SearchBrowseAboutContactDonate
Page Preview
Page 379
Loading...
Download File
Download File
Page Text
________________ ೩೭೪ | ಪಂಪಭಾರತಂ ಚಂ| ಕೆದಾ ಚತುರ್ಬಲಂ ಬೆದ ತಳ ದಟಂ ಕೆಡೆದಟ್ಟಿ ತಟ್ಟೆ ಮಾ ಣದೆ ಪೆಂಗಿಟ್ಟು ಬಾಯ್ಲೆಡೆ ಘಟಾಳಿ ಗುರ್ಣಾವನಂಬು ಲಕ್ಕಲೆ | ಕದೆ ಕೊಳೆ ಚಾತುರಂಗಬಲಮಂತಳದ ಕನಲ್ಲೊನಲು ಮಾ ಣದೆ ಪಣದಂ ಹರಂ ದಿಗಿಭದೊಳ್ ದಿಗಿಭಂ ಪಡೆವಂತೆ ಪಾರ್ಥನೊಳ್ || ೨೧ ವ|| ಅಂತು ಶೂನ್ಯಹಸ್ತದೊಳಿರ್ವರುಂ ಪೆಣೆದು ಪಲವುಂ ಗಾಯದೊಳಾಯಂದಪ್ಪದೆ ಪಿರಿದುಂ ಪೋಟ್ಟು ಸಂತರ್ಪಿನಂ (?) ಪೋರ ದೇವರೆಲ್ಲರುಮಂಬರತಳದೊಳಿರ್ದು ತಮ್ಮ ನೋಂತೆ (? ನೋಡಿಕಂ|| ಇಕ್ಕಿದನಭವಂ ಪಾರ್ಥನ ನಿಕ್ಕಿದನಾ ತ್ರಿಪುರಹರನನರ್ಜುನನನೆ 1 | ಲಕ್ಕೆ ಮುಡಿಗಿಕ್ಕುವಂತವೂ ಲಿಕ್ಕಿದನವಯವದ ನೆಲದೊಳರಿಗಂ ಹರನಂ || ೨೨ ವ|| ಅಂತು ನೆಲಕ್ಕಿಕ್ಕಿ ಗಂಟಲಂ ಮೆಟ್ಟಿದಾಗಕull ಪೊಜಕಣ್ಣಂ ಮುನ್ನಂ ತಾಂ ಮಣಿಸಿದ ನೊಸಲೊಂದು ಕಣ್ಣುಮಾಗಳ್ ನೊಸಲಿಂ | ಪೊಣಮಟ್ಟಂತಿರೆ ತೊಳೆದ ನೆಲಕದ ಹರಿಗಂಗೆ ರುದ್ರನಗ್ನಳಗಣ್ಣಂ || ಉರದೊಳ್ ಫಣಿ ಕರದೋಳ್ ಬಿಲ್ ಶಿರದೊಳ್ ತೊ ತೋ ತಿಯ ಕೆಲದೊಳೆಸೆದಿರೆ ಪತಿ ಮುಂ | ಗೊರಲೊಳ್ ಕಣ್ ಮಜಟೆಯಿಲ್ಲದ ದೊರೆಕೊಳೆ ಮೃಡನಡಿಗೆ ಹರಿಗನೆಂಗಿದನಾಗಳ್ | ೨೪ ಆಕಾರವನ್ನು ತಾಳಿ ಭಯವಿಲ್ಲದೆ ಬಂದು ತಾಗಿದನು. ೨೧. ಚತುರಂಗಸೈನ್ಯವು ಚದುರಿತು. ನೆರೆದಿದ್ದ ಸೈನ್ಯವು ಬೆದರಿತು. ಆನೆಗಳ ಗುಂಪು ಕೆಳಗುರುಳಿ ನಾಶವಾಗಿ ನಿಲ್ಲದೆ ಹಿಂಜರಿದು ಕೂಗಿಕೊಂಡವು. ಅರ್ಜುನನ ಬಾಣವು ಲಕ್ಷಲೆಕ್ಕದಲ್ಲಿ ನಾಟಿದುದರಿಂದ ಚತುರಂಗಸೈನ್ಯವೂ ಕುಗ್ಗಿ ನಾಶವಾಯಿತು. ಶಿವನು ವಿಶೇಷವಾಗಿ ಕೋಪಿಸಿಕೊಂಡು ಉದಾಸೀನಮಾಡದೆ ಅರ್ಜುನನೊಡನೆ ದಿಗ್ಗಜವು ದಿಗ್ಗಜದೊಡನೆ ಹೆಣೆದುಕೊಳ್ಳುವಂತೆ ಹೆಣೆದುಕೊಂಡನು. ವll ಹಾಗೆ ಇಬ್ಬರೂ ನಿರಾಯುಧರಾಗಿ ಹೆಣೆದುಕೊಂಡು ಅನೇಕ ಪಟ್ಟುಗಳಲ್ಲಿ ಕ್ರಮತಪ್ಪದೆ ಬಹುಕಾಲ ಸಹಿಸಿಕೊಂಡು ಕಾದಿದರು. ದೇವತೆಗಳು ಆಕಾಶಪ್ರದೇಶದಲ್ಲಿದ್ದುಕೊಂಡು ಅವರ ದ್ವಂದ್ವಯುದ್ಧವನ್ನು ನೋಡುತ್ತಿದ್ದರು. ೨೨. ಶಿವನು ಪಾರ್ಥನನ್ನು ಬೀಳಿಸಿದನು; ಪಾರ್ಥನು ಶಿವನನ್ನು ಬೀಳಿಸಿದನು. ವಿಜಯಕ್ಕೆ ಸವಾಲು ಮಾಡುವ ಹಾಗೆ ಅರ್ಜುನನು ಶಿವನನ್ನು ಶ್ರಮ ವಿಲ್ಲದೆ ನೆಲದಲ್ಲಿ ಬೀಳಿಸಿ ವ|| ಅವನ ಗಂಟಲನ್ನು ಮೆಟ್ಟಿದನು. ೨೩. ಹೊರಗಡೆಯ ಕಣ್ಣುಗಳಿಗೆ ಕಾಣದಂತೆ ಮೊದಲೇ ಮರಸಿಟ್ಟಿದ್ದ ಹಣೆಗಷ್ಟೊಂದು ಆಗ ಹಣೆಯಿಂದ ಹೊರ ಹೊರಟ ಹಾಗಿರಲು ಶಿವನು ಅರ್ಜುನನಿಗೆ ಶ್ರೇಷ್ಠವಾದ ಆ ಕಣ್ಣನ್ನು ಪ್ರೀತಿಯಿಂದ ತೋರಿಸಿದನು. ೨೪. ಎದೆಯಲ್ಲಿ ಹಾವು, ಕಯ್ಯಲ್ಲಿ ಬಿಲ್ಲು, ತಲೆಯಲ್ಲಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy