SearchBrowseAboutContactDonate
Page Preview
Page 390
Loading...
Download File
Download File
Page Text
________________ ಅಷ್ಠಮಾಶ್ವಾಸಂ | ೩೮೫ ಕೃತಾಂತನಂತಾಕಾರವಾಗಿ ತಟತಟಿಸಿ ಪೊಳೆವ ಕತ್ತಿಗೆಯುಂ ಬೆರಸು ಪೂಣಮಟ್ಟು ಕೀರ್ತಿಗೆ ಯಂಬುಗದೇವತೆ ಬೆಸಸು ಬೆಸಸೆಂದು ಬೆಸನಂ ಬೇಡೆ ಪಾಂಡವರನೆಲ್ಲಿಕೊಡು ಕೊಲ್ಲೆಂದೊಡಂತೆ ಗಯ್ಯನೆಂದು ಪೋಗಲ್ಲಿಯುಮನಿಸಿ ಕಾಣದೆ ಕೊಳನ ತಡಿಯೊಳ್ ಬಿಟ್ಟಿರ್ದ ನಾಲ್ವರುಮಂ ಕಂಡು ಬಾಪ್ಪು ಬದನೆಂದು ತಿನ ಸಾರ್ವಾಗಳವರ್ಗಳನಿತಂ ಮಾಡಿದ ದೈವಂ ಪ್ರತ್ಯಕ್ಷವಾಗಿ ಗಜ ಗರ್ಜಿಸುತ್ತುಂ ಬಂದುಕಂ|| ಎಲೆ ಏಳೆತಿನಿ ಪೋ ಮುಟ್ಟಿದೆ ತೊಲಗೀ ನಾಲ್ವರ್ಕಳಸುವನವರ್ಗಳ ಮಲ್ಕಂ | ತೊಲಗಿಸಿ ಮುನ್ನಮೆ ಕಾದಿ ರ್ದಲಂಘಬಲನೆನಿಸಿದನಗೆ ನೀನಗಳಮೇ || ವಅದಲ್ಲದಯುಂ ನೀನೆ ಜಾತಿದೇವತೆಯನ್ನೊಡೆನ್ನೆಂಜಲನೆಂತು ತಿಂಬೆಯೆಂಬುದುಂ ಪಾಂಡವರ್ ಮುನ್ನಮೆ ನಿನ್ನ ಕೆಯ್ದ ವಂದರೆನಗಮಾ ಬೆಸಂ ತಪ್ಪಿದುದಾನಾರಂ ತಿಂಚೆಂ ಪೇಜನ ನಿನ್ನನಾವನೊರ್ವನಕಾರಣಂ ಪುಟ್ಟಿಸಿದನಾತನನೆ ತಿನ್ನೆಂಬುದುಮಂತಗೆಯ್ದನೆಂದು ಪೋಗಿಕಂ! ಕನಕನ ಬೇಳೆ ತಗುಳುದು ಕನಕನನೆಂಬೊಂದು ಮಾತು ಧರೆಗೆಸೆಯ ಸುಯೋ | ಧನನ ಪುರೋಹಿತನಪ್ಪಾ ಕನಕಸ್ವಾಮಿಯನೆ ಮುನಿದು ಕೀರ್ತಿಗೆ ತಿಂದಳ್ || (ಇವುಗಳಿಂದ ಕೂಡಿ) ಯಮನ ಹಾಗಿರುವ ಸ್ವರೂಪವೂ ಇವುಗಳನ್ನು ತಾಳಿ ಥಳಥಳನೆ ಹೊಳೆಯುತ್ತಿರುವ ಕತ್ತಿಯಿಂದ ಕೂಡಿ ಹೊರಟು ಕೀರ್ತಿಗೆಯೆಂಬ ಒಂದು ಭಯಂಕರವಾದ ದೇವತೆಯು ನಾನು ಏನು ಮಾಡಬೇಕೆಂಬುದನ್ನು ಅಪ್ಪಣೆಕೊಡು' ಎಂದು ತಾನು ಮಾಡಬೇಕಾದ ಕಾರ್ಯವನ್ನು ಬೇಡಿತು. 'ಪಾಂಡವರೆಲ್ಲಿ ಹೊಕ್ಕಿದ್ದರೂ ಕೊಲ್ಲು' ಎಂದು ಆಣತಿಯಿತ್ತನು. ಹಾಗೆಯೇ ಮಾಡುತ್ತೇನೆ ಎಂದು ಹೋಗಿ ಹುಡುಕಿ ಎಲ್ಲಿಯೂ ಕಾಣದೆ ಕೊಳದ ದಡದಲ್ಲಿ ಬಿದ್ದಿದ್ದ ನಾಲ್ವರನ್ನೂ ಕಂಡು 'ಶಹಭಾಸ್ ಬದುಕಿದೆನು' ಎಂದು ತಿನ್ನುವುದಕ್ಕೆ ಬಂದಾಗ ಅವರುಗಳಿಗೆ ಆ ಸ್ಥಿತಿಯನ್ನುಂಟು ಮಾಡಿದ ದೈವವು ಎದುರಿಗೆ ಕಾಣಿಸಿಕೊಂಡು ರೇಗಿ ಆರ್ಭಟಮಾಡುತ್ತ ಬಂದು ಹೇಳಿತು. ೪೩. ಎಲೆ ಪಿಶಾಚಿ, ತೋಲಗಿಹೋಗು. ಈ ನಾಲ್ಕು ಜನದ ಪ್ರಾಣವನ್ನು ಅವರ ಶರೀರದಿಂದ ತೊಲಗಿಸಿದ ಮೊದಲಿಂದ ಕಾದಿರುವ, ಮೀರುವುದಕ್ಕಾಗದ ಶಕ್ತಿಯುಳ್ಳವನೆನಿಸಿಕೊಂಡಿರುವ ನನಗೆ ನೀನು ಹೆಚ್ಚಿನವಳೇ? ವ ಹಾಗೆಲ್ಲಿಯೂ “ನೀನು ಉತ್ತಮಜಾತಿಯ ದೇವತೆಯೇ ಆಗಿದ್ದ ಪಕ್ಷದಲ್ಲಿ ನನ್ನ ಎಂಜಲನ್ನು ಹೇಗೆ ತಿನ್ನುತ್ತೀಯೆ' ಎಂದಿತು. ಪಾಂಡವರು ಮೊದಲೇ ನಿನ್ನ ಅಧೀನರಾದವರು ಆದುದರಿಂದ ನಾನು ಮಾಡಬೇಕಾದ ಆ ಕಾರ್ಯವು ತಪ್ಪಿಹೋಯಿತು. ನಾನು ಈಗ ಯಾರನ್ನು ತಿನ್ನಲಿ ಹೇಳು ಎಂದು ಕೇಳಿದಳು. ನಿನ್ನನ್ನು ಯಾವನು ಅಕಾರಣವಾಗಿ ಹುಟ್ಟಿಸಿದನೋ ಅವನನ್ನೇ ತಿನ್ನು ಎಂದು ಹೇಳಲು ಹಾಗೆಯೇ ಮಾಡುತ್ತೇನೆ ಎಂದು ಹೋಗಿ ೪೪. 'ಕನಕನ ಯಜ್ಞಕನಕನ ಬೆನ್ನನ್ನೇ ಅಂಟಿತು' ಎಂಬ ಒಂದು ಮಾತು ಭೂಮಿಯಲ್ಲಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy