SearchBrowseAboutContactDonate
Page Preview
Page 271
Loading...
Download File
Download File
Page Text
________________ ಮ ೨೬೬ | ಪಂಪಭಾರತ ವಗ ಆಗಲ್ ತನ್ನ ಪೇಟ್ಟಿ ನಾಯಕರ ಸಾವಂ ಕೇಳು ಯಾದವಬಲ ಜಳನಿಧಿವೆರಸು ವಿಳಯಕಾಲ ಜಳನಿಧಿಯಂತೆ ತೆರಳಲ್ ಬಗದ ಬಲದೇವನಂ ವಾಸುದೇವನಿಂತೆಂದಂ ಕುಲಮಂ ಪೇಳ್ಕೊಡ ಸೋಮವಂಶತಿಲಕಂ ಬಿಲ್ಲಾಳನಂಬೇಡು ಜ್ವಲ ತೀವ್ರಾಸ್ತನಿಘಾತಪಾತಿತ ರಿಪುವೋಹಂ ಬಲಂಬೇಡ್ ದೋ | ರ್ವಲದೊಳ್ ಕೇಳ್ ನಿನಗ ಬಲಸ್ಯನೊಡೆಯಂ ಕೂಸಿಂಗೆ ಕೊಂಡುಯ್ಯುದೇ ಚಲಮ ದೋಷಮದರ್ಕೆ ನೀನ್ ಮುಳಿವುದೇ ನೀನ್ ಪೇಳ್ಕೊಡಾನ್ ಸಾಲೆನೇ || ೨೨ ವ|| ಎಂದು ಬಲದೇವನ ಮನದೊಳಾದ ಮುಳಿಸೆಂಬ ಕಿಚ್ಚಂ ತನ್ನ ಮೃದು ಮಧುರ ವಚನರಚನಾಜಲಂಗಳಂ ತಳಿದು ನದಿಪಿದನಿತ್ತ ರಿಕ್ರಮಾರ್ಜುನನುಂ ಕತಿಪಯ ದಿನಂಗಳಿಂದನೇಕ ಸಹಕಾರಾಶೋಕಾನೋಕಹನಂದನವನಪ್ರಸ್ತಮನಿಂದ್ರ ಪ್ರಸ್ವಮನೆಯ್ದವಂದು ಮುನಮ ತನ್ನ ಬರವನಳಿದು ಫೋಲಲೋಳಷಶೋಭೆಯಂ ಮಾಡಿ ತನಗಿದಿರ್ವಂದ ಕೊಂತಿಯ ಧರ್ಮಪುತ್ರ ಭೀಮಸೇನಾದಿಗಳ ಪಾದ ಪದ್ಯಂಗಳಂ ತನ್ನ ಕರಕಮಲಂಗಳಿಂದರ್ಚಿಸಿ ತದೀಯಾಶೀರ್ವಚನಂಗಳನಾಂತು ತನಗೆ ಪೊಡಮಟ್ಟ ನಕುಲ ಸಹದೇವರಂ ಪರಸಿ ಯಾರು ಸಮರ್ಥರಾಗಿರುತ್ತಾರೆ, ಅಂತಹ ಪರಾಕ್ರಮವುಳ್ಳ ಶೂರಸಾಮಂತರೇ ಹೋಗಿ” ಎಂದು ಹಲವರನ್ನು ನೇಮಿಸಲು (ಹಾಗೆ ಬಂದು ಎದುರಿಸಿದವರನ್ನು ಅರ್ಜುನನು ಪ್ರಯೋಗಿಸಿದ ಭಯಂಕರವಾದ ಬಾಣಗಳ ಧಾರಾಪ್ರವಾಹವು ನದಿಯು ನುಗ್ಗುವ ಹಾಗೆ ಆಕ್ರಮಿಸಿ ಕೊಂದಿತು. ವ|| ಆಗ ತಾನು ನಿಯಮಿಸಿದ ನಾಯಕರ ಸಾವನ್ನು ಕೇಳಿ ಯಾದವ ಬಲಸಮುದ್ರದೊಡಗೂಡಿ ಪ್ರಳಯಕಾಲದ ಸಮುದ್ರದಂತೆ ಹೊರಡಲು ಯೋಚಿಸಿದ ಬಲರಾಮನನ್ನು ವಾಸುದೇವನು ಹೀಗೆಂದನು-೨೨. ಕುಲವನ್ನು ಹೇಳುವುದಾದರೆ ಚಂದ್ರವಂಶದಲ್ಲಿ ಶ್ರೇಷ್ಠನಾದವನಾಗಿದ್ದಾನೆ. ಪರಾಕ್ರಮವನ್ನು ಹೇಳುವುದಾದರೆ ತನ್ನ ತೀಕ್ಷಬಾಣಗಳ ಹೊಡೆತದಿಂದ ಶತ್ರುವ್ಯೂಹವನ್ನು ಕೆಡವಿದ ಸಾಮರ್ಥ್ಯವುಳ್ಳವನಾಗಿದ್ದಾನೆ. ಬಲವನ್ನು ಹೇಳುವುದಾದರೆ ಬಾಹುಬಲದಲ್ಲಿ ನಿನಗಿಂತಲೂ ಬಲಿಷ್ಠನಾದವನು; ನಮ್ಮ ಕೂಸಿಗೆ ಒಡೆಯನಾಗಿ ಕೊಂಡುಹೋಗಲಿ, ಹಟವೇತಕ್ಕೆ? ದೋಷವೇನು? ಅದಕ್ಕೆ ನೀನು ಕೋಪಿಸುವುದೇ ? ನೀನು ಹೋರಾಡು ಎಂದು ಆಜ್ಞೆ ಮಾಡುವುದಾದರೆ ಅವನೊಡನೆ ಯುದ್ಧಮಾಡಲು ನಾನೇ ಸಮರ್ಥನಲ್ಲವೇ? ವು ಎಂದು ಬಲರಾಮನ ಮನಸ್ಸಿನಲ್ಲುಂಟಾದ ಕೋಪವೆಂಬ ಬೆಂಕಿಯನ್ನು ತನ್ನ ಮೃದುಮಧುರವಚನರಚನಾಜಲಗಳನ್ನು ಸಿಂಪಿಸಿ ನಂದಿಸಿದನು. ಈ ಕಡೆ ವಿಕ್ರಮಾರ್ಜುನನು ಕೆಲವು ದಿವಸಗಳಲ್ಲಿ ಅನೇಕ ಮಾವಿನ ಮತ್ತು ಅಶೋಕಮರಗಳುಳ್ಳ ವನಗಳಿಂದ ಕೂಡಿದ ಇಂದ್ರಪ್ರಸ್ಥಪುರವನ್ನು ಸೇರಿದನು. ಮೊದಲೇ ತಾನು ಬರುವುದನ್ನು ತಿಳಿದು ಪಟ್ಟಣವನ್ನು ಎಂಟು ವಿಧವಾದ ಅಲಂಕಾರಗಳಿಂದ ಅಲಂಕರಿಸಿತ್ತು. ತನಗಿದಿರಾಗಿ ಬಂದ ಕುಂತೀದೇವಿ, ಧರ್ಮರಾಜ, ಭೀಮಸೇನನೇ ಮೊದಲಾದವರ ಪಾದಕಮಲಗಳನ್ನು ತನ್ನ ಕಮಲಹಸ್ತಗಳಿಂದ ಪೂಜೆಮಾಡಿ ಅವರ ಆಶೀರ್ವಾದಗಳನ್ನು ಪಡೆದನು. ತನಗೆ ನಮಸ್ಕಾರ ಮಾಡಿದ ನಕುಲ ಸಹದೇವರನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy