SearchBrowseAboutContactDonate
Page Preview
Page 342
Loading...
Download File
Download File
Page Text
________________ ಸಪ್ತಮಾಶ್ವಾಸಂ / ೩೩೭ ಜೂದಾಡಿ ಸೋಲು ನನ್ನಿಗೆ ಮೇದಿನಿಯಂ ಕೊಟ್ಟು ಪಾಂಡುನಂದನರೀಗಳ್ | ಪೋದೊಡಮೇನ್ ತಿಣುಕಾಗದ ಪೋದಪುದೇ ನಮ್ಮ ನೃಪತಿಗವು ತವುದಲೆಯೊಳ್ || ೧೮ ಜೂದಿನ ಗಲ್ಲದೊಳಾದೀ ಮೇದಿನಿಯಂ ಕಂಡು ಕಜ್ಜಮಂ ಕಾಣದೆ ದು | ಜ್ಯೋದನನದೇನದೇಂ ಮರು ಳಾದ ಬಡಿಗಂಡನಿಲ್ಲ ಪಾಲನೆ ಕಂಡಂ || ಎನಿತಾನುಮಂದದಿಂ ಜೂ ದನಿಕೆಯುಂ ದ್ರುಪದಸುತೆಯನೆದುಯ್ಯಯುಮಿಂ | ತಿನಿತೂಂದಾದುದು ದುಶ್ಯಾ ಸನನಿಂದಂ ಶಕುನಿಯಂಬ ಬೆಳ್ತಜೆಸಿಂದಂ || ವl ಎಂದಿರ್ದರಿರ್ದಲ್ಕಿಯ ತಂತಮ್ಮ ಕಂಡುದನೆ ನುಡಿಯೆಯುಂ ಕಲರವರ ಪೂಗಿಂಗಬಲ್ಲು ಕಣ್ಣ ನೀರನಿಯುಂ ಕಲರ್ ಪರಸಿ ಸೇಸೆಯನಿಕ್ಕೆಯುಂ ಪೊಬಲಂ ಪೂಣಮಟ್ಟು ಪುರದ ಬಾಹಿಗೆಯನೆಯುವಾಗ ಗಾಂಗೇಯ ದ್ರೋಣ ಕೃಪ ವಿದುರಾದಿಗಳ್ ಕೊಂತಿವರಸೆಯ್ದೆ ವಂದು ಕಿದಂತರಮಂ ಕಳಿಪುತ್ತುಂ ಬರ ಧರ್ಮಪುತ್ರನಮಗೆ ತಕ್ಕ ಬುದ್ಧಿಯಂ ಪೇಟ್ಟು ಮಗುಟಿಮೆಂದೊಡನಿಬರುಂ ಮನಂ ಬಂಧಿಸಿದ ಮೋಹದಿಂ ಗಲಗಲನೆ ಕಣ್ಣ ನೀರ್ಗಳಂ ಸುರಿದು ನಕುಲಸಹದೇವರೆಂಥವರು. ಅವರಿಗೂ ಈ ಸ್ಥಿತಿಯಾಯ್ಕೆ? ೧೮. ಜೂಜಾಡಿ ಸೋತು ಸತ್ಯಕ್ಕಾಗಿ ರಾಜ್ಯವನ್ನು ಕೊಟ್ಟು ಪಾಂಡವರು ಹೋದರೇನು ? ರಾಜನಾದ ದುರ್ಯೋಧನನಿಗೆ ಕೊನೆಯಲ್ಲಿ ಇದು ಸ್ಪಷ್ಟವಾಗದೆ ಹೋಗುತ್ತದೆಯೇ? ೧೯. ಜೂಜಿನ ಗೆಲುವಿನಿಂದ ಬಂದ ಈ ರಾಜ್ಯವನ್ನು ನೋಡಿ ಮುಂದಾಗುವ ಕಾರ್ಯವನ್ನು ಕಾಣದೆ ದುರ್ಯೋಧನನು ಅದೇತಕ್ಕೆ ಅತ್ಯಂತ ಹುಚ್ಚನಾದ? ಮೇಲೆತ್ತಿದ ಕೊಡಚಿ (ಬಡಿ) ಯನ್ನು ಕಾಣದೆ ಹಾಲನ್ನು ಮಾತ್ರ ಕಂಡನಲ್ಲ. ೨೦. ವಿವಿಧರೀತಿಯಲ್ಲಿ ಜೂಜಾಡಿಸಿದುದೂ ಬ್ರೌಪದಿಯನ್ನು ಎಳೆದು ಸೆಳೆದುದೂ ಇವೆಲ್ಲ ಆ ದುಶ್ಯಾಸನನಿಂದ ಮತ್ತು ಶಕುನಿಯೆಂಬ ಬುದ್ದಿಯಿಲ್ಲದ ಪೊರಸಿನಿಂದ ಉಂಟಾಯಿತು. ವ|| ಎಂದು ಇದ್ದವರು ಇದ್ದ ಕಡೆಯಲ್ಲಿಯೇ ತಾವು ತಾವು ನೋಡಿದುದನ್ನು ನುಡಿಯುತ್ತಿದ್ದರು. ಕೆಲವರು ಪಾಂಡವರು ಹಾಗೆ ಹೋಗುತ್ತಿರುವುದನ್ನು ನೋಡಿ ಅತ್ತು ಕಣ್ಣೀರನ್ನು ಸುರಿಸಿದರು. ಮತ್ತೆ ಕೆಲವರು ಹರಸಿ ಅಕ್ಷತೆಯನ್ನಿಕ್ಕಿದರು. ಪಟ್ಟಣವನ್ನು ಬಿಟ್ಟು ಹೊರಟು ಹೊರಭಾಗವನ್ನು ಸೇರುವಾಗ ಭೀಷ್ಮದ್ರೋಣ ಕೃಪ ವಿದುರರೇ ಮೊದಲಾದವರು ಕುಂತಿಯೊಡಗೂಡಿ ಸ್ವಲ್ಪದೂರ ಬಂದು ಕಳುಹಿಸಿ ಬರಲು ಧರ್ಮರಾಜನು 'ನಮಗೆ ಯೋಗ್ಯವಾದ ಉಪದೇಶಮಾಡಿ ಹಿಂತಿರುಗಿ' ಎಂದನು. ಅವರೆಲ್ಲರೂ ಆಕರ್ಷಿತರಾಗಿ ಮನಸ್ಸಿನ ಪ್ರೀತಿಯಿಂದ ಗಳಗಳನೆ ಕಣ್ಣೀರನ್ನು ಸುರಿಸಿದರು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy