SearchBrowseAboutContactDonate
Page Preview
Page 398
Loading...
Download File
Download File
Page Text
________________ ಅಷಮಾಶ್ವಾಸಂ / ೩೯೩ ಕ೦ll ಇದೆ ಮದನಭವನಮಿಂತಿದೆ ಮದನಾಮೃತಮಿದುವೆ ಮದನನಾಯಕಮಿದೆ ಪೊ | ಮದನಮಹೋತ್ಸವ ಪದಮೆನಿ ಸಿದುದು ಕಟಾಕ್ಷೇಕ್ಷಣಂ ವಿಲೋಲೇಕ್ಷಣೆಯಾ || ಉll ಮಾಸಿದ ರೂಪು ನೋಡದೆ ಮಾಸಿದ ಚಿತ್ರದ ಹೆಣ್ಣ ರೂಪುಮಂ ಮಾಸಿಸ ನಾಡ ಮಾಸದಿಕೆಯಂ ಪಡೆದಪುದು ಕಂಡ ಕಣ್ಣಳೊಳ್ | ಸೂಸುವ ಮಾಚಿಯಿಂ ಪೋಗೆ ಪೊಣುವುದಂದವಿದೆಂತೆ ಕಾಯ್ದು ಕೈ ವೀಸುವ ಕಾವನಂದಮಿವಳೇಂ ಕುಲನಾರಿಯೊ ವಾರನಾರಿಯೋ || ೬೨ ಮಲ್ಲಿಕಾಮಾಲೆ || ಆವಳಷ್ಟೊಡಮಕ್ಕೆ ಪೋ ತಲೆಯಿಂದ ಪೋದೊಡಮಿಂದ ಮಾ ದೇವನಾರ್ತೆಡೆಗೋದೊಡಂ ಲಯಮಿಂದೆ ಬರ್ಪೊಡಮನ್ನುರಂ | ತೀವಿ ತಳಿವಳೀ ಕುಚಂಗಳನಂದಮರ್ದಪ್ಪಿ ಪೋ ಗಾವುಪಾಯದೊಳಾದೊಡಂ ನೆರೆದಲದಿನ್ನಿರೆನೀಕೆಯೊಳ್ | ೬೩ ವ|| ಎಂದು ಸೈರಂದ್ರಿಯಂ ನೋಡಿ ಸೈರಿಸಲಾಗಿದೆ ಸಿಂಹಬಲನಂತನಂಗಮತ್ತಮಾತಂಗ ಕೋಳಾಹಳೀಕೃತಾಂತರಂಗವಾಗಿ ತಮ್ಮಕ್ಷನನೀಕೆಯಾರ್ಗಂದು ಬೆಸಗೊಂಡೊಡಾತನ ಸೋಲ್ಲ ಕಣತಿದೀಕೆ ಸಾಮಾನವನಿತೆಯಲಿವಳ್ ಗಂದರ್ವವನಿತೆಯೆನೋಳಾದ ಮಚುಂ ಮೋಹಮುಂ ಕಾರಣಮಾಗಿರ್ಪಳೆಂಬುದುಮಾ ಮಾತಿನೊಳ ಬೇಟಮಗಳಿಗೆ ನಿಜನಿವಾಸಕ್ಕೆ ಬಂದಕನೆನಗೆ ಈಕೆಯ ಉಸುರಿನ ಗಾಳಿಯ ವಾಸನೆಯನ್ನೂ ಹೇಗೆ ರಕ್ಷಿಸಲಿ ? ೬೧. ಈ ಚಂಚಲಾಕ್ಷಿಯ ಕಡೆಗಣ್ಣಿನ ನೋಟವೇ ಮದನಭವನ, ಇದೇ ಮದನಾಮೃತ, ಇದೇ ಮದನಬಾಣ. ಇದೇ ಮದನಮಹೋತ್ಸವದ ಸ್ಥಾನ ಎನಿಸಿತು. ೬೨. ನೋಡುವು ದಾದರೆ ಇವಳ ಮಲಿನವಾದ ರೂಪವು ಅರ್ಧಕೊಳೆಯಾದ ಚಿತ್ರದಲ್ಲಿರುವ ಸುಂದರ ವಾದ ಹೆಣ್ಣಿನ ರೂಪವನ್ನು ಮಸುಳಿಸುವಂತಿದೆ. ಇವಳ ಕಣ್ಣಿನಲ್ಲಿ ಹೊರಸೂಸುವ ಸೌಂದರ್ಯವನ್ನು ನೋಡಿದರೆ ಕೆರಳಿ ಕೈಬೀಸಿ ಮನ್ಮಥನೇ ವಿಲಾಸದಿಂದ ಜಗಳಕ್ಕೆ ಕೈಬೀಸುವಂತಿದೆ. ಇವಳೇನು ಕುಲಸ್ತೀಯೋ ಅಥವಾ ವೇಶ್ಯಾಸ್ತೀಯೋ ? ೬೩. ಯಾವಳಾದರೂ ಆಗಲಿ ಈ ದಿನವೇ ತಲೆಹೋದರೂ ಮಹಾದೇವನೇ ಸಮರ್ಥವಾಗಿ ಮಧ್ಯ ಪ್ರವೇಶಿಸಿದರೂ ಈ ದಿನವೇ ನಾಶವುಂಟಾದರೂ ನನ್ನ ಎದೆ ತುಂಬಿ ಸೇರಿದ ಇವಳ ಮೊಲೆಗಳನ್ನು ಗಟ್ಟಿಯಾಗಿ ಆಲಿಂಗನ ಮಾಡಿಕೊಂಡು ಯಾವ ಉಪಾಯದಿಂದಲಾದರೂ ಈಕೆಯಲ್ಲಿ ಕೂಡಿಯಲ್ಲದೆ ಇರುವುದಿಲ್ಲ. ವll ಎಂದು ಸೈರಂದ್ರಿಯರನ್ನು ನೋಡಿ ಸಹಿಸಲಾರದೆ ಸಿಂಹಬಲನು ಮನ್ಮಥನೆಂಬ ಮದ್ದಾನೆಯಿಂದ ಹಿಂಸಿಸಲ್ಪಟ್ಟ ಮನಸ್ಸುಳ್ಳವನಾಗಿ ತಮ್ಮ ಅಕ್ಕನನ್ನು ಈಕೆ ಯಾರವಳು ಎಂದು ಪ್ರಶ್ನೆಮಾಡಿದನು. ಸುದೇಷ್ಟೆಯು ಅವನ ಮೋಹಪರವಶವಾದ ಕಣ್ಣನ್ನು ತಿಳಿದು ಈಕೆಯು ಸಾಮಾನ್ಯಸ್ತೀಯಲ್ಲ, ಇವಳು ಗಂಧರ್ವಪತ್ನಿ ; ನನ್ನಲ್ಲಾದ ಮೆಚ್ಚಿಗೆ ಯಿಂದಲೂ ಪ್ರೀತಿಯಿಂದಲೂ ಇಲ್ಲಿ ಇದ್ದಾಳೆ ಎಂದಳು. ಆ ಮಾತಿನಿಂದ ಅವನಿಗೆ ಪ್ರೀತಿಯೂ ಮೋಹವೂ ಮತ್ತೂ ಅಧಿಕವಾಯಿತು. ತನ್ನ ಮನೆಗೆ ಬಂದು ಅಕ್ಕನನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy