SearchBrowseAboutContactDonate
Page Preview
Page 280
Loading...
Download File
Download File
Page Text
________________ ಪಂಚಮಾಶ್ವಾಸಂ | ೨೭೫ ವರೆಗೆ ಮತ್ತು ಪಂದಿವೇಂಟೆಯ ಮಾತಂ ಬಿನ್ನಪಂಗೆಯ್ಯಂಪಿರಿಯಕರ | ನೆಲನಂ ನಿಜುಗೆಯಂ ನಡವೊಂದು ಪದಮುಮಂ ಸೋವಳಿ ಮೇವಳಿ ಬಿಸುವಳಿಯಂ ಬಲಮಂ ಶಕುನಮನೊಟ್ಟಿತ್ತುಪಾಯಮಂ ಪಿಡಿವಂದೀತನೆ ವಂದಿ ಕುರುಡು ಕುಂಟೆಂ | ದಲಸದಳದಿಂತು ಬಲೆಗೆ ಬೆರಲೆ ಪಜ್ಜೆಯಂ ನೆಲೆಗಳಂ ಕಿಡಲೀಯದ ಒಲೆಯ ಮೇಲಾದೊಡಂ ಶಕುನಮಂ ನಿಪಂತ ನಿಳಿಸುವೆಂ ಸಂದಿಯಂ ನೀಂ ಮೆಚ್ಚಲುಂ || ೪೬ ವlು ಮತ್ತು ಸಂದಿವೇಂಟೆಯ ನಾಯಂತಪುವೆಂದೂಡಸಿಯ ನಡುವುಮಗಲುರಮುಂ ತನ್ನು ಕಟ್ಟಿದ ಕಿವಿಯುಂ ಪುರ್ವಂ ತೋರವಾಗಿ ನಿರ್ಮಾಂಸಮಪ್ಪ ಕಾಲ್ಗಳುಂ ನೆಲನಂ ಮುಟ್ಟದುಗುರ್ಗಳುಮನುಳ್ಳುದಾಗಿ ಜಾತ್ಯತ್ವದಂತೆ ಬೇಗಮಾಗಿ ಕೋಳಿ ಕಾಳಿಕಾಳಿನಂತ ಬಳಿಯುವಿಡಿದು ತುಂಬನ ನೀರನುರ್ಚಿದಾಗಳಡ ಪರಿದು ಮನ್ನೆಯರಂತ ಕಾದಿಯಲಸದ ಸೂಳೆಯಂತ ಕೋಳಂ ಪಟ್ಟಟ್ಟಸದ ತಕ್ಕನಂತ ನಂಬಿಸಿಯು ಮೊತ್ತರದಂತೂತ್ತಿಯು ಮುರಿಯಳುರ್ವಂತಳುರ್ದುಕೂಳ್ಳುದಿದು ಪಂದಿವೇಂಟೆಯ ನಾಮ್ ಮತ್ತು ಕಿಜುವೇಂಟೆಯ ನಾಯಂ ಕೊಂಡುಂ ಜಾಳಿಯುಂ ನೆಲನುಂ ಪೋಲ್ತುಂ ಪೊಲನುಮನಳಿದು ಬಚಿಯೊಳ್ ಹೆಜ್ಜೆ ಎರಡನ್ನೂ ತಿಳಿದವನೇ ಚತುರ. ಜಾಣನಿಗೂ ತಿಳಿಯದ ಪ್ರೌಢವಾದ ಹೆಜ್ಜೆಯ ಗುರುತುಗಳುಂಟೆ ? ವಇನ್ನು ಹಂದಿಯ ಬೇಟೆಯ ಮಾತನ್ನು ವಿಜ್ಞಾಪಿಸಿ ಕೊಳ್ಳುತ್ತೇನೆ - ೪೬. ಹಂದಿಯನ್ನು ಹಿಡಿಯುವಾಗ ನೆಲವನ್ನೂ ನಿಂತ ಸ್ಥಳವನ್ನೂ ನಡೆಯುವ ರೀತಿಯನ್ನೂ ಹಿಡಿಯುವ ಕ್ರಮವನ್ನೂ ಮೇಯುವಿಕೆಯನ್ನೂ ಒಟ್ಟುಗೂಡಿಸುವಿಕೆಯನ್ನೂ ಶಕ್ತಿಯನ್ನೂ ಶಕುನಸಂಕೇತಗಳನ್ನೂ ಒಳ್ಳೆಯ ಉಪಾಯಗಳನ್ನೂ (ಉಳ್ಳವನು) ಇವನೇ (ಎಂಬ ಪ್ರೌಢಿಮೆಯನ್ನು ಪಡೆದಿದ್ದೇನೆ). ಹಂದಿಯು ಕುರುಡು ಅಥವಾ ಕುಂಟು ಎಂದು ಉದಾಸೀನಮಾಡದೆ ನನ್ನ ಶಕ್ತಿಯನ್ನು ಪ್ರದರ್ಶಿಸಿ ಹೆಜ್ಜೆಯ ಗುರುತುಗಳನ್ನು ಅವುಗಳ ವಸತಿಗಳನ್ನು ಕೆಡಿಸದೆ ಕಲ್ಲಿನ ಮೇಲಾದರೂ ಸಂಕೇತವನ್ನು ಸ್ಥಾಪಿಸುವ ಹಾಗೆ ನೀನು ಮೆಚ್ಚುವಂತೆ ಹಂದಿಯನ್ನು ನಿಲ್ಲಿಸುತ್ತೇನೆ. ವll ಮತ್ತು ಹಂದಿಯ ಬೇಟೆಯ ನಾಯಿಯು ಎಂತಹುದು ಎಂದರೆ ತೆಳುವಾದ ಸೊಂಟ, ಅಗಲವಾದ ಎದೆ, ನೆಟ್ಟಗೆ ನಿಂತಿರುವ ಕಿವಿಗಳು ಬಾಗಿದ ಹುಬ್ಬು, ದಪ್ಪವಾಗಿ ಮಾಂಸವಿಲ್ಲದ ಕಾಲುಗಳು, ನೆಲವನ್ನು ಮುಟ್ಟದ ಉಗುರು ಇವುಗಳಿಂದ ಕೂಡಿ ಜಾತಿಯ ಕುದುರೆಯಂತೆ ವೇಗವಾಗಿ ನಡೆದು ಶಾಸ್ತ್ರೀಯಮತದ ವಂಚಕನಂತೆ ತನ್ನ ಮಾರ್ಗವನ್ನು ಹಿಡಿದು, ತೂಬಿನ ನೀರಿನ ಹಾಗೆ ಸಡಿಲ ಮಾಡಿದ ತಕ್ಷಣವೇ ಅಡ್ಡವಾಗಿ ಹರಿದು, ಮಾನ್ಯರ ಸೇವಕನಂತೆ ಕಾದಲು ಆಲಸ್ಯ ಪಡದೆ ಸೂಳೆಯಂತೆ ಸುಲಿಗೆಗೊಂಡು ಓಡಿಸದೆ, ಯೋಗ್ಯನಂತೆ ನಂಬಿಸಿ ಒತ್ತರದಂತೆ (?) ಒತ್ತಿ ಉರಿಯು ಹರಡುವಂತೆ ಹರಡಿಕೊಳ್ಳುವುದು. ಇದು ಹಂದಿಬೇಟೆಯಲ್ಲಿ ಉಪಯೋಗಿಸುವ ನಾಯಿಯ ಲಕ್ಷಣ. ಇನ್ನು ಕಿರುಬೇಟೆಯ ನಾಯನ್ನು ತೆಗೆದುಕೊಂಡು ಸಡಿಲ ಮಾಡಿದ ನೆಲದ ಸ್ವರೂಪವನ್ನು ಹೊತ್ತನ್ನೂ ಹೊಲವನ್ನೂ ತಿಳಿದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy