SearchBrowseAboutContactDonate
Page Preview
Page 392
Loading...
Download File
Download File
Page Text
________________ ೩೮೮) ಪಂಪಭಾರತಂ ವll ಎಂದು ಯುಧಿಷ್ಠಿರಂ ನಿಷ್ಠಿತಕಾರ್ಯಮನನನುಷ್ಠಿಸೆ ನಿಜ ಪರಿಜನಮಲ್ಲಮನೀ ಯೋಂದು ವರುಷಮುಂ ನಿಮ್ಮ ನಿಮ್ಮ ಬಲಂದದೊಳಿರಿಮೆಂದು ಧಮಸಮೇತಂ ಪೋಗಲೇಬು ತಮ್ಮಯ್ಯರುಂ ಪಾಂಚಾಳಿವೆರಸು ಪೋದ ದೆಸೆಯನಾರುಮತಿಯದಂತು ದೃತವನಮಂ ಪೊಅಮಟ್ಟು ಜಗುನೆಯಂ ಪಾಯು ಮೂಡಮೊಗದೆ ಪಯಣಂಬೋಗಿ ಮತ್ಸ ದೇಶಮಂ ಪುಗುತಂದರದಂತಪ್ಪು ದಂಡಕಂ|| ಇಂಚೆಯ ಪಸವಿನ ಬಜದ ಕ ಇಂಚಿನ ಡಾವರದ ಬಾಧೆಯಿಲ್ಲದ ಪದದೊಳ್ || ಮುಂಚದ ಪಿಂಚದೆ ಬಳೆದು ವಿ ರಿಂಚಿಯ ಕೆಮ್ಮಿಡಿವೊಲಾದುವಾ ನಾಡೂರ್ಗಳ್ || ವ|| ಆ ನಾಡಂ ನಾಡಾಡಿಯಲ್ಲದೆ ಮಚ್ಚುತ್ತುಂ ಬಂದುಕಂ|| ಧ್ವನದಳಿಕುಳಾಕುಳೀಕೃತ ವನಂಗಳಿಂದೆಸೆವ ಪದಷಂಡಂಗಳ ಚ | ಲೈನೊಳಂ ಕಣ್ಣಂ ಮನಮುಮ ನನುವಿಸುವ ವಿರಾಟಪುರಮನೆಯೀದರವರ್ಗಳ್ || ವ|| ಅಂತೆಯೆವಂದು ತಮ್ಮ ದಿವಾಯುಧಂಗಳನೆಲಮನಾ ಪುರೋಪವನದ ಒತವನದ ಕೆಲದ ಶಮಿವೃಕ್ಷದ ಮೇಲೆ ಪುರುಷಾಕೃತಿಯಾಗಿ ನೇಲ್ಕಟ್ಟ ಕೆಲದ ಪಣಂಗಳೆಲ್ಲಮನವು ಆಶ್ರಯವಾಗಿರುತ್ತದೆ. ನಮ್ಮ ಶತ್ರುವಾದ ಕೌರವನಿಗೆ ಮತ್ಯರಾಜನು ಶತ್ರು; ಆದುದರಿಂದ ಅಜ್ಞಾತವಾಸದ ವಿಷಯವಾಗಿ ಯೋಚಿಸುವುದಾದರೆ ಇದಕ್ಕಿಂತ ಉತ್ತಮವಾದ ಸ್ಥಳವಿಲ್ಲ. ಆದುದರಿಂದ ಯಾರಿಗೂ ತಿಳಿಯದಂತೆ ವೇಷವನ್ನು ಮರೆಸಿಕೊಂಡು ವಿರಾಟಪುರವನ್ನು ಪ್ರವೇಶಿಸಿ ಆ ಅಜ್ಞಾತವಾಸವನ್ನು ಕಳೆಯೋಣ' ವು ಎಂದು ಧರ್ಮರಾಯನು ಮಾಡಬೇಕಾದ ಕಾರ್ಯವನ್ನು ಸೂಚಿಸಿ ತನ್ನ ಪರಿವಾರದವರನ್ನೆಲ್ಲ ಈ ಒಂದು ವರ್ಷ ಕಾಲ ನಿಮಗೆ ತಿಳಿದ ರೀತಿಯಲ್ಲಿ ಇರಿ ಎಂದು ಭೌಮ್ಯನೊಡನೆ ಕಳುಹಿಸಿದನು. ತಾವೈದು ಜನರೂ ಬ್ರೌಪದಿಯೊಡಗೂಡಿ ತಾವು ಹೋದ ದಿಕ್ಕನ್ನು ಯಾರೂ ತಿಳಿಯದಂತೆ ದೈತವನದಿಂದ ಹೊರಟು ಯಮುನಾನದಿಯನ್ನು ದಾಟಿ ಪೂರ್ವಾಭಿಮುಖವಾಗಿ ಪ್ರಯಾಣಮಾಡಿ ಮತ್ಯದೇಶವನ್ನು ಪ್ರವೇಶಮಾಡಿದರು. ಅದು ಹೇಗಾಯಿತೆಂದರೆ-೫೧. ಆ ನಾಡಿನ ಊರುಗಳು ಹಿಂಸೆ, ಕ್ಷಾಮ, ಬರ, ಮೋಸ, ಕ್ಲೋಭೆ ಇವುಗಳ ಉಪದ್ರವವಿಲ್ಲದ ಸ್ಥಿತಿಯಲ್ಲಿ ಯಾವ ಹೆಚ್ಚ ಕಡಿಮೆಯಿಲ್ಲದೆ, ಏಕಪ್ರಕಾರವಾಗಿ ಅಭಿವೃದ್ದಿಯಾಗಿ ಬ್ರಹ್ಮನ ಕೈಗನ್ನಡಿಯ ಹಾಗಿದ್ದುವು. ವ|| ಆ ದೇಶವನ್ನು ಅಸಾಧಾರಣವಾಗಿ ನೋಡುತ್ತ ಬಂದು, ೫೨. ಶಬ್ದಮಾಡುತ್ತಿರುವ ದುಂಬಿಗಳ ಸಮೂಹದಿಂದ ಆವರಿಸಲ್ಪಟ್ಟ ತೋಟಗಳಿಂದ ಪ್ರಕಾಶಿಸುವ, ಸರೋವರಗಳ ಸೌಂದರ್ಯದಿಂದ ಮನಸ್ಸಿಗೆ ಸಂತೋಷವನ್ನುಂಟು ಮಾಡುವ ವಿರಾಟಪುರವನ್ನು ಅವರು ಬಂದು ಸೇರಿದರು. ವ|| ತಮ್ಮ ದಿವ್ಯಾಯುಧಗಳೆಲ್ಲವನ್ನೂ ಆ ಪಟ್ಟಣದ ಸಮೀಪದ ಶಶಾನದ ಪಕ್ಕದಲ್ಲಿದ್ದ ಬನ್ನಿಮರದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy