SearchBrowseAboutContactDonate
Page Preview
Page 276
Loading...
Download File
Download File
Page Text
________________ ಪಂಚಮಾಶ್ವಾಸಂ | ೨೭೧ ಮುಗುಳ್ಯದನಾದ ಸಂಪಗೆ ಮಡದಿರ್ಮುತ್ತ ಮರಲ್ಲರಲ್ಲ ಮ ಲಿಗೆ ನನೆಗರ್ಚಿ ಕಾಕಳಿಯೋಳಾಣತಿಗೆಯ ಮದಾಳಿ ಪೋ ಪುಗಲ್ | ಪುಗಲನುತಿರ್ಪ ಪಕ್ಕಿ ಮನಮಂ ಕವರುತ್ತಿರೆ ಯೋಗಿಗಂ ವಿಯೋ ಗಿಗಮರಿದಾಯ್ತು ಪೊಕ್ಕ ಪುಗಿಲಿಂತು ವಸಂತಕ ಚಕ್ರವರ್ತಿಯಾ || ೩೫ ವ|| ಅಂತು ಭುವನಕೆಲ್ಲಮೊಸಗೆವರ್ಪಂತೆ ಬಂದ ವಸಂತದೊಳೊಂದು ದಿವಸಮನ್ನವಾಸದೋಲಗದೊಳುದಾತ್ತನಾರಾಯಣನುಂ ನಾರಾಯಣನುಮಿರ್ದಗೊರ್ವಂಕಂ| ತೂಟೆಕವಡಂ ಮರವಿಲ್ ಕಟ್ಟಿದ ಪಡಕಟ್ಟು ಬೇಂಟೆವತಿ ದೊರೆಯೊಳೊಡಂ || ಬಟ್ಟಸಿಯ ಸುರಗಿ ದಳಿವದ ತೊಟ್ಟಂಗಿಗೆ ತನ್ನೊಳಮರೆ ಬೇಂಟೆಯನೊರ್ವಂ || ಬಂದು ಪೊಡವಟ್ಟು ಕಂಡಿಂ ತಂದಂ ಪೊಲನುಡುಗಿ ಬಂದುದುಡಿದುದು ಪುಲ್ ಕಾ | ಡುಂ ದಲೆಲೆಯಿಕ್ಕಿ ಘಳಿಲಿನ ನಿಂದುವು ತಣಿದುವು ಮೃಗಂಗಳೆತ್ತಲುಮೀಗಳ | ಸುಳೆಯದು ಗಾಳಿ ಮೃಗಂ ಕೆ ಹೈಟೆಗಳ ಮೇತದೊಳೆ ತಣಿದಪುವು ಪಂದಿಗಳು | ಪಟ ನವಿರಿಕ್ಕಿದುವಾಳಂ ಪಲು ಪರಿದಾಡಲ್ ಕರಂ ಬೆಡಂಗವನಿಪತೀ |- ೩೮ ೩೭ ಹೂವಿನ ವಾಸನೆಯಿಂದ ಗಂಧಯುಕ್ತವಾಗದೆ ಅರಳಿದ ತಾವರೆಯ ವನಗಳಲ್ಲಿ ಸುತ್ತಾಡಿಯೂ ತಂಪಾಗಿ ಆಗದೆ ಕೂಡಲೆ ಬಂದ ಹಣ್ಣಾದ ಮಾವಿನ ಮರದ ಹೊಸ ಹೂಗಳಲ್ಲಿ ಸೇರಿಕೊಂಡು ಅದರಿಂದ ಹೊರಹೊಮ್ಮಿದ ಸುವಾಸನೆಯು ಮುಖಗಳನ್ನು ಚಳಿಲ್ಲನೆ ಆಕ್ರಮಿಸಿ ಅಪ್ಪಳಿಸುವಂತೆ ವಸಂತಮಾಸದಲ್ಲಿ ತೆಂಕಣಗಾಳಿ ಬೀಸಿತು. ೩೫. ಮೊಗ್ಗಿನ ಹದಕ್ಕೆ ಬಂದ ಸಂಪಗೆಯೂ ಹಬ್ಬಿದ ಅದಿರ್ಮುತ್ತೆಯೂ ಚೆನ್ನಾಗಿ ಅರಳಿದ ಮಲ್ಲಿಗೆಯೂ ಹೂವನ್ನು ಕಚ್ಚಿಕೊಂಡು ಇಂಪಾದ ಧ್ವನಿಯಲ್ಲಿ ಆಲಾಪನೆ ಮಾಡುತ್ತಿರುವ ಸೊಕ್ಕಿದ ದುಂಬಿಯೂ, ಹೋಗಿ ಪ್ರವೇಶಿಸಿರಿ, ಪ್ರವೇಶಿಸಿರಿ ಎನ್ನುತ್ತಿರುವ ಕೋಗಿಲೆಪಕ್ಷಿಯೂ ಮನಸ್ಸನ್ನು ಸೂರೆಗೊಳ್ಳುತ್ತಿರಲು ಯೋಗಿಗೂ ವಿಯೋಗಿಗೂ ವಸಂತ ಚಕ್ರವರ್ತಿಯ ಪ್ರವೇಶವು ಸಹಿಸಲಸಾಧ್ಯವಾಯಿತು. ವl ಹಾಗೆ ಲೋಕಕ್ಕೆಲ್ಲ ಹಬ್ಬ ಬರುವ ಹಾಗೆ ಬಂದ ವಸಂತ ಕಾಲದಲ್ಲಿ ಒಂದು ದಿವಸ ಭೋಜನಶಾಲೆಯ ಸಭೆಯಲ್ಲಿ ಅರ್ಜುನನೂ ಕೃಷ್ಣನೂ ಇದ್ದ ಸ್ಥಳಕ್ಕೆ ೩೬. ತೊಟ್ಟ ಎಕ್ಕಡ, ಕಟ್ಟಿದ ಮರದ ಬಿಲ್ಲು, ಕಟ್ಟಿದ ಹಣೆಯ ಕಟ್ಟು, ಬೇಟೆಯ ಪರೆ (ತಮಟೆ) ಸರಿಯಾಗಿ ಹೊಂದಿಕೊಂಡಿರುವ ಸಣ್ಣ ಕತ್ತಿ, ಉತ್ತರೀಯದಿಂದ ಕೂಡಿದ ಅಂಗಿ ಇವುಗಳಿಂದ ಕೂಡಿದ ಬೇಟೆಗಾರನೊಬ್ಬನು ೩೭. ಬಂದು ನಮಸ್ಕಾರ ಮಾಡಿ ಹೀಗೆಂದನು : ಹೊಲಗಳಲ್ಲಿ ಕಾಳು ಕಡ್ಡಿಗಳನ್ನು ಬಿಡಿಸಿಯಾಯಿತು.ಹುಲ್ಲೊಕ್ಕಣೆಯೂ ಆಯಿತು. ಕಾಡು ನಿಜವಾಗಿಯೂ ಎಲೆ ಬಿಟ್ಟು ಚಿಗುರಿ ನಿಂತಿವೆ. ಎಲ್ಲ ಕಡೆಯಲ್ಲಿಯೂ ಈಗ ಮೃಗಗಳು ತೃಪ್ತಿಪಟ್ಟಿವೆ. ೩೮. ರಾಜನೇ ಈಗ ಗಾಳಿ ಬೀಸುವುದಿಲ್ಲ, ಮೃಗಗಳು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy