SearchBrowseAboutContactDonate
Page Preview
Page 28
Loading...
Download File
Download File
Page Text
________________ ಉಪೋದ್ಘಾತ | ೨೩ ಸುಖವಾಗಿ ಅರಮನೆಯ ಅಂತಃಪುರದಲ್ಲಿದ್ದ ಸುಭದ್ರೆಗೆ ಮಹಾದೇವಿ ಪಟ್ಟಕಟ್ಟುವುದು ಅನುಚಿತವಾಗಿಯೇ ಕಾಣುತ್ತದೆ. ಪಂಪನು ಪ್ರಾರಂಭದಲ್ಲಿ ಬ್ರೌಪದಿಯ ವಿಷಯವನ್ನು ಪ್ರಸ್ತಾಪಿಸಿ ಕೊನೆಗೆ ಅವಳ ಹೆಸರನ್ನೇ ಎತ್ತದೆ ಸುಭದ್ರೆಗೆ ಪಟ್ಟಾಭಿಷೇಕ ಮಾಡಿಸುವನು. ವಾಸ್ತವವಾಗಿ ನೋಡುವುದಾದರೆ ದೌಪದಿಗುಂಟಾದ ಅಪಮಾನವೇ ಭಾರತಯುದ್ಧಕ್ಕೆ ಮೂಲಕಾರಣ. ಅವಳಿಗೆ ಕೊನೆಯಲ್ಲಿ ಸ್ಥಾನವಿಲ್ಲದಿರುವುದು ಸಮರ್ಪಕವಲ್ಲ, ಪಂಪನು ಅರ್ಜುನನನ್ನು ಕಥಾನಾಯಕನನ್ನಾಗಿ ಮಾಡಿಕೊಂಡಾಗ ನಾಯಿಕೆಯ ವಿಷಯದಲ್ಲಿ ಅವನಿಗೆ ಸ್ವಲ್ಪ ತೊಡಕುಂಟಾಗಿರಬೇಕು. ವೀರಾವೇಶವುಳ್ಳವಳೂ ಪಂಚಪತಿತ್ವವನ್ನುಳ್ಳವಳೂ ಕೇಶಾಪಕರ್ಷಣಾದಿ ಅವಮಾನಗಳಿಗೆ ಸಿಕ್ಕಿದವಳೂ ಆದ ದೌಪದಿಯು ಅವನ ದೃಷ್ಟಿಯಿಂದ ಕಥಾನಾಯಿಕೆಯಾಗಿರುವುದಕ್ಕೆ ಅರ್ಹಳಲ್ಲವೆಂದು ತೋರಿರಬೇಕು. ಆದುದರಿಂದ ಅವನು ಸುಭದ್ರೆಯನ್ನೇ ನಾಯಿಕೆಯನ್ನಾಗಿ ಮಾಡಿರುವನು. ಈ ವಿಷಯವನ್ನು ಸ್ಪಷ್ಟಪಡಿಸುವುದಕ್ಕಾಗಿಯೇ ಪಂಪನು ಬ್ರೌಪದಿಯ ವಿವಾಹವನ್ನು ಒಂದೆರಡು ಪದ್ಯಗಳಲ್ಲಿ ಮುಗಿಸಿ ಸುಭದ್ರಾಪರಿಣಯವನ್ನು ಒಂದು ಆಶ್ವಾಸವನ್ನಾಗಿ ವಿಸ್ತರಿಸಿರುವುದು. ಪಂಪನು ಸುಭದ್ರೆಗೆ ರಾಜ್‌ಪದವಿಯನ್ನು ಕೊಟ್ಟರೂ ನಮಗೇನೋ ದೌಪದಿಯೇ ಆ ಸ್ಥಾನಕ್ಕೆ ಅರ್ಹಳೆನ್ನಿಸುತ್ತದೆ. ಮತ್ತೊಂದು ವಿಷಯ, ದೌಪದಿಯ ಪಂಚಪತಿತ್ವವೂ ಲೌಕಿಕದೃಷ್ಟಿಯಿಂದ ಅಷ್ಟು ಸಮಂಜಸವಲ್ಲವೆಂದೇನೋ ಪಂಪನು ಅದನ್ನು ಮಾರ್ಪಡಿಸಿರುವನು. ಅವನ ಅಭಿಪ್ರಾಯದಂತೆ ಬ್ರೌಪದಿಯನ್ನು ಮದುವೆಯಾಗುವವನು ಅರ್ಜುನನೊಬ್ಬನೇ, ಐವರಲ್ಲಿ ವಿದ್ವಿಷ್ಟವಿದ್ರಾವಣನು ಕೈ ಹಿಡಿದ ಸ್ತ್ರೀಯ ಭೋಗದಲ್ಲಿ ಇತರರು ಭಾಗಿಗಳಾಗುವುದು ಹಾಸ್ಯಾಸ್ಪದವೆಂಬುದಾಗಿ ಆತನಿಗೆ ತೋರಿರಬೇಕು. ಬ್ರೌಪದಿಯ ಹೋಲಿಕೆ ಮತ್ತು ರಾಜೀಪದವಿ ರಾಣಿಯಾದ ಲೋಕಾಂಬಿಕೆಗೂ ಹಿತವಾಗಿದ್ದಿರಲಾರದು. ಆದುದರಿಂದ ಅದನ್ನು ತಪ್ಪಿಸುವುದಕ್ಕೆ ಪ್ರಯತ್ನಪಟ್ಟು ಅನೇಕ ಕಡೆ ತೊಂದರೆಗೆ ಸಿಕ್ಕಿ ಪೂರ್ವವಾಸನಾ ಬಲದಿಂದ ತನ್ನನ್ನೇ ತಾನು ಮರೆತಿದ್ದಾನೆ. ಪಾಂಚಾಲಿಗೆ ಬಂದೊದಗುವ ಆಪತ್ಕಾಲಗಳಲ್ಲೆಲ್ಲಾ ಆಕೆಯನ್ನು ಕಾಪಾಡುವುದು ಪಂಪನ ಪ್ರಕಾರ ಆಕೆಯ ಪತಿಯಾದ ಅರ್ಜುನನಿಗಿಂತಲೂ ಭೀಮಸೇನನೇ ಹೆಚ್ಚು. ಕಪಟವ್ಯೂತದಲ್ಲಿ ಧರ್ಮರಾಯನು ಎಲ್ಲರನ್ನೂ ಸೋತ ಮೇಲೆ ದೌಪದಿಯ ವಿಡಂಬನವಾಗುವ ಕಾಲದಲ್ಲಿ ಆ ಅನ್ಯಾಯವನ್ನು ನೋಡುತ್ತಿದ್ದಾಗ ಪ್ರೇಕ್ಷಕರಿಗೂ ಸಹಿಸ ಲಸಾಧ್ಯವಾದ ಆಕ್ರೋಶವುಂಟಾಗುವುದು. ಆಗ ಪಾಂಡವರು ಅಣ್ಣನ ನನ್ನಿಗೆ ಸಿಕ್ಕಿಬಿದ್ದು ಸುಮ್ಮನೆ ಕುಳಿತುಕೊಳ್ಳುವರು. ಆ ಸಂದರ್ಭದಲ್ಲಿ ಬ್ರೌಪದಿಯು ತನಗಾದ ಅಪಮಾನದ ಸಿಗ್ಗಿನಿಂದ ಮುಡಿಯಂ ಪಿಡಿದೆದವನಂ ಮಡಿಯಿಸಿ ಮತ್ತವನ ಕರುಳ ಏಣಿಲಿಂದೆನ್ನಂ ಮುಡಿಯಿಸುಗೆ, ಆ ಮುಡಿಯಂ ದಲ್ ಮುಡಿಯೆಂ ಗಳಂ, ಈಗಳಿಂತೆನ್ನಯ ಮುಡಿಯಂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy