SearchBrowseAboutContactDonate
Page Preview
Page 295
Loading...
Download File
Download File
Page Text
________________ ೨೯೦) ಪಂಪಭಾರತಂ ಪರಮಾಣುವನಿತು ಬನದೊಳ್ ಚರಾಚರಂ ಪೋಗೆ ತಣಿಯನನಲನದರ್ಕಾ೦ | ನೆರಮವೆನುಗ್ರ ಕಿನ್ನರ ಸುರ ದನುಜೋರಗರ ಕದನಮೇಂ ನಿನಗರಿದೇ || ೮೪ ವ| ಎಂಬುದುಮಂತ ಗಯ್ಯನನ್ನ ಸಾಹಸಮಂ ನೋಡಿಯೆಂದು ವಿಕ್ರಾಂತ ತುಂಗನುತ್ತುಂಗ ಭುಜಪರಿಘದೆರಡು ದೆಸೆಯೊಳಂ ತವದೊಣಗಳಂ ಬಿಗಿದು ಗಾಂಡೀವಮನೇಲಿಸಿ ನೀವಿ ಜೇವೊಡೆದು ದಿವ್ಯಾಸ್ತಂಗಳಂ ಪಿಡಿದು ಕೆಯ್ತಿವಿಕೊಂಡಗ್ನಿದೇವನಂ ನೋಡಿ ಓಡುಗೆ ನಿಮ್ಮ ಮೆಯ್ಯ ಪಸಿವಾಂತ ವಿರೋಧಿಗಳನ್ನ ಕೆಯ್ಯೋಳ ಬಾಡುಗೆ ಕೊಳ್ಳಿಮುಣ್ಣಿಮೆನೆ ಕೇಳನಲಂ ಪರಸುತ್ತಮಾ ಲಯ | ಕ್ರೀಡೆಯೊಳೀ ಚರಾಚರಮುಮಂ ಸುಡುವಂದಿನ ಮಯಮಗಳಂ ಮಾಡಿ ತಗುಳು ನೀಳು ಬಳೆದರ್ವಿಸೆ ಪರ್ವಿದನಾ ವನಾಂತಮಂ || ೮೫ ಮll ಫಳ ಕರ್ಪೂರ ಲವಂಗ ಲುಂಗ ಲವಳೀ ಹಿಂತಾಳ ತಾಳೀ ತಮಾ ಛ ಛತಾ ಸುಂದರ ನಂದನಕ್ಕಳುರೆ ಮುಂ ತನ್ನರ್ಚಿಗಳ್ ಬಂದು ಮೊ | ಕಳಮೆತ್ತಂ ಸುರಿಯುತ್ತುಮಿರ್ಪ ರಸಮಂ ಮುಂ ಪೀರ್ದುಕೊಂಡಂ ಮನಂ ಗೊಳಿ ಸಪ್ತಾರ್ಚಿ ಪೊದಳು ನೀಳೊಸಗೆಯಿಂದಾಪೋಶನಂಗೊಲ್ವವೋಲ್ || ೮೬ ಬಾಣಸಮೂಹವನ್ನು ಸಂಧಾನಮಾಡು, ೮೪, ಈ ವನದಲ್ಲಿ ಪರಮಾಣುವಷ್ಟು ಚರಾಚರ ಪ್ರಾಣಿಗಳು ಹೊರಗೆ ಹೋದರೂ ಅಗ್ನಿಯು ತೃಪ್ತಿಪಡಲಾರ. ಅದಕ್ಕೆ ನಾನು ಸಹಾಯಕನಾಗಿದ್ದೇನೆ. ಭಯಂಕರರಾದ ಕಿನ್ನರರು, ದೇವತಗಳು, ರಾಕ್ಷಸರು, ನಾಗರು ಇವರೊಡನೆ ಯುದ್ಧಮಾಡುವುದು ನಿನಗೆ ಅಸಾಧ್ಯವೇ? ವlು ಅರ್ಜುನನು ಹಾಗೆಯೇ ಮಾಡುತ್ತೇನೆಂದನು. ನನ್ನ ಪರಾಕ್ರಮವನ್ನು ನೋಡಿ ಎಂದು ಉತ್ತಮಪರಾಕ್ರಮಿಯಾದ ಅರ್ಜುನನು ತನ್ನ ಎತ್ತರವಾದ ಗದೆಯಂತಿರುವ ಎರಡು ಭುಜಗಳಲ್ಲಿಯೂ ಅಕ್ಷಯತೂಣೀರಗಳನ್ನು ಬಿಗಿದುಕೊಂಡು ಗಾಂಡೀವವೆಂಬ ಬಿಲ್ಲಿಗೆ ಹೆದೆಯೇರಿಸಿ ನೀವಿ ಜಡಿದು ಶಬ್ದಮಾಡಿನೋಡಿ ದಿವ್ಯಾಸ್ತಗಳನ್ನು ಕಯ್ಯಲ್ಲಿ ಹಿಡಿದು ಅಗ್ನಿದೇವನನ್ನು ನೋಡಿ -೮೫. ನಿಮ್ಮ ಶರೀರದ ಹಸಿವು ಓಡಲಿ; ಪ್ರತಿಭಟಿಸಿದ ನಿಮ್ಮ ಶತ್ರುಗಳು ನಮ್ಮ ಕಯ್ಯಲ್ಲಿ ನಾಶವಾಗಲಿ; ತೆಗೆದುಕೊಳ್ಳಿ, ಉಣ್ಣಿ ಎನ್ನಲು ಅವರನ್ನು ಹರಸುತ್ತ ಪ್ರಳಯಕಾಲದಲ್ಲಿ ಈ ಚರಾಚರವನ್ನೆಲ್ಲ ಸುಡುವ ಅಂದಿನ ಶರೀರವನ್ನೂ ಮೀರಿದ ಆಕಾರವನ್ನು ಧರಿಸಿ ನೀಳವಾಗಿ ಬೆಳೆದು ಸುಡುವುದಕ್ಕಾಗಿ ಆ ವನದ ಒಳಭಾಗವನ್ನೆಲ್ಲ ಆಕ್ರಮಿಸಿದನು. ೮೬. ಫಲಿಸಿರುವ ಕರ್ಪೂರ, ಲವಂಗ, ಮಾದಲ, ಅರನೆಲ್ಲಿ, ಹಿಂತಾಳ, ತಾಳೆ, ಹೊಂಗೆಯಬಳ್ಳಿ ಇವುಗಳಿಂದ ಸುಂದರವಾಗಿದ್ದ ವನವನ್ನು ಮೊದಲೇ ತನ್ನ ಉರಿಯ ಜ್ವಾಲೆಗಳು ಹರಡಿರಲು ಮುಂದುವರಿದು ದೀರ್ಘವಾಗಿ ಬೆಳೆದು ಸಂತೋಷದಿಂದ ಆಪೋಶನವನ್ನು ತೆಗೆದುಕೊಳ್ಳುವ ಹಾಗೆ ವಿಶೇಷವಾಗಿ ಸುರಿಯುತ್ತಿರುವ ಮರದ ರಸವನ್ನು ಅಗ್ನಿಯು ತೃಪ್ತಿಯಾಗುವಷ್ಟು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy