SearchBrowseAboutContactDonate
Page Preview
Page 326
Loading...
Download File
Download File
Page Text
________________ sres ಷಷ್ಠಾಶ್ಚಾಸಂ / ೩೨೧ ಅಳಿಯದಿದಂ ಮಾಡಿದನೆ ನೈಟಿಯಮಿಕೆಗೆ ಸೈರಿಸೆಂದು ನೀನ್ ಸಭೆಯೋಳ್ ಕಾ | ಲೈಂಗಗು ಕೊಲ್ಲೆನೆಂದೆರ್ದ ತೆವಿನೆಗಂ ಹರಿಯ ನೆಲನನಸುರಂ ನುಡಿದಂ || ವ|| ಅಂತು ನುಡಿದು ಕಾಯ್ಲಿನೊಳ್ ಪಿಡುಗಿ ನಡನಡ ನಡುಗಿಕoll ಪೊಳೆದುಳುವ ಕುಡು ದಾಡೆಯ ಪೊಳಪು ನೊಸಲ್ಲಡರ್ದು ಪೊಡರ್ವ ಪುರ್ವೆಸೆವಿನಮ್ | ಎಳಿಸುವ ಮುಳಿಸಿನ ದಳ್ಳುರಿ ಗಳನುಗುವೊಲುಗುಟ್ಟಿನಸುರನುರಿವ ಪಳೆಗಳಂ || ೫೯ - ವ| ಆಗಳ್ ಸಭಾಸದರೆಲ್ಲಮೆವಮಿಡುಕದೆ ಪಂದೆಯಂ ಪಾವಡರ್ದವೊಲುಸಿರದಿರೆ ನಾರಾಯಣಂ ಶಿಶುಪಾಲನನಿಂತೆಂದಂಕಂ|| ನಿನ್ನಯ ತಾಯ್ ಸಾತ್ವತಿಯುಂ ನಿನ್ನಂ ತಂದನ್ನ ತೊಡೆಯಮೇಲಿಟಿಪುವುದುಂ | ನಿನ್ನ ಲಲಾಟದ ಕಣ್ಣದು ಮುನ್ನಮೆ ಕಿಡೆ ನಿನ್ನ ಮೃತ್ಯುವನ್ನಯ ಕೆಯೊಳ್ || ಕoll. ನೆದುದನಳದೀ ಕಿಣಿಯವ ನಟಿಯದ ಕಡೆ ನುಡಿದನಷ್ಟೊಡಂ ನೂಲುವರಂ | ನೆ ಸಲ್ಲಿಸುವುದೆಂದುದನಾಂ ಮಆವನೆ ಬಯ್ ಬಯ್ಕೆ ಸಲಿಸುವೆಂ ನೂಲುವರಂ || ೬೧ ೬೦ ದಿಗ್ನಲಿಕೊಡಲು ನಾನು ಬಲ್ಲೆ. ೫೮. 'ತಿಳಿಯದೆ ಇದನ್ನು ಮಾಡಿದೆ, ನನ್ನ ಅಜ್ಞಾನಕ್ಕೆ ಕ್ಷಮಿಸು' ಎಂದು ಈ ಸಭೆಯಲ್ಲಿ ನನ್ನ ಕಾಲಿಗೆ ಬೀಳು, ಬೀಳು, ಕೊಲ್ಲುವುದಿಲ್ಲ ಎಂದು ಹೃದಯಭೇದನವಾಗುವ ಹಾಗೆ ಕೃಷ್ಣನ ಮರ್ಮ (ರಹಸ್ಯಗಳನ್ನು ರಾಕ್ಷಸನಾದ ಶಿಶುಪಾಲನು ಎತ್ತಿ ಆಡಿದನು. ವ ಹಾಗೆ ಮಾತನಾಡಿ ಕೋಪದಿಂದ ಸಿಡಿದು ವಿಶೇಷವಾಗಿ ನಡುಗಿ ೫೯. ಹೊಳೆದು ಪ್ರಕಾಶಿಸುವ ಕೊಂಕಿದ ಕೋರೆಹಲ್ಲಿನ ಹೊಳಪು ಮುಖವನ್ನು ಹತ್ತಿ ನಡುಗುವ ಹುಚ್ಚು ಪ್ರಕಾಶಿಸುತ್ತಿರಲು ಹೆಚ್ಚುತ್ತಿರುವ ಕೋಪದ ಜ್ವಾಲೆಗಳನ್ನು ಉಗುಳುವ ಹಾಗೆ, ರಾಕ್ಷಸನು ಉರಿಯುತ್ತಿರುವ ನಿಂದೆಗಳನ್ನು ಉಗುಳಿದನು. ವ|| ಆ ಸಭೆಯಲ್ಲಿರುವವರೆಲ್ಲರೂ ರೆಪ್ಪೆ ಬಡಿಯದೆ ಹೇಡಿಯನ್ನು ಹಾವು ಅಡ್ಡಗಟ್ಟಿದ ಹಾಗೆ ಮಾತನಾಡದಿರಲು ನಾರಾಯಣನು ಶಿಶುಪಾಲನಿಗೆ ಹೀಗೆಂದನು. ೬೦. ನಿನ್ನ ತಾಯಿಯಾದ ಸಾತ್ವತಿಯು ನಿನ್ನನ್ನು ತಂದು ನನ್ನ ತೊಡೆಯ ಮೇಲೆ ಇಳಿಸಿದಾಗ ನಿನ್ನ ಆ ಹಣೆಗಣ್ಣು ಮೊದಲೇ ನಾಶವಾಯಿತು. ಅದರಿಂದ ನಿನ್ನ ಮೃತ್ಯು ನನ್ನ ಕಯ್ಯಲ್ಲಿ ೬೧. ಸೇರಿರುವುದನ್ನು ತಿಳಿದು ಅವಳು ನನ್ನನ್ನು ಕುರಿತು ಕೃಷ್ಣಾ ಕಿರಿಯವನಾದ ಇವನು ತಿಳಿಯದೆ ಕೆಟ್ಟ ಮಾತನ್ನಾಡಿದರೂ ನೂರರವರೆಗೆ ಪೂರ್ಣವಾಗಿ ಅವಕಾಶಕೊಡು (ಸಹಿಸಿಕೊ) ಎಂದುದನ್ನು ನಾನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy