________________
೫೧
೩೫೦ | ಪಂಪಭಾರತ
ಶಮಮನೆ ಕೆಯೊಳೊಡ ಬಿ qುಮಂಬುಮಂ ಬಿಸುಟು ತಪಕೆ ನೀಂ ಬಗೆವೊಡೆ ವಿ || ಕ್ರಮಮಂ ಪಗೆಯಂ ಕಿಡಿಸುವ ಶಮದಿಂ ಮುನಿಗಾಯ್ತು ಸಿದ್ದಿ ಭೂಪತಿಗಾಯ್ಕೆ || ತಪ್ಪುಮನೆ ನುಡಿಯೆನೆಂಬುಟ ದೊಪ್ಪದು ನಿನಗಹಿತರೆಯೆ ತಪ್ಪಿರ್ದರವರ್ | ತಪ್ಪಿದ ಬಟೆಕ್ಕೆ ತಪ್ಪಿದ ತಪ್ಪಂ ಗಳ ನಗೊದ್ದಮಲ್ಲದ ತಪ್ಪ !
೫೨ ವ|| ಎಂದ ಪಾಂಚಾಳರಾಜತನೂಜೆಯ ಮಾತಿಂಗೆ ಬೆಂಬಲಂಬಾಯ್ದಂತೆ ಭೀಮಸೇನ ನಿಂತೆಂದಂಕಂ|| ನುಡಿಯದೆ ಪಣತಂ ಬ್ರೌಪದಿ
ನುಡಿದ ತಕ್ಕುದನೆ ಕೇಳಿಮಿಂ ಕೇಳದಿರಿಂ | ನುಡಿಯಲೆಡೆಯಿಲ್ಲ ನಿಮ್ಮ ನುಡಿಯಿಸಿದಪುದೆನ್ನ ಮನದ ಮುನಿಸವನಿಪತೀ || ನಾಲ್ಕುಂ ನೃಪವಿದ್ಯೆಯನಾ ಡಲ್ ಕಲ್ಕುಂ ನೆಯ ಕಲೆಯಿಲ್ಲಾಗದೆ ಸೋ | ಲಿ ನೃಪ ದೂರೆಯ ನೆಲನಂ ವಲ್ಕಲವಸನಕ್ಕೆ ಮಯೂನಾಂಪುದು ಪಂಪೇ ||
೫೩.
೫೪
ಎಲೈ ಹುಚ್ಚೇ ನಿನ್ನ ಸ್ಥಿತಿಯನ್ನು ಯೋಚಿಸಿ ನೋಡು ಈ ಘಮ್ಮೆನ್ನುವ ಕಾಡಿನಲ್ಲಿ ಅಡಗಿಕೊಂಡು ಚಿಂತಿಸುತ್ತಿರಬಹುದೇ? ೫೧. ನೀನು ಶಾಂತಿಗುಣವನ್ನೇ ಅಂಗೀಕರಿಸುವುದಾದರೆ ಬಿಲ್ಲನ್ನೂ ಬಾಣವನ್ನೂ ಬಿಸಾಡಿ ತಪಸ್ಸನ್ನೇ ಅಪೇಕ್ಷಿಸುವು ದಾದರೆ ವಿಕ್ರಮವನ್ನೂ ದ್ವೇಷವನ್ನೂ ಹೋಗಲಾಡಿಸುವ ಶಾಂತಿಯಿಂದ ಋಷಿಗೆ ಸಿದ್ದಿಯಾಗುತ್ತದೆಯೇ ವಿನಾ ರಾಜನಿಗೆ ಸಿದ್ದಿಯಾಗುತ್ತದೆಯೇ (ಅಂದರೆ ಶಾಂತಿಯಿಂದ ಋಷಿಸಿದ್ದಿಯಾಗುತ್ತದೆಯೇ ವಿನಾ ರಾಜಸಿದ್ದಿಯಾಗುತ್ತದೆಯೇ?) ೫೨. ದೋಷವನ್ನೇ ಕುರಿತು ನಾನು ಮಾತನಾಡುವುದಿಲ್ಲವೆಂಬ ಮಾತು ಯೋಗ್ಯವಲ್ಲ; ಶತ್ರುಗಳಾದವರು ತಪ್ಪುಮಾಡಿದ್ದಾರೆ. ಅವರು ತಪ್ಪುಮಾಡಿದ ಬಳಿಕ ನೀನು ತಪ್ಪುಮಾಡಿದರೆ ಆ ತಪ್ಪು ನಿನ್ನ ಸತ್ಯಕ್ಕೆ ಒಪ್ಪದ ತಪ್ಪಾಗುತ್ತದೆಯೇ? ವ| ಎಂಬುದಾಗಿ ಹೇಳಿದ ದೌಪದಿಯ ಮಾತಿಗೆ ಬೆಂಬಲ ಬರುವ ಹಾಗೆ ಭೀಮಸೇನನು ಹೀಗೆಂದನು-೫೩. ಬ್ರೌಪದಿಯು ಅನ್ಯಥಾ ನುಡಿಯದೆ ಯೋಗ್ಯವಾದುದನ್ನೇ ಹೇಳಿದಳು. ನೀವು ಕೇಳಿ, ಬಿಡಿ; ಇನ್ನು ಮಾತನಾಡುವುದಕ್ಕೆ ಅವಕಾಶವೇ ಅಲ್ಲ, ರಾಜನೇ, ನನ್ನ ಮನಸ್ಸಿನ ಕೋಪ ನನ್ನನ್ನೂ ಮಾತನಾಡುವ ಹಾಗೆ ಮಾಡುತ್ತದೆ. ೫೪. ರಾಜನಿಗೆ ಯೋಗ್ಯವಾದ ಸಾಮ, ದಾನ, ಭೇದ, ದಂಡಗಳೆಂಬ ನಾಲ್ಕುಪಾಯಗಳನ್ನೂ ತಿಳಿದಿದ್ದರೂ ನೀನು ಪೂರ್ಣವಾಗಿ ಕಲಿತವನಾಗಲಿಲ್ಲವಲ್ಲ; ಭೂಮಿಯನ್ನು ಸೋಲುವುದುಚಿತವೇ? ಶರೀರಕ್ಕೆ ನಾರುಮಡಿಯನ್ನು ಧರಿಸಿರುವುದು ಹಿರಿಮೆಯೇ ? (ನಾರುಮಡಿಗೆ ಮೆಯ್ಯನ್ನೊಡ್ಡುವುದು