SearchBrowseAboutContactDonate
Page Preview
Page 39
Loading...
Download File
Download File
Page Text
________________ ೩೪ | ಪಂಪಭಾರತಂ ಅವನ ಕೆಲವು ಸಮಾಸಪದ: ತು ಬಹುದೀರ್ಘವಾಗಿ ಅರ್ಥಕ್ಕೆ ತೊಡಕನ್ನುಂಟು ಮಾಡಿ ಉಚ್ಚಾರಣೆಗೂ ಕಷ್ಟವಾಗುವುವ, ಲಘುವಾಗಿ ಸರಳವಾಗಿದ್ದಾಗ ಅರ್ಥಪೂರ್ಣವೂ ಸುಶ್ರಾವ್ಯವೂ ಆಗಿರುತ್ತವೆ. 'ಬಾಣಾಸನ ಬಾ» ಪಾಣಿ ಕರ್ಣ೦ ಬಂದಂ' 'ಕಷ್ಟಂ ದುಃಖಾನಿಳಪರಿ ಪುಷ್ಟಂ' 'ಸಂಸ್ಕೃತಿ ಭೋಗಂಗಳ್ ಭೋಗಿ ಭೋಗದಿಂ ವಿಷಮಂಗಳ' ಹಿಂದೆಯೇ ತಿಳಿಸಿರುವಂತೆ ಪಂಪನ ಹಿರಿಮೆ ಅವನ ವಿವಿಧ ರೀತಿಯ ವರ್ಣನೆಗಳು. ಅವನ ಅನ್ಯಾದೃಶವಾದ ಲೋಕಾನುಭವವೇ ಇದಕ್ಕೆ ಕಾರಣ. ತನ್ನ ಕಾಲದ ಎಲ್ಲ ಕ್ಷೇತ್ರಗಳ ವಿವಿಧ ಪರಿಚಯವೂ ಅವನಿಗಿದೆ. ಆದುದರಿಂದಲೇ ಅವನು ಪರಮಾಣುವಿನಿಂದ ಪರಮೇಶ್ವರನವರೆಗೆ ಯಾವುದನ್ನಾದರೂ ಪ್ರತ್ಯಕ್ಷೀಕರಿಸಬಲ್ಲ. ಸಾಸಿವೆಯಲ್ಲಿ ಸಾಗರವನ್ನು ತುಂಬಲು ಬಲ್ಲ. ಮಧುವನ್ನು ಮೇರುವಾಗಿಸಲೂ ಬಲ್ಲ. ವ್ಯಕ್ತಿ, ಸನ್ನಿವೇಶ, ಋತು, ಬೇಟೆ, ವೇಶ್ಯಾವಾಟಿ, ಪಾನಗೋಷ್ಠಿ, ಯುದ್ಧ ಮೊದಲಾದ ಯಾವುದರ ವರ್ಣನೆಯಾದರೂ ಮೂರ್ತಿಮತ್ತಾಗಿ ಎದುರಿಗಿರುವಂತೆ ಭಾಸವಾಗುವುದು. ಮಯನನ್ನು ಸನ್ಮಾನಿಸಿ ಕಳುಹಿಸಿದನಂತರ ಧರ್ಮಪುತ್ರನು ತನ್ನ ನಾಲ್ವರು ತಮ್ಮಂದಿರೊಡಗೂಡಿ ಓಲಗಗೊಂಡಿರುವಾಗ ಇಂದ್ರಲೋಕದಿಂದ ಬಂದ ನಾರದರ ಚಿತ್ರವಿದು. ಸರಿಗೆಯೋಳ್ ಸಮೆದಕ್ಷಮಾಲಿಕೆ, ಪೊನ್ನ ಮುಂಜಿ, ತೋಳಪ್ಪ ಕ ಪುರದ ಭಸರಜನಿಪುಂಡಕಮೊದ್ರೆ, ಪಿಂಗಜಟಾಳಿ ತಾ ವರೆಯ ಸೂತ್ರದೊಳಾದ ಜನವಿರಂ, ದುಕೂಲದ ಕೋವಣಂ ಕರಮೊಡಂಬಡೆ ನೋಟಕರ್ಕಳನಾ ತಪಸ್ವಿ ಮರುಳಿದಂ || ಹಾಗೆಯೇ ಪಾಶುಪತಾಸ್ತವನ್ನು ಪಡೆಯುವುದಕ್ಕಾಗಿ ತಪಸ್ಸು ಮಾಡುತ್ತಿರುವ ಸೌಮ್ಯ ಭಯಂಕರನಾದ ಅರ್ಜುನನ ಚಿತ್ರ ಮತ್ತೂ ಸ್ಪಷ್ಟವಾಗಿದೆ. ಅದಿರದ ಚಿತ್ತಂ, ಅಳ್ಳದ ಮನಂ ಬಗೆಗೊಳ್ಳದೆ ಮೋಹಂ, ಎತ್ತಿದ ಕ ಟಿದ ಜಡೆ, ತೊಟ್ಟ ರತ್ನಕವಚಂ, ಕೊರಳೊಳ್ ಸಲೆ ಕೊದ ಬಿಲ್ ಪ್ರಯ ಇದೆ ಬಿಗಿದಿರ್ದೆರಣೆ ಮಿಸುಪ್ಪಸಿಖೇಟಕಂ, ಅಂತವೊಂದುಗುಂ ದದೆ ನಿಲೆ ನೋಟ್ಟಿ ನೋಟಕರ್ಗೆ ಸೌಮ್ಯಭಯಂಕರನಾದನರ್ಜುನಂ || ಪಂಪನ ಸನ್ನಿವೇಶಚಿತ್ರಗಳೂ ಹೀಗೆಯೇ. ವಾಚಕರ ಮುಂದೆ ಪ್ರತ್ಯಕ್ಷವಾಗಿ ಬಂದು ನಿಲ್ಲುವುವು. ಏಕಚಕ್ರಪುರದಲ್ಲಿ ಸುರನಿಗೆ ಆಹಾರವನ್ನು ಕಳುಹಿಸುವುದಕ್ಕೆ ಜನಗಳಿಲ್ಲದೆ ವ್ಯಸನ ಪಡುತ್ತಿರುವ ಬ್ರಾಹ್ಮಣನ ಮನೆಯ ದೃಶ್ಯ ಎಷ್ಟು ಹೃದಯ ವಿದ್ರಾವಕವಾಗಿದೆ! ಅಬಕುಡಲಾದ ಕೂಸು ನಲದೋಳ್ ಪೊರಳುತ್ತಿರೆ, ಧರ್ಮಪತ್ನಿ ಬಾ ಯಳೆದು ಕೊರಲೆ ಪಾಯು ಪರಿದಾಡುವ ಬಾಲಕನಾದ ಶೋಕದಿಂ ಗಟಗಟ ಕಣ್ಣನೀರ್ ಸುರಿಯ, ಚಿಂತಿಪ ಪಾರ್ವನ ಶೋಕದೊಂದು ಪೋಂ ಪುತಿಯನೆ ನೋಡಿ ನಾಡ ಕರುಣಂ ತನಗಾಗಿರೆ ಕೊಂತಿ ಚಿಂತೆಯಿಂ 1
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy