SearchBrowseAboutContactDonate
Page Preview
Page 367
Loading...
Download File
Download File
Page Text
________________ esse ೩೬೨/ ಪಂಪಭಾರತ ಕಂ|| ಮುಡಿಯ ಕುಚಯುಗದ ಜಘನದ ಕಡುವಿಣೀಂ ಮಣಲೊಳಟ್ಟು, ಬರೆ ಮೆಲ್ಲಡಿಗಳ್ || ನಡೆಯದ ಬೇವಸಮಂ ತಾಂ ನಡೆಯಿಸುವಂತವರ್ಗಳೊಯ್ಯನೊಯ್ಯನೆ ನಡೆದರ್ || ಮ|| ಮುಡಿಯಂ ಸೋಗೆಯಗತ್ತು ಸೋಗೆ ನಡೆಯಂ ಪೆಣ್ಣಂಚೆಗೆತ್ತಂಚೆ ಮ qುಡಿಯಂ ಕೋಗಿಲೆಗೆತ್ತು ಕೋಗಿಲೆ ಘನೋತ್ತುಂಗ ಸ್ತನದ್ವಂದ್ವದಿ | ಟೈಡೆಯಂ ಕೊಕಮಗತ್ತು ಕೋಕಮಳಕಾನೀಕಂಗಳಂ ಸೊರ್ಕಿದಾ ಅಡಿಗೆತ್ತಾಡಿ ಸುತ್ತುತುಂ ಬರೆ ಬನಂ ಬರ್ಪಂತೆ ಬಂದಾಕೆಗಳ್ || ೮೬ ವ|| ಅಂತು ನರೇಂದ್ರತಾಪಸನಂ ಸೋಲಿಸಲೆಂದು ವಂದಾಕೆಗಳ್ ತಾಮೆ ಸೋಲು ಮುಂದು ಮುಂದನೆ ಸುಳೆಯಚಂ|| ಮಗಮಗಿಸುತ್ತುಮಿರ್ಪ ಮೃಗನಾಭಿಯ ನೀರ್ದಳಿನಲ್ಲಿ ಕಂಪನಾ ಳ್ಳುಗುತ್ತಿಲಸುತ್ತುಮಿರ್ಪ ಪದದೊಳ್ ಪದವಟ್ಟು ಪೊದಳು ತೋರ ಮ | ಲಿಗೆಯ ತುಜುಂಬು ರಾಹು ತವೆ ನುಂಗಿದ ಚಂದ್ರನನೊಯ್ಯನೊಯ್ಯನಂ ದುಗುಟ್ಟವೊಲೊಪ್ಪಿರಲ್ ಬಲದೊಳುರ್ವಸಿ ದೇಸಿಗೆ ದೇಸಿಯಾಡಿದಳ್ |೮೭ ಮದಗಜಗಮನೆಯರು ನೆಲದ ಮೇಲೆ ನಡೆಯುವುದು ತಮಗೆ ಹೊಸದಾದುದರಿಂದ ಪಾದಗಳು ನೆಲಕ್ಕೆ ಹತ್ತಿಕೊಂಡಿರಲು ನಡೆದೂ ನಡೆದೂ ನಡೆಯಲಸಮರ್ಥರಾಗಿ ಸುತ್ತಾಡಿದರು. ೮೫. ತುರುಬಿನ, ಮೊಲೆಗಳ, ಪಿಿಗಳ, ಅತಿಯಾದ ಭಾರದಿಂದ ಅವರ ಮೃದುವಾದ ಪಾದಗಳು ಮರಳಿನಲ್ಲಿ ಹೂತುಹೋಗಲು ನಡೆಯಲು ಅಭ್ಯಾಸವಿಲ್ಲದ ತಮ್ಮ ಆಯಾಸವನ್ನು ಪ್ರದರ್ಶಿಸುವಂತೆ ಮೆಲ್ಲಮೆಲ್ಲಗೆ ನಡೆದರು. ೮೬. ತುರುಬಿನ ಗಂಟನ್ನು ಹೆಣ್ಣು ನವಿಲೆಂದು ಭ್ರಾಂತಿಗೊಂಡು ಗಂಡುನವಿಲೂ, ನಡಗೆಯನ್ನು ಹೆಣ್ಣು ಹಂಸವೆಂದು ಭ್ರಮಿಸಿ ಗಂಡುಹಂಸವೂ, ಮೃದುವಾದ ಮಾತನ್ನು ಹೆಣ್ಣುಕೋಗಿಲೆಯೆಂದು ಭಾವಿಸಿ ಗಂಡುಕೋಗಿಲೆಯೂ ದಪ್ಪವೂ ಎತ್ತರವೂ ಆದ ಮೊಲೆಗಳ ಒತ್ತಡವನ್ನು ಕಂಡು ಚಕ್ರವಾಕದ ಜೋಡಿಯೆಂದು ಭ್ರಮಿಸಿ ಚಕ್ರವಾಕವೂ, ಮುಂಗುರುಳುಗಳ ಸಾಲನ್ನು ಸೊಕ್ಕಿದ ಹೆಣ್ಣು ದುಂಬಿಯೆಂದೇ ಭ್ರಮಿಸಿ ಗಂಡುದುಂಬಿಗಳೂ ಆ ಅಪ್ಸರೆಯರನ್ನು ಸುತ್ತಿಕೊಂಡು ಬರುತ್ತಿರಲು ಅವರು ವನವೇ ಬರುವ ಹಾಗೆ ಬಂದರು. ವ|| ಹಾಗೆ ರಾಜತಪಸ್ವಿಯನ್ನು ಸೋಲಿಸುವುದಕ್ಕಾಗಿ ಬಂದ ಅವರು ತಾವೇ ಸೋತು ಅವನ ಮುಂದು ಮುಂದಕ್ಕೆ ಸುಳಿದಾಡಿದರು. ೮೭. ಗಮಗಮಿಸುವ ಕಸ್ತೂರಿಯ ನೀರನ್ನು ಚಿಮುಕಿಸುವುದರಿಂದ ವಾಸನಾಯುಕ್ತವಾಗಿ ಸ್ಪುಟಗೊಂಡು ಅರಳುತ್ತಿರುವ ಹೂವಿನಲ್ಲಿ ಹದವರಿತು ಸೇರಿ ಅಗಲವಾಗುತ್ತಿರುವ ದಪ್ಪಮಲ್ಲಿಗೆಯ ದಂಡೆಯು ತುರುಬಿನ ಮೇಲೆ ಗ್ರಹಣಕಾಲದಲ್ಲಿ ರಾಹುವು ಚಂದ್ರನನ್ನು ನಿಧಾನವಾಗಿ ಹೊರಚೆಲ್ಲುವ ಹಾಗೆ ಸೊಗಸಾಗಿರಲು ಬಲಗಡೆಯಲ್ಲಿ ಊರ್ವಶಿಯ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy