SearchBrowseAboutContactDonate
Page Preview
Page 322
Loading...
Download File
Download File
Page Text
________________ . ಷಷ್ಠಾಶ್ವಾಸಂ / ೩೧೭ ಧೃತರಾಷ್ಟ್ರ ದ್ರೋಣಾಶ್ವತ್ಥಾಮ ಕೃಪ ಕುಲವೃದ್ಧರುಮಂ ದುರ್ಯೋಧನ ದುಶ್ಯಾಸನ ಕರ್ಣ ಶಲ್ಯ ಶಕುನಿಗಳುಮನವರವರ ದಾನ ಸನ್ಮಾನಾದಿಗಳೊಳಂ ಸಂತಸಂಬಡಿಸಿ ಧರ್ಮಪುತ್ರಂ ಪೇಟಿಮಾ ಸಭೆಯೊಳಗ್ರಪೂಜೆಗಾರ್ ತಕ್ಕರೆನೆ ಗಾಂಗೇಯನಿಂತೆಂದಂಮll ಬಲಿಯಂ ಕಟ್ಟಿದನಾವನೀ ಧರಣಿಯಂ ವಿಕ್ರಾಂತದಿಂದಂ ರಸಾ ತಲದಿಂದೆತ್ತಿದನಾವನಂದು ನರಸಿಂಹಾಕಾರದಿಂ ದೈತ್ಯನಂ | ಚಲದಿಂ ಸೀಳವನಾವನಭೀಮಥನಪ್ರಾರಂಭದೊಳ್ ಮಂದರಾ ಚಲಮಂ ತಂದವನಾವನಾತನೆ ವಲಂ ತಕ್ಕಂ ಪೆಜರ್ ತಕ್ಕರೇ || ೪೧ ವಗಿ ಎಂದು ತನ್ನ ಮನದೊಳಚೊತ್ತಿದಂತ ನುಡಿದ ಗಾಂಗೇಯನ ಮಾತಂ ಮನದ ಗೊಂಡು ಯಮನಂದನನಾನಂದಂಬೆರಸಂತೆಗೆಯೋನೆಂದು ಪುರುಷೋತ್ತಮಂಗರ್ಥಮದಾಗಳ್ಕಂ11 ಮುಳಿದು ಶಿಶುಪಾಲನಾ ಸಭೆ ಯೋಳಗೆ ಮಹಾಪ್ರಳಯ ಜಳಧಿನಾದದಿನಿರದು ! ಚಳಿಸಿ ನುಡಿದಂ ತ ಕಳೆ ಕಳೆ ಹರಿಗದನರ್ಘದರ್ಘಮಂ ಧರ್ಮಸತಾ || , - ೪೨ ತೀವಿದ ನರೆಯುಂ ಡೊಳ್ಳುಂ ದೇವವ್ರತನೆನಿಸಿ ನಗಲ್ಲ ಯಶಮುಂ ಬೆರಸಿ | Qವುದು ಹರಿಗರ್ಥ್ಯಮನಂ ದಾವನುಮಿ ಭೀಷ್ಮರಂತು ನುಡಿದರುಮೊಳರೇ || ೪೩ ಕುಲವೃದ್ದರನ್ನೂ ದುರ್ಯೊಧನ ದುಶ್ಯಾಸನ ಕರ್ಣ ಶಲ್ಯ ಶಕುನಿಗಳನ್ನೂ ಅವರವರಿಗೆ ಉಚಿತವಾದ ದಾನಸನ್ಮಾನಗಳಿಂದ ಸಂತೋಷಪಡಿಸಿ ಧರ್ಮರಾಜನು ಈ ಸಭೆಯಲ್ಲಿ ಅಗ್ರಪೂಜೆಗೆ ಯಾರು ಅರ್ಹರು ಎನ್ನಲು ಭೀಷ್ಮನು ಹೀಗೆಂದನು-೪೧. ಬಲಿಯನ್ನು ಕಟ್ಟಿದವನೂ ಪೌರುಷದಿಂದ ಈ ಭೂಮಿಯನ್ನು ಪಾತಾಳದಿಂದ ಎತ್ತಿದವನೂ ಹಿಂದೆ ನರಸಿಂಹಾವತಾರದಲ್ಲಿ ರಾಕ್ಷಸನಾದ ಹಿರಣ್ಯಕಶಿಪುವನ್ನು ಹಟದಿಂದ ಸೀಳಿದವನೂ ಕ್ಷೀರಸಮುದ್ರವನ್ನು ಕಡೆಯುವ ಕಾಲದಲ್ಲಿ ಮಂದರಪರ್ವತವನ್ನು ತಂದವನೂ ಆದ ಕೃಷ್ಣನೇ ನಿಜವಾಗಿಯೂ ಅಗ್ರಪೂಜೆಗೆ ಅರ್ಹನಾದವನು, ಇತರರು ಅರ್ಹರಾದಾರೇ? ವlು ಎಂದು ತನ್ನ ಮನಸ್ಸಿನಲ್ಲಿ ಮುದ್ರೆಯೊತ್ತಿದ ಹಾಗೆ ಹೇಳಿದ ಭೀಷ್ಮನ ಮಾತನ್ನು ಅಂಗೀಕಾರಮಾಡಿ ಧರ್ಮರಾಯನು ಸಂತೋಷದಿಂದ ಕೂಡಿ ಹಾಗೆಯೇ ಮಾಡುತ್ತೇನೆಂದು ಪುರುಷೋತ್ತಮನಾದ ಶ್ರೀಕೃಷ್ಣನಿಗೆ ಅರ್ಥ್ಯವೆತ್ತಿದಾಗ-೪೨. ಆ ಸಭೆಯಲ್ಲಿ ಶಿಶುಪಾಲನು ಸುಮ್ಮನಿರದೆ ಕೋಪಿಸಿಕೊಂಡು ಮೇಲಕ್ಕೆ ಎದ್ದು ಪ್ರಳಯಕಾಲದ ಸಮುದ್ರಘೋಷದಿಂದ ಕೂಡಿ ಧರ್ಮರಾಜನೇ, ಛೀ ಕೃಷ್ಣನಿಗೆತ್ತಿದ ಅಮೌಲ್ಯವಾದ ಅನ್ನೋದಕವನ್ನು ತೆಗೆತೆಗೆ ಎಂದು ಒರಟಾಗಿ ನುಡಿದನು-೪೩. ತುಂಬಿದ ನರೆಯನ್ನೂ ಬೊಜ್ಜಿನ ಹೊಟ್ಟೆಯನ್ನೂ ದೇವವ್ರತನೆನಿಸಿಕೊಂಡು ಪ್ರಸಿದ್ದಿ ಪಡೆದ ಯಶಸ್ಸನ್ನೂ ತನ್ನಲ್ಲಿ ಕೂಡಿಕೊಂಡು ಇನ್ನೂ ಕೃಷ್ಣನಿಗೆ ಅರ್ಥ್ಯವನ್ನು ಕೊಡುವುದು ಎಂಬುದಾಗಿ ಈ ಭೀಷ್ಮನಂತೆ ಸಲಹೆಮಾಡುವವರು ಮತ್ತಾವನಾದರೂ ಇದ್ದಾನೆಯೇ ?
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy