SearchBrowseAboutContactDonate
Page Preview
Page 328
Loading...
Download File
Download File
Page Text
________________ ಷಷ್ಠಾಶ್ವಾಸಂ | ೩೨೩ ವ|| ಅನಿತೊಂದು ಮಹಾ ಪ್ರಘಟ್ಟದೊಳಗ್ರಪೂಜೆಯಂ ನಾರಾಯಣಂಗೆ ಕೊಟ್ಟವಭ್ಯಥ ಸ್ನಾನದೊಳ್ ಪಿರಿದುಮೊಸಗೆಯಂ ಮಾಡಿ ಯಾಗವಿಧಿಯಂ ನಿರ್ವತಿ್ರಸಿ ನೆರೆದ ರಾಜಕುಲಮೆಲ್ಲ ಮಂ ಪೂಜಿಸಿ ವಿಸರ್ಜಿಸಿದಾಗಳ್ ಮುರಾಂತಕನಂತಕನಂದನನನಿಂತೆಂದಂ ಮ|| ಹಿಮ ಸೇತು ಪ್ರತಿಬದ್ಧ ಭೂವಳಯಮಂ ನಿಷ್ಕಂಟಕಂ ಮಾಡಿ ವಿ ಕ್ರಮಮಂ ತೋಟ ನಿಜಾನುಜರ ನೆರಸಿದೊಂದೈಶ್ವರ್ಯದಿಂ ರಾಜ ಸೂ || ಯಮನಿಂದಗ್ಗಳದಗ್ಗಳಿಕೆಯ ಮಖಂ ತಾನೆಂಬಿನಂ ನಿನ್ನ ಕೀ ರ್ತಿ ಮುಖಂ ಕೀರ್ತಿ ಮುಖಂಚೊಲೇನಸೆದುದೋ ದಿಗ್ಧಂತಿ ದಂತಂಗಳೊಳ್ || ವ|| ಎಂದು ನುಡಿದ ಮಂದರಧರನಂ ನಿನ್ನನುಗ್ರಹದೊಳದೇವಿರಿದೆಂದು ವಸ್ತು ವಾಹನಂಗಳನಿತ್ತು ದ್ವಾರಾವತಿಗೆ ಕಳಿಸಿ ಸುಖಸಂಕಥಾವಿನೋದಂಗಳೊಳ್ ರಾಜ್ಯಲಕ್ಷ್ಮಿ ಯನನು ಭವಿಸುತ್ತಿರ್ಪನ್ನೆಗಮಂ ಕಂll ಮೇಗಿಲ್ಲದ ಬಲ್ಲಾಳನ とと ದಾಗರಮನೆ ನೆಗಟ್ಟಿ ತತ್ತ್ವಥಾನಂದನರು | ದ್ಯೋಗದ ಚಾಗದ ಯಾಗದ ಭೋಗದ ಮೈಮೆಗೆ ಸುಯೋಧನಂ ಬೆಳಗಾದಂ || 2 ವ|| ಆಗಿ ದುಶ್ಯಾಸನ ಕರ್ಣ ಶಕುನಿ ಸೈಂಧವರೆಂಬ ದುಷ್ಟಚತುಷ್ಟಯದೊಳ್ ಮಂತಣಮಿರ್ದು ದಾಯಿಗರಪೊಡೆ ಕರಂ ಪೆರ್ಚಿದರವರ ಪೆರ್ಚಿಂಗೇಗೆಂ ಬಸನಂಗಳಂ ವll ಅಷ್ಟೊಂದು ದೊಡ್ಡ ಸಂಭ್ರಮದಲ್ಲಿ ನಾರಾಯಣನಿಗೆ ಅಗ್ರಪೂಜೆಯನ್ನು ಕೊಟ್ಟು ಧರ್ಮರಾಜನು ಯಾಗದ ಕೊನೆಯಲ್ಲಿ ಮಾಡಬೇಕಾದ ಮಂಗಳಸ್ನಾನವನ್ನು ಮುಗಿಸಿದನು. ವಿಶೇಷ ಸಂತೋಷದಿಂದ ಯಾಗದ ನಿಯಮಗಳನ್ನೆಲ್ಲ ಮುಗಿಸಿ ಸೇರಿದ್ದ ರಾಜಸಮೂಹವೆಲ್ಲವನ್ನು ಸತ್ಕರಿಸಿ ಕಳುಹಿಸಿದನು. ಆಗ ಶ್ರೀಕೃಷ್ಣನು ಧರ್ಮರಾಜನನ್ನು ಕುರಿತು ಹೀಗೆಂದನು-೬೬. ಹಿಮವತ್ಪರ್ವತ ಮತ್ತು ರಾಮಸೇತುಗಳ ಮೇರೆಯನ್ನುಳ್ಳ ಭೂಮಂಡಲವನ್ನು ಬಾಧಾರಹಿತವನ್ನಾಗಿ ಮಾಡಿ ಪರಾಕ್ರಮಪ್ರದರ್ಶನದಿಂದ ಇದು ನಿನ್ನ ತಮ್ಮಂದಿರು ಒಟ್ಟುಗೂಡಿಸಿದ ಐಶ್ವರ್ಯದಿಂದ ರಾಜಸೂಯವನ್ನು ಇಂದು ಅತ್ಯತಿಶಯವಾದ ಯಜ್ಞ ಎನ್ನುವ ಹಾಗೆ ನಡೆಸಿದೆ. ನಿನ್ನ ಕೀರ್ತಿಯ ಪ್ರವಾಹವು ದಿಗ್ಗಜಗಳ ದಂತಗಳಲ್ಲಿ ಧರಿಸಿದ ಕೀರ್ತಿಮುಖವೆಂಬ ಆಭರಣದ ಹಾಗೆ ಸೌಂದರ್ಯಯುಕ್ತವಾಗಿದೆ. ವ ಎಂಬುದಾಗಿ ಹೇಳಿದ ಕೃಷ್ಣನನ್ನು 'ನಿನ್ನ ಅನುಗ್ರಹವಿರುವಾಗ ಏನು ದೊಡ್ಡದು' ಎಂದು ಹೇಳಿ ವಸ್ತುವಾಹನಗಳನ್ನು ಕೊಟ್ಟು ಸತ್ಕರಿಸಿ ದ್ವಾರಾವತಿಗೆ ಕಳುಹಿಸಿ ಸುಖಸಂಕಥಾವಿನೋದಗಳಿಂದ ಪಾಂಡವರು ರಾಜ್ಯಲಕ್ಷ್ಮಿಯನ್ನು ಅನುಭವಿಸುತ್ತಿದ್ದರು. ಆ ಕಡೆ-೬೭. ಉತ್ತಮೋತ್ತಮವಾದ ಪರಾಕ್ರಮದ ಆವಾಸಸ್ಥಳವೆನಿಸಿಕೊಂಡು ಪ್ರಸಿದ್ಧರಾದ ಆ ಪಾಂಡವರ ಕಾರ್ಯದ, ತ್ಯಾಗದ, ಸೌಖ್ಯದ ಮಹಿಮೆಗೆ ದುರ್ಯೋಧನನು ಬೆರಗಾದನು. ವ| ದುಶ್ಯಾಸನ ಕರ್ಣ ಶಕುನಿ ಸೈಂಧವರೆಂಬ ನಾಲ್ಕು ದುಷ್ಟರಲ್ಲಿ (ದುಷ್ಟಚತುಷ್ಟಯ) ಜ್ಞಾತಿಗಳಾದರೋ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy