SearchBrowseAboutContactDonate
Page Preview
Page 369
Loading...
Download File
Download File
Page Text
________________ ೩೬೪] ಪಂಪಭಾರತಂ ಉll ಆಡದ ಮೆಗ್ಗಳಿಲ್ಲ ನಿಡುಮಯ್ದಳುಮಾಡಿದುವಂತೆ ಮೆಟ್ಟುವಲ್ : ನೋಡಿದರೆಲ್ಲರಂ ಪಿಡಿದು ಮೆಟ್ಟಿದಳಿಟ್ಟಳಮಾಯು ದೇಸಿ ಕೆ || ಯೂಡಿದುದಿಲ್ಲ ಮಾರ್ಗಮನೆ ವಿಸ್ಮಯವಾಗಿರೆ ತನ್ನ ಮುಂದೆ ಬಂ ದಾಡಿದಳಾ ತಿಲೋತ್ತಮೆಯನೊಲ್ಲನುಮಿಲ್ಲ ನರೇಂದ್ರತಾಪಸಃ || ೯೧ ವ|| ಅಂತಾಕೆಗಳೆಡೆಯಾಡಿಯುಂ ಮನಂಗೊಳೆ ಪಾಡಿಯುಂ ಮನುಜಮಾಂಧಾತನಂ ಸೋಲಿಸಲಾದ ಸಹಜಮನೋಜನ ರೂಪಿಂಗಂ ಸುರತಮಕರಧ್ವಜನ ಸೌಂದರ್ಯಕ್ಕಂ ಗಂಧೇಭವಿದ್ಯಾಧರನ ಗಂಡಗಾಡಿಗಂ ತಾಮೆ ಸೋಲೆಯೇ ವಂದುಕಂti ಬೂದಿ ಜೆಡೆ ಲಕ್ಕಣಂ ತಪ ಕಾದುವರಣೆ ಶರಾಸನಂ ಕವಚಮಿವೆಂ | ತಾದುವೊ ಮುತ್ತುಂ ಮೆಣಸುಂ ಕೋದಂತುಳೆ ನಿನ್ನ ತಪದ ಪಾಂಗೆಂತು ಗಡಾ | ಚಂ! ಕಡು ತಪದಿಂದ ನಿನ್ನ ಪಡೆಪಾವುದೊ ಗಾವಿಲ ಸಗ್ಗಮ ಪೋ ನುಡಿಯವೊ ಮೂರ್ಖ ಸಗ್ಗದ ಫಲಂ ಸುಖಮ ಸುಖಕ್ಕೆ ಪೇಟೊಡಂ | ಬಡದವರಾರೊ ಪಂಡಿರೋಳಗಾರ್ ಪುರಾವೆ ದಲಾಮೆ ಬಂದು ಕಾ ಊಡಿದಪೆವಿಂಬುಕೆಲ್ಯೂಡಿವು ಮಲ್ಲಡಿಗಳ ಗಡ ಕರ್ಚು ಬೂದಿಯಂ 1೯೩ ಹಾಡಿದಳು.* ೯೧. ಶರೀರದ ಯಾವ ಭಾಗವೂ ಚಲಿಸದಿರಲಿಲ್ಲ: ದೀರ್ಘವಾದ ಶರೀರವೂ ಹಾಗೆ ಪೂರ್ಣವಾಗಿ ಚಲಿಸಿತು. ಅವಳು ಪ್ರೇಕ್ಷಕರೆಲ್ಲರನ್ನು ಹಿಡಿದು ಮೆಟ್ಟಿದಳು; ಮಾರ್ಗಮಿಶ್ರವಿಲ್ಲದ ಇವಳ ದೇಶೀಯತೆ ಬಹು ರಮಣೀಯವಾಯಿತು; ಆದರೂ ಯಾರಿಗೂ ಅವಳು ಅಧೀನಳಾಗಲಿಲ್ಲ ಎಂದು ಆಶ್ಚರ್ಯವಾಗುವ ಹಾಗೆ ತನ್ನ ಮುಂದೆ ನಾಟ್ಯವಾಡಿದ ತಿಲೋತ್ತಮೆಯನ್ನೂ ರಾಜತಾಪಸನಾದ ಅರ್ಜುನನು ಮೋಹಿಸಲಿಲ್ಲ. ವ|| ಹಾಗೆ ಆ ಅಪ್ಪರಸ್ತ್ರೀಯರು ಸಮೀಪದಲ್ಲಿಯೇ ಓಡಿಯಾಡಿಯೂ ಮನೋಹರವಾಗಿರುವ ಹಾಗೆ ಹಾಡಿಯೂ ಮನುಜಮಾಂಧಾತನಾದ ಅರ್ಜುನನನ್ನು ಸೋಲಿಸಲು ಅಶಕ್ತರಾಗಿ ಸಹಜಮನ್ಮಥನಾದ ಅರ್ಜುನನ ರೂಪಕ್ಕೂ ಸುರತ ಮಕರ ಧ್ವಜನಾದ ಅವನ ಸೌಂದರ್ಯಕ್ಕೂ ಗಂಧೇಭವಿದ್ಯಾಧರನ ಪೌರುಷದ ಸೊಬಗಿಗೂ ತಾವೇ ಸೋತು ಅವನ ಸಮೀಪಕ್ಕೆ ಬಂದು ಅವನನ್ನೇ ಪ್ರಶ್ನಿಸಿದರು. ೯೨. ವಿಭೂತಿ ಮತ್ತು ಜಡೆಯ ಲಕ್ಷಣಗಳು ತಪಸ್ಸಿಗೆ ಹೊಂದಿಕೊಳ್ಳುತ್ತವೆ. ಆದರೆ ಎರಡು ಬತ್ತಳಿಕೆ ಬಿಲ್ಲು ಕವಚ ಇವು ಹೇಗೆ ಹೊಂದಿಕೊಳ್ಳುತ್ತವೆ? ಮುತ್ತನ್ನೂ ಮೆಣಸನ್ನೂ ಕೋದಂತಿರುವ ಈ ನಿನ್ನ ತಪಸ್ಸಿನ ರೀತಿ ಅದೆಂತಹುದು? ೯೩. ಎಲೋ ದಡ್ಡ, ತೀವ್ರವಾದ ತಪಸ್ಸಿನಿಂದ ನೀನು ಪಡೆಯಬೇಕಾದ ವಸ್ತು ತಾನೆ ಏನು ? ಸ್ವರ್ಗವಲ್ಲವೇ, ಹೋಗು ಮೂರ್ಖ, ಮಾತನಾಡಬೇಡ, ಸ್ವರ್ಗದ ಫಲವೂ ಸುಖವೇ ಅಲ್ಲವೇ? *ಇಲ್ಲಿಯ ಸೊರ್ಕು, ಚಕ್ಕಣ, ಸಾಗು ಎನ್ನುವ ಪದಗಳಿಗೆ ಸರಿಯಾದ ಅರ್ಥವಾಗಿಲ್ಲ. ಮದ್ಯಪಾಮಾಡುವುದರಿಂದುಂಟಾಗುವ ಮೈಮರೆಯುವಿಕೆ, ಅಮಲೇರುವುದು ಎಂದು ಅರ್ಥವಾಗಬಹುದು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy