SearchBrowseAboutContactDonate
Page Preview
Page 37
Loading...
Download File
Download File
Page Text
________________ ೩೨ | ಪಂಪಭಾರತಂ ಬಗೆ ಪೊಸತಪ್ಪುದಾಗಿ ಮೃದುಬಂಧದೊಳೊಂದುವುದು, ಒಂದಿ ದೇಸಿಯೊಳ್ ಪುಗುವುದು ಪೊಕ್ಕ ಮಾರ್ಗದೊಳೆ ತಳ್ಳುದು ತಳ್ಕೊಡೆ ಕಾವ್ಯಬಂಧಂ, ಒಪ್ಪುಗುಂ, ಆ ಸಕಳಾರ್ಥಸಂಯುತಂ, ಆಳಂಕೃತಿಯುಕ್ತಂ, ಉದಾತ್ತವೃತ್ತಿ ವಿನ್ಯಾಸಂ, ಅನೇಕ ಲಕ್ಷಣಗುಣಪ್ರಭವಂ, ಮೃದುಪಾದಮಾದ ವಾಕ್ಸಿ ಸುಭಗಂ ಕಳಾಕಳಿತಂ ಪಂಪನು ರಾಜದ್ರಾಜಕಮೆನಿಸಿದ ಪುಲಿಗೆರೆಯ ತಿರುಳುಗನ್ನಡದಲ್ಲಿ ತನ್ನ ಕಾವ್ಯಗಳನ್ನು ರಚಿಸಿದ್ದಾನೆ. ಅದರಲ್ಲಿ ಪೊಸದೇಸಿಯಿದೆ, ಬೆಡಂಗಿದೆ, ಅರ್ಥವ್ಯಕ್ತಿಯಿದೆ, ಅದು 'ವಿದಿತಂ ಪ್ರಾತೀತಿಕಂ, ಕೋಮಲಂ, ಅತಿಸುಭಗಂ, ಸುಂದರಂ, ಸೂಕ್ತಿಗರ್ಭ೦, ಮೃದುಸಂದರ್ಭ೦, ವಿಚಾರಕ್ಷಮಂ, ಉಚಿತಪದಂ, ಶ್ರವ್ಯಂ, ಆರ್ಯಾಕುಲಂ, ವ್ಯಾಪ್ತದಿಗಂತಂ ಕಾವ್ಯಂ' ಎಂದು ಕವಿಜನ ಮೆಚ್ಚಿದ್ದಾರೆ. ಇದು ನಿಚ್ಚಂ ಪೊಸತರ್ಣವಂಬೊಲ್ ಅತಿ ಗಂಭೀರಂ, ಲಲಿತಪದವುಳ್ಳುದು, ಪ್ರಸನ್ನ ಕವಿತಾಗುಣ ಪೂರ್ಣವಾದುದು. ಆತನಿಂದ ಮುಂದೆ ಬಂದ ಕವಿಗಳು ಜಾತಿಮತ ಪಕ್ಷಪಾತವಿಲ್ಲದೆ 'ಸುಭಗಕವಿ ಪಂಪನಿಂ ವಾಗ್ವಿಭವೋನ್ನತಿ ನೆಗಟ್ಟುದು, ರಸಿಕಾಗ್ರಣಿ ಹಂಪದೇವ, 'ಸತ್ಯವಿಹಂಪನ ಕೃತಿ ಸೌಂದರೀಸುಭಗಂ', 'ಪಂಪನ ರೀತಿ', 'ಪಂಪನಿಂಪು,' 'ಪಂಪನ ಗುಣಂ', 'ಪಂಪನೊಂದಸದೃಶಮಪ್ಪ ರಸಭಾವಂ,' ಎಂದು ಪಂಪನ ಶೈಲಿಯ ಅಸಾಧಾರಣಶಕ್ತಿಯನ್ನು ತಮ್ಮ ತಮ್ಮ ಅನುಭವಾನುಸಾರವಾಗಿ ಸ್ತೋತ್ರಮಾಡಿದ್ದಾರೆ. ಆ ಒಂದೊಂದು ಗುಣವನ್ನೂ ಪ್ರತ್ಯೇಕವಾಗಿ ನಿರ್ದೆಶಿಸಿ ತೋರಿಸುವುದು ಕಷ್ಟವಾದ ಕಾರ್ಯ. ಕೆಲವು ಪ್ರಧಾನವಾದ ಗುಣಗಳ ಸ್ಕೂಲ ಪರಿಚಯವನ್ನು ಮಾತ್ರ ಮಾಡಿಸಲು ಪ್ರಯತ್ನಪಡಬಹುದು. ಪಂಪನ ಶೈಲಿಯ ಪ್ರಧಾನಗುಣ ಪ್ರಸಾದ, ಗಾಂಭೀರ್ಯ, ಅರ್ಥವ್ಯಕ್ತಿ, ಕೊಂಕುನುಡಿ, ಧ್ವನಿ, ಮೃದುಪದರಚನೆ, ಹಿತಮಿತ ಮೃದುವಚನಪೂರ್ಣತೆ ಮತ್ತು ಸಂಯಮ. ಅವನು ಎಂದೂ ಆಡಂಬರಕ್ಕೂ ಆರ್ಭಟಕ್ಕೂ ಪ್ರಯತ್ನಪಡುವುದಿಲ್ಲ. ಆದುದರಿಂದಲೇ ಅವನ ಕಾವ್ಯದಲ್ಲಿ ವಿಶೇಷವಾದ ಓಜಸ್ಸಾಗಲಿ ಪದಮೈತ್ರಿಯಾಗಲಿ ಕಾಣಲಾಗುವುದಿಲ್ಲ. ಈ ಎರಡು ಗುಣಗಳೂ ಶಕ್ತಿಕವಿಯಾದ ರನ್ನನಿಗೆ ಮೀಸಲು. ಚಿತ್ತಸ್ಥೆರ್ಯದಿಂದ ಮೃದುಪದಗತಿಯಿಂದ ಪೂರ್ವನಿಷ್ಠವಾದ ಆದರ್ಶಸಾಧನೆಗಾಗಿ ಸಂಯಮದಿಂದ ಸಾಗುವುದು ಪಂಪನ ಸ್ವಭಾವ, ಬಾಹುಬಲಿಯು ಅಣ್ಣನಾದ ಭರತನಿಗೆ ತಿಳಿಸುವ ಮುಂದಿನ ಪ್ರಾರ್ಥನೆ ಈ ಗುಣಗಳನ್ನು ಉದಹರಿಸುತ್ತದೆ. ನೆಲಸುಗೆ ನಿನ್ನ ವಕ್ಷದೊಳೆ ನಿಚ್ಚಳಮೀ ಭಟಖಡ್ಗಮಂಡಳೋ ತೈಲವನ ವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷಿ ಭೂ ವಲಯಮನಯ್ಯನಿತ್ತುದುಮನ್, ಆಂ ನಿನಗಿತ್ತೆನ್, ಇದೇವುದಣ್ಣ ನೀ ನೊಲಿದ ಲತಾಂಗಿಯಂ ಧರೆಗಂ, ಆಟಿಸಿದಂದು ನೆಗಟ್ ಮಾಸದೇ || ಉಭಯಭಾಷಾಪಂಡಿತನಾದ ಪಂಪನಿಗೆ ಸಂಸ್ಕೃತದಲ್ಲಿ ವ್ಯಾಮೋಹ ಹೆಚ್ಚು. ಆತನು ತನ್ನ ಕಾವ್ಯಗಳನ್ನು ರಚಿಸಿದುದು ಪಂಡಿತರನ್ನು ಮೆಚ್ಚಿಸುವುದಕ್ಕಾಗಿಯೂ ಅಹುದು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy