SearchBrowseAboutContactDonate
Page Preview
Page 283
Loading...
Download File
Download File
Page Text
________________ ೨೭೮) ಪಂಪಭಾರತಂ ಮನಳವಿದಪ್ಪದೊಂದೊಂದನಿಸುವಂತೆ ಪಲವನಚ್ಚು ನಲಂ ಬಿರಿಯೆ ಗಜ ಗರ್ಜಿಸಿ ಪಾಯ್ಕ ಸಿಂಗಂಗಳುಮಂ ಕಂಡುಕಂ| ಆಸುಕರಂ ಗಡ ತಮಗತಿ ಭಾಸುರ ಮೃಗರಾಜ ನಾಮಮುಂ ಗಡಮಂದಾ | ದೋಸಕ್ಕೆ ಮುಳಿದು ನೆಗದ್ದಿರಿ ಕೇಸರಿ ಕೇಸರಿಗಳನಿತುಮಂ ತಿಂದಂ || ಇಳೆದವು ನೆತ್ತರೊಳ್ ತ ಇದಂ ತನುರಮನುರು ಗಜಂಗಳನಾಟಂ | ದಲಿಸಿ ಕೋಲುತಿರ್ಪವೆಂಬೀ ಕುಪಿನೊಳರಿಗಂಬರಂ ಗಜಪ್ರಿಯರೊಳರೇ || ವ|| ಅಂತು ನರ ನಾರಾಯಣರಿರ್ವರುಮನವರತ ಶರಾಸಾರ ಶೂನೀಕೃತ ಕಾನನಮಾಗಚ್ಚು ಮೃಗವ್ಯ ವ್ಯಾಪಾರದಿಂ ಬುಲ್ಲು ಮನದಂತ ಪರಿವ ಜಾತ್ಯಶ್ವಂಗಳನೇ ಬರೆವರೆಚoll ಜವಮುಟದೊಂದು ಸೋಗನವಿಲೊಯ್ಯನೆ ಕರ್ಕಡಗಾಸಿಯಾಗಿ ಪಾ. ಜುವುದುಮಿದನ್ನ ನಲ್ಲಳ ರತಿಶ್ರಮವಿಶ್ವಥ ಕೇಶಪಾಶದೊಳ್ | ಸವಸವನಾಗಿ ತೋಟದಪುದೆಂಬುದ ಕಾರಣದಿಂದದಂ ಗುಣಾ ರ್ಣವನಿಡಲೊಲ್ಲನಿಲ್ಲ ಹಯವಲನಸಂಚಳ ರತ್ನಕುಂಡಳಂ || - ೫೧ ಹೊಡೆಯುವ ಹಾಗೆ ಹಲವನ್ನು ಹೊಡೆದು ಕೆಡವಿದನು. ಭೂಮಿಯು ಬಿರಿದುಹೋಗುವ ಹಾಗೆ ಆರ್ಭಟದಿಂದ ಘರ್ಜನೆಮಾಡಿಕೊಂಡು ಮುನ್ನುಗ್ಗುತ್ತಿರುವ ಸಿಂಹಗಳನ್ನು ಕಂಡು-೪೯, ಇವು ಅತಿಕ್ರೂರವಾದುವು ಆದರೂ ಬಹು ಪ್ರಸಿದ್ದವಾದ ಮೃಗರಾಜನೆಂಬ ಹೆಸರು ಇವಕ್ಕೆ ಇದೆಯಲ್ಲವೆ? ಎಂದು ಆ ದೋಷಗಳಿಗಾಗಿ ಕೋಪಿಸಿಕೊಂಡು ಪ್ರಸಿದ್ಧನಾದ ಅರಿಕೇಸರಿಯು ಕೇಸರಿ (ಸಿಂಹ)ಗಳಷ್ಟನ್ನೂ ಎದುರಿಸಿ ಕೊಂದನು (ಕತ್ತರಿಸಿದನು), ೫೦, ಅವುಗಳ ರಕ್ತದಿಂದ ತನ್ನ ಎದೆಯನ್ನು ಲೇಪನ ಮಾಡಿಕೊಂಡನು. ಈ ಸಿಂಹಗಳು ಶ್ರೇಷ್ಠವಾದ ಆನೆಗಳನ್ನೂ ಮೇಲೆಬಿದ್ದು ಹಿಂಸಿಸಿ ಕೊಲ್ಲುತ್ತಿವೆ ಎಂಬ ಈ ಕೋಪದಲ್ಲಿ ಅರಿಕೇಸರಿಯ ಮಟ್ಟಕ್ಕೆ ಬರುವ ಗಜಪ್ರಿಯರು (ಆನೆಯನ್ನು ಪ್ರೀತಿಸುವವರು) ಇದ್ದಾರೆಯೇ? ವll ಹಾಗೆ ನರನಾರಾಯಣರಿಬ್ಬರೂ ಎಡಬಿಡದ ಬಾಣಗಳ ಮಳೆಯಿಂದ ಕಾಡುಗಳನ್ನೆಲ್ಲ ಬರಿದು ಮಾಡಿ ಹೊಡೆದು ಬೇಟೆಯ ಕಾರ್ಯದಿಂದ ಬಳಲಿ ತಮ್ಮ ಮನಸ್ಸಿನಷ್ಟೇ ವೇಗದಿಂದ ಹರಿಯುವ ಜಾತಿಕುದುರೆಗಳನ್ನು ಹತ್ತಿಬಂದರು. ೫೧. ಅಲ್ಲಿ ಕಕ್ಕಡೆ (ಮುಳ್ಳುಗೋಲು)ಯೆಂಬ ಆಯುಧದಿಂದ ಪೆಟ್ಟುತಿಂದು ಶಕ್ತಿಗುಂದಿ ಒಂದು ಗಂಡುನವಿಲು ನಿಧಾನವಾಗಿ ಹಾರುತ್ತಿತ್ತು. ಅದನ್ನು ನೋಡಿ ಅರ್ಜುನನು ಇದು ನನ್ನ ಪ್ರಿಯಳಾದ ಪ್ರಿಯಳಾದ ಸುಭದ್ರೆಯ ರತಿಕ್ರೀಡೆಯ ಕಾಲದಲ್ಲಿ ಬಿಚ್ಚಿಹೋದ ತುರುಬಿನ ಗಂಟಿಗೆ ಸಮಾವಾಗಿ ತೋರುತ್ತಿದೆ ಎಂಬ ಕಾರಣದಿಂದ ಕುದುರೆಯ ಅಲುಗಾಟದಿಂದ ಅಲುಗಾಡುವ ರತ್ನದ ಕುಂಡಲವನ್ನುಳ್ಳ ಅರ್ಜುನನು ಅದನ್ನು ಹೊಡೆಯಲು ಒಪ್ಪಲಿಲ್ಲ ವll ಹಾಗೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy