SearchBrowseAboutContactDonate
Page Preview
Page 30
Loading...
Download File
Download File
Page Text
________________ ಉಪೋದ್ಘಾತ | ೨೫ ಅವಳ ಮೊಗಮಂ ನೋಡಿ ಮುಗುಳಗೆ ನಕ್ಕು' ಅವಳಲ್ಲಿ ಪ್ರಣಯಮೋಹವಂ ಬೀರಿ ಮಾತನಾಡುವನು. ಬ್ರೌಪದಿಯಾದರೋ ಭೀಮನಲ್ಲಿ ತನ್ನ ಅನುರಾಗವನ್ನು ವ್ಯಕ್ತಪಡಿಸುವಳು. ಈ ಸಂದರ್ಭಗಳಲ್ಲೆಲ್ಲಾ ಅರ್ಜುನನು ಪ್ರೇಕ್ಷಕನು ಮಾತ್ರನಾಗಿರುವನು. ಸಾಕ್ಷಾತ್ಪತಿಯೇ ಇದುರಿನಲ್ಲಿರುವಾಗ, ಅದರಲ್ಲಿಯೂ ಅವನು ಮೂರು ಲೋಕದ ಗಂಡನಾಗಿರುವಾಗ ಬ್ರೌಪದಿಯನ್ನು ರಕ್ಷಿಸಲು ಮೈದುನನಾದ ಭೀಮಸೇನನು ಈ ರೀತಿ ನಡೆದುಕೊಂಡುದು ವಿಸ್ಮಯಜನಕವಲ್ಲವೆ? ಈ ಸಮಯಗಳಲ್ಲೆಲ್ಲ ಪಂಪನು ಭೀಮಸೇನನು ದೌಪದಿಯ ಮೈದುನನೆಂಬುದನ್ನು ಮರೆತು ಪತಿಯೆಂಬ ಪೂರ್ವವಾಸನೆಯಿಂದಲೇ ಭ್ರಾಂತನಾಗಿದ್ದಾನೆ. ಅವನು ಮನಸ್ಸು ಮಾಡಿದ್ದರೆ ಈ ಸಂದರ್ಭಗಳನ್ನು ವ್ಯತ್ಯಾಸಮಾಡಲಾಗದಿರಲಿಲ್ಲ. ಪಂಪನಲ್ಲಿ ಜೈನ ವೈದಿಕ ಸಂಸ್ಕಾರಗಳು ಮಿಳಿತವಾಗಿವೆ. ಅವನು ಭಾರತವನ್ನು ರಚಿಸುತ್ತಿರುವುದು, ವೈದಿಕನಾದ-ಶೈವನಾದ ಅರಿಕೇಸರಿಗಾಗಿ, ಅವನು ಅದನ್ನು ಜ್ಞಾಪಕದಲ್ಲಿಟ್ಟುಕೊಂಡು ಶಿವಭಕ್ತಿಗೆ, ಪೂಜೆಗೆ, ಸ್ತೋತ್ರಕ್ಕೆ ಅಲ್ಲಲ್ಲೇ ಅವಕಾಶ ವನ್ನುಂಟುಮಾಡಿಕೊಂಡಿದ್ದಾನೆ. ಆದರೂ ತನ್ನ ಜೈನಸಂಸ್ಕಾರ ಅತಿಯಾಗಿಲ್ಲದಿದ್ದರೂ ಆಗಾಗ ಸ್ವಲ್ಪ ಹೆಡೆಯೆತ್ತಿ ಕಥಾಭಿತ್ತಿಯಲ್ಲಿಯೂ ಪಾತ್ರಪರಿಕಲ್ಪನೆಯಲ್ಲಿಯೂ ತನ್ನ ಪ್ರಭಾವವನ್ನು ಬೀರಿದೆ. 'ಪಂಪ ಭಾರತ'ವೂ 'ಜಿನಪದಾಂಭೋಜವರಪ್ರಸನ್ನವಾದುದು. ಪಂಪನಿಗೆ ವ್ಯಾಸರು, ವ್ಯಾಸಭಟ್ಟಾರಕರು. ವಿಷ್ಣು ಕೃಷ್ಣರು ಅಭವ, ಅಜ, ಅಜಿತ, ಅನಂತರು. ಅರ್ಜುನನ ಜನೋತ್ಸವದ ವರ್ಣನೆಯಲ್ಲಿ ತೀರ್ಥಂಕರರ ಜನೋತ್ಸವದ ಛಾಯೆಯಿದೆ. ಅರ್ಜುನನು ತಪಸ್ಸು ಮಾಡುವಾಗ ಇಂದ್ರನಿಗೆ ಆಸನಕಂಪವಾಗುತ್ತದೆ. ಸಂಸಾರಾಸಾರತೆಯ ಮತ್ತು ಭವಾವಳಿಗಳ ಸೂಚನೆ ಆಗಾಗ ಕಂಡುಬರುತ್ತದೆ. ಜನ್ಮಾಂತರಸ್ಕರಣೆ, ಜಾತಿಸ್ಮರತ್ವ, ಬಲದೇವ ವಾಸುದೇವರ ಜೋಡಿ ಇವೂ ಅಲ್ಲಲ್ಲಿ ಇವೆ. ಇವೆಲ್ಲಕ್ಕಿಂತಲೂ ಪಂಪನ ಜೈನಮತಪ್ರಭಾವ ವಿಶೇಷ ಕಂಡುಬರುವುದು ಶ್ರೀಕೃಷ್ಣನ ಪಾತ್ರರಚನೆಯಲ್ಲಿ, ಹಿಂದುಗಳಿಗೆ ಭಾರತವು ಪಂಚಮವೇದ, ಅದರ ಮೂಲಶಕ್ತಿ ಶ್ರೀಕೃಷ್ಣ, ಕೆಲವು ಕವಿಗಳಂತೂ ಭಾರತವನ್ನು ಕೃಷ್ಣಚರಿತೆಯೆಂದೇ ಕರೆದಿರುವುದೂ ಉಂಟು. ಜೈನರಿಗೆ ಭಾರತದಲ್ಲಾಗಲಿ ಕೃಷ್ಣ ಭಗವಂತನಲ್ಲಾಗಲಿ ಈ ಪೂಜ್ಯಮನೋಭಾವವಿಲ್ಲ. ಅವರ ಪ್ರಕಾರ ಕೃಷ್ಣನು ಗುಣಾವಗುಣಮಿಶ್ರಿತನಾದ ಒಬ್ಬ ಸಾಮಾನ್ಯಮನುಷ್ಯ-ವಾಸುದೇವ. ಈ ಜೈನಮತದ ಪ್ರಭಾವದ ಫಲವಾಗಿ ಪಂಪನು ಮಹಾಭಾರತದ ಬೃಹದ್ದೇವತೆಯಾದ ಶ್ರೀಕೃಷ್ಣನ ವಿಷಯದಲ್ಲಿ ತನ್ನ ಆ ತೀರ್ಥಂಕರನ ವಿಷಯದಲ್ಲಿದ್ದ ಶ್ರದ್ಧಾಭಕ್ತಿಗಳಿಲ್ಲದುದರಿಂದ ಅವನನ್ನು ಸಾಮಾನ್ಯವ್ಯಕ್ತಿಯಂತೆ ಚಿತ್ರಿಸಿ ಅವನ ಪ್ರಾಮುಖ್ಯವಿರುವ ಸನ್ನಿವೇಶಗಳನ್ನೆಲ್ಲಾ ತೇಲಿಸಿಬಿಟ್ಟು ಕೊನೆಗೆ ಆತನ ಗೀತೋಪದೇಶವನ್ನು 'ವಿಕ್ರಮಾರ್ಜುನನೊಳಾದ ವ್ಯಾಮೋಹಮಂ ಕಳೆಯಲೆಂದು ಮುಕುಂದು ದಿವ್ಯಸ್ವರೂಪಮಂ ತೋಲೆ..ನಿನಗೊಡ್ಡಿ ನಿಂದುದನಿದನೋವದೆ ಕೊಲ್ಗೊಡೆ ನೀನುಮೆನ್ನ ಕಜ್ಜದೊಳೆಸಗೆಂದು ಸೈತಜಿತನಾದಿಯ ವೇದರಹಸ್ಯದೊಳ್ ನಿರಂತರದ ಪರಿಚರ್ಯೆಯಿಂ ನೆಲೆಯೆ ಯೋಜಿಸಿದಂ ಕದನತ್ರಿಣೇತ್ರನಂ' ಎಂಬ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy