ಲದವನ ಗಂಡುಂ ತೂಂಡುಂ | - ೮೨
.
ಭೀಮಸೇನನು ಕೇಳಿ ಅವರ ಜೊತೆಯಲ್ಲಿಯೇ ಆಕಾರವನ್ನು ಮರೆಮಾಡಿಕೊಂಡು ಪಟ್ಟಣದಿಂದ ಹೊರಟು ಬರಸಿಡಿಲು ಮೇಲೆ ಬೀಳುವ ಹಾಗೆ ತನ್ನ ತೋಳುಗಳನ್ನು ತಟ್ಟಿಕೊಂಡು ೮೦. ನಿಮಗೂ ನಿಮಿತ್ತವೇ (ವಿಪತ್ಕಾರಕ) ಕೇತುಗ್ರಹವಾಯಿತು. ಗಂಧರ್ವರಿಂದ ಈ ದಿನ ಒಸಗೆ (ಮಂಗಳಕಾರ್ಯ-ತಕ್ಕಶಾಸ್ತಿಯಾಯಿತು. ಸರಿ; ಎನ್ನುತ್ತ ಪ್ರವೇಶಮಾಡಿ ಆರ್ಭಟಿಸಿ ಕಾಲಮೇಘದ ಧ್ವನಿಯಿಂದ ಸುಂದರವಾದ ಬಾಳೆಯ ತೋಟವನ್ನು ಕಾಡಾನೆಯು ನಾಶಮಾಡುವಂತೆ ಹೊಡೆದು ಸ್ವಲ್ಪವೂ ಬಿಡದೆ ನೀಚರಾದ ಕೀಚಕಸಮೂಹವನ್ನು ಧ್ವಂಸಮಾಡಿದನು. ವ! ಹಾಗೆ ಅಳತೆಯನ್ನು ಮೀರಿ ಕೊಬ್ಬಿದ ಕೀಚಕರೆಂಬ ಕಾಡೆಲ್ಲವನ್ನೂ ಒಂದೇ ರಾತ್ರಿಯಲ್ಲಿ ಸಾಹಸಭೀಮನು ಅತಿ ದೊಡ್ಡದಾದ ಕೋಪವೆಂಬ ಕಾಡುಗಿಚ್ಚಿನ ಸಾವಿರಾರು ಉರಿಗಳಿಂದ ನಾಶಪಡಿಸಿದಂತೆ ಆಗಲು ಸೂರ್ಯೋದಯವಾಯಿತು. ಆ ಸಮಾಚಾರವನ್ನು ಇದ್ದವರು ಇದ್ದಲ್ಲಿಯೇ ಕೇಳಿ ೮೧. ಕೀಚಕಸಮೂಹವು ರಾತ್ರಿ ಗಂಧರ್ವರಿಂದ ಚೆಲ್ಲಾಪಿಲ್ಲಿಯಾದ ಹಾಗಾಯಿತು. ಇದೂ ಸಾಮೂಹಿಕಮೃತ್ಯುವಾಯಿತಲ್ಲವೇ ? ಪರಸ್ತ್ರೀಗೆ ಅಳುಪಿದವನಿಗೆ ಏನುತಾನೆ ಆಗುವುದಿಲ್ಲ ? ಈ ದಿನ ವಿರಾಟನ ಬಲಗೈ ಮುರಿದುಹೋಯಿತಲ್ಲವೇ, ಅಯ್ಯೋ ಎಂದು ಹೇಳುವವರೂ ಇಲ್ಲವಲ್ಲಾ, ಹಾದರದಲ್ಲಿ ಸತ್ತವರಿಗೆ ಅಳುವವರಾರಿದ್ದಾರೆ ೮೨. ರಾವಣನೂ ಕೂಡ ಸೀತಾದೇವಿಗೆ ಮೋಹಿಸಿ ಅದರ ಫಲವನ್ನು ಹೊಂದಿದನು. ಇವನು ಆ ರಾವಣನಿಗಿಂತ ಹಿರಿಯನೆ ಹೇಳು. ಸ್ವಚ್ಛವಾದ