SearchBrowseAboutContactDonate
Page Preview
Page 297
Loading...
Download File
Download File
Page Text
________________ ೨೯೨ / ಪಂಪಭಾರತಂ ವಿರಹಿಗಳ ಸುಯ್ಯ ಬೆಂಕೆಯೊ ಳಿರದೊಣಗಿದುವಕ್ಕುಮಾಗಳೆನಲುರಿವುರಿಯಿಂ । ಕರಿಮುರಿಕನಾದುವುನದ ಪರಭೂತ ಷಟ್ಟರಣ ರಾಜಕೀರಕುಲಂಗಳ | ಉರಿ ಕೊಳೆ ದಸಗಾಣದ ದಸ ವರಿವರಿದು ಕುಜಂಗಳಂ ಪಡಲ್ವಡಿಸಿ ಭಯಂ | ಬೆರಗೊಳ! ನೆಗೆದುದಾ ವನ ಕರಿ ಶರಭ ಕಿಶೋರ ಕಂಠಗರ್ಜನ ಬನದೊಳ್ || ಸಂಗತ ಧೂಮಾವಳಿಯನಿ ಭಂಗಳ ಗತ್ತೊಳಟಿ ಪಾಯ್ತು ಪೊಗೆ ಪುಗೆ ಕಣ್ಣಂ | ಸಿಂಗಂಗಳಳುರ ಗರ್ಜಿಸಿ ಲಂಗಿಸಿ ಪುಡಪುಡನೆ ಪುಟ್ಟಿ ಸತ್ತುವು ಪಲವುಂ || ವ|| ಮತ್ತಮಲ್ಲಿ ಕೆಲವು ಲತಾಗೃಹಂಗಳೊಳಂ ಧಾರಾಗೃಹಂಗಳೊಳಂ ಕಂ ಒಡನಳುರ ಕಿರ್ಚು ತೋಳಂ ಸಡಿಲಿಸದಾ ಪ್ರಾಣವಲ್ಲಭರ್ ಪ್ರಾಣಮನಂ | ದೂಡಗಳೆದರೋಪರೂಪರೂ ೯೦ ೯೧ وع ಳೊಡಸಾಯಲ್ ಪಡೆದರಿನ್ನವುಂ ಸಯೊಳವೇ || ವ|| ಅಂತು ಖಾಂಡವವನಮಲ್ಲಮನನಲಂ ಪ್ರಳಯಕಾಳಾನಳನಂತಳುರ್ದು ಕೊಳೆ ಬಳಸಿ ಬಂದು ಕಾವ ನಾರಾಯಣನ ಸುದರ್ಶನಮಂಬ ಚಕ್ರದ ಕೋಳುಮಂ ವಿಕ್ರಮಾರ್ಜುನನ E& ಸಿಕ್ಕಿಕೊಳ್ಳುವಂತೆ ಅರ್ಜುನನು ಬಾಣಪ್ರಯೋಗಮಾಡಲು ಆ ಹಸಿಯ ಶುಂಠಿಯ ಚೂರುಗಳನ್ನೂ ಸರ್ಪಗಳ ಚೂರುಗಳನ್ನೂ ಅಗ್ನಿಯು ವ್ಯಾಪಿಸಿ ಸುಟ್ಟನು. ೯೦. ಮದಿಸಿದ ಕೋಗಿಲೆ ದುಂಬಿ ಮತ್ತು ಅರಗಿಳಿಗಳ ಸಮೂಹಗಳು ತಮ್ಮನ್ನು ಅಗಲಿದ ಪ್ರೇಮಿಗಳ ಬಿಸಿಯುಸಿರಿನ ಬೆಂಕಿಯಲ್ಲಿ ಒಣಗಿದುವೋ ಎನ್ನುವ ಹಾಗೆ ಉರಿಯುವ ಬೆಂಕಿಯ ಜ್ವಾಲೆಯಿಂದ ಸುಟ್ಟು ಕರಿಮುರುಕಾದುವು. ೯೧. ಬೆಂಕಿಯು ಆಕ್ರಮಿಸಲು ಏನುಮಾಡಬೇಕೆಂದು ತೋಚದೆ ದಿಕ್ಕುದಿಕ್ಕಿಗೆ ಓಡಿ ಮರಗಳನ್ನು ಕೆಳಗುರುಳಿಸಿ ಭಯದಿಂದ ಕೂಗಿಕೊಳ್ಳಲು ಕಾಡಾನೆಯ ಶರಭಗಳ ಮರಿಗಳ ಕೊರಳ ಗರ್ಜನೆ ಆ ಕಾಡಿನಲ್ಲಿ ಚಿಮ್ಮಿ ಹಾರಿದುವು. ೯೨. ಒಟ್ಟಾದ ಹೊಗೆಯ ಸಮೂಹವನ್ನು ಆನೆಯೆಂದು ಭ್ರಾಂತಿಸಿ ಸಿಂಹಗಳು ಕೂಗಿಕೊಂಡವು. ಮೇಲೆಹಾಯ್ದು ಹೊಗೆಯು ಕಣ್ಣನ್ನು ವ್ಯಾಪಿಸಲು ಗರ್ಜನೆಮಾಡಿ ನೆಗೆದು ಪುಡಪುಡನೆ ಸುಟ್ಟು ಸತ್ತುಹೋದವು. ವll ಅಲ್ಲಿಯ ಕೆಲವು ಬಳ್ಳಿ ಮನೆಯಲ್ಲಿಯೂ ಧಾರಾಗೃಹಗಳಲ್ಲಿಯೂ ೯೩. ಉರಿಯು ತಮ್ಮನ್ನು ಒಟ್ಟಿಗೆ ಸುಡಲು ತಮ್ಮ ತೋಳುಗಳನ್ನು ಸಡಿಲಿಸದೆ ಆ ಪ್ರಿಯಪ್ರೇಯಸಿಯರು ಜೊತೆಯಲ್ಲಿಯೇ ಪ್ರಾಣವನ್ನು ಕಳೆದರು. ಪ್ರಿಯರು ಪ್ರಿಯರೊಡನೆ ಸಾಯುವ ಅದೃಷ್ಟವನ್ನು ಪಡೆದರು. ಇದಕ್ಕಿಂತ ಬೇರೆ ಅದೃಷ್ಟವೂ ಉಂಟೇ? ವ|| ಹಾಗೆ ಖಾಂಡವವನವೆಲ್ಲವನ್ನೂ ಅಗ್ನಿಯು ಪ್ರಳಯಕಾಲದ ಬೆಂಕಿಯಂತೆ ಸುಟ್ಟು ತಾನು ಭುಂಜಿಸುತ್ತಿರಲು ಸುತ್ತಲೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy