SearchBrowseAboutContactDonate
Page Preview
Page 384
Loading...
Download File
Download File
Page Text
________________ ಆಪ್ತಮಾಶ್ವಾಸಂ / ೩೭೯ ಚoil ತೊಲಗನೆ ಬಟ್ಟೆಯಿಂ ತೊಲಗಲಾಜನಶಕ್ತನೆನಾರ್ಪೊಡೆನ್ನನಿನ್ ತೊಲಗಿಸಿ ಪೋಗು ನೀನೆನೆ ವೃಕೋದರನೊಯ್ಯನೆ ನಕ್ಕು ಬಾಲಮಂ | ಸಲೆ ಮುರಿದೆತ್ತಲಾಟಸ್ ಧರಿತ್ರಿಗೆ ಕೀಲಿಸಿದಂತುವಾಗೆ ದೋ ರ್ವಲದ ಪೊಡರ್ಪುಗೆಟ್ಟು ನಡೆ ನೋಡಿ ಮರುತ್ತುತನಂ ಮರುತ್ತುತಂ || ೩೨ ಕಂil ನೀನಮ್ಮಣ್ಣನ ವಂಶದ ವಾನರನಲ್ಲ ವಲಂ ಮಹಾಬಲ ಪೇಚಿ | ಕೀ ನಗದೂಳಿರ್ದೆಯೆನೆ ತ ದ್ವಾನರನಂರ್ತು ಭೀಮನೆಂಬಂ ನೀನೇ ೩೩ ವ|| ಎಂಬುದುಮಪ್ಪೆನೆಂದೊಡೆ ನಿಮ್ಮಣ್ಣನಪ್ಪಣುವನೆ ನಾನಪ್ಪನೆಂದು ಪೇಟ್ಟುದುಮಾಗಳ್ ಸಾಷ್ಟಾಂಗಮನಿಗಿ ಪೊಡವಟ್ಟ ಭೀಮಸೇನನಂ ಪರಸಿಕಂ|| ಎನ್ನಂತಪೊಡವುಟ್ಟಿದ ರಿನ್ನಿನಗೊಳರಾಗಲಹಿತರಿದಿರಾಂಪರೆ ಪೇಮ್ | ನಿನ್ನಂ ಪಗೆವರ ಬೇರೋಳ್ . ಬೆನ್ನೀರಂ ಪೊಯ್ತು ನಿನಗೆ ಮಾಂ ಧರೆಯಂ || ತರಲು ಹೋಗಿ ೩೧. ಸಾಹಸವನ್ನು ಪ್ರದರ್ಶಿಸಿ ಕುಬೇರನ ಅರವತ್ತು ಕೋಟಿ ಭಟರನ್ನು ಬಹಳ ರೌದ್ರವೂ ಭಯಂಕರವೂ ಆಗಿರುವ ರೀತಿಯಲ್ಲಿ ಕೊಂದು ಸುಗಂಧದಿಂದ ಕೂಡಿದ ಚಿನ್ನದ ಕಮಲಗಳನ್ನು ಅಪಹರಿಸಿಕೊಂಡು ಬಂದನು. ೩೨. ಮತ್ತು ಜಟಾಸುರನೆಂಬ ರಾಕ್ಷಸನನ್ನು ಆ ಪರ್ವತದ ಗುಹೆಯಲ್ಲಿ ಸೀಳಿ ಚೆಲ್ಲಾಪಿಲ್ಲಿ ಮಾಡಿ ಅಲ್ಲಿ ಕೆಲವು ದಿವಸವಿದ್ದನು. ಒಂದು ದಿವಸ ಒಬ್ಬನೇ ಬೇಟೆಗಾಗಿ ಅಲ್ಲಿಂದ ಹೊರಟು ದಾರಿಯ ಎದುರಿಗೆ ಅಡ್ಡಲಾಗಿ ಬಿದ್ದಿದ್ದ ಮುದಿಕಪಿಯನ್ನು ಕಂಡು 'ದಾರಿ ಯಿಂದ ತೋಲಗು' ಎಂದನು. ಅದಕ್ಕೆ ಆ ಕಪಿಯು ತೊಲಗಲಶಕ್ತನಾಗಿದ್ದೇನೆ. ನಿನಗೆ ಸಾಮರ್ಥ್ಯವಿದ್ದರೆ ನೀನೇ ನನ್ನನ್ನು ತೊಲಗಿಸಿ ಹೋಗು' ಎಂದಿತು. ಭೀಮನು ಹುಸಿನಗೆ ನಕ್ಕು ಬಾಲವನ್ನು ಚೆನ್ನಾಗಿ ಬಗ್ಗಿಸಿ ಎತ್ತಲು ಪ್ರಯತ್ನಿಸಿದರೂ ಭೂಮಿಗೆ ಬೆಸೆದಿರು ವಂತಿರಲು ತನ್ನ ಬಾಹುಬಲದ ಸಾಮರ್ಥ್ಯವು ನಾಶವಾಯಿತೇ ವಿನಾ ಭೀಮಸೇನನು ಆ ವಾನರನ ಬಾಲವನ್ನು ಅಲುಗಿಸಲೂ ಆಗಲಿಲ್ಲ. ಆಗ ಆಂಜನೇಯನನ್ನು ದೀರ್ಘ ವಾಗಿ ನೋಡಿ ೩೩. 'ನೀನು ನಿಜವಾಗಿಯೂ ನಮ್ಮಣ್ಣನಾದ ವಾಯುಪುತ್ರನೇ (ಆಂಜನೇಯನೇ) ಅಲ್ಲವೇ ? ಪರಾಕ್ರಮಶಾಲಿಯೇ ಏಕೆ ಈ ಪರ್ವತದಲ್ಲಿದ್ದೀಯೆ ಎಂಬುದನ್ನು ಹೇಳು' ಎಂದು ಕೇಳಿದನು. ಆ ವಾನರನು ಪ್ರೀತಿಸಿ ನೋಡಿ ಓಹೋ ಭೀಮನೆಂಬುವವನು ನೀನೆಯೊ ವ|ಎನ್ನಲು 'ಭೀಮನು ನಾನು' ಎಂದನು. ಹೌದು, ಹಾಗಾದರೆ ನಿಮ್ಮಣ್ಣನಾದ ಹನುಮಂತನು ನಾನೆಂಬುದೂ ಸತ್ಯ ಎಂದನು, ಆಗ ಸಾಷ್ಟಾಂಗ ನಮಸ್ಕಾರಮಾಡಿದ ಬೀಮನನ್ನು ಆಂಜನೇಯನು ಹರಸಿದನು. ೩೪. ನನ್ನಂತಹ ಸಹೋದರರು ನಿನಗೆ ಇನ್ನೂ ಇರುವಾಗ ಶತ್ರುಗಳಾದವರು ನಿನ್ನನ್ನು ಪ್ರತಿಭಟಿಸಲು ಶಕ್ತರಾಗುತ್ತಾರೆಯೇ. ನಿನ್ನನ್ನು ದ್ವೇಷಿಸುವವರ ಬೇರಿನಲ್ಲಿ ಬಿಸಿನೀರನ್ನು - 25
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy