SearchBrowseAboutContactDonate
Page Preview
Page 262
Loading...
Download File
Download File
Page Text
________________ ಪಂಚಮಾಶ್ವಾಸಂ ಕಂ|| ಶ್ರೀ ವೀರ ಕೀರ್ತಿ ಶ್ರೀ ವಾಕ್‌ಶ್ರೀಯಂಬ ಪಂಡಿರಗಲದೆ ತನ್ನೋ ಭಾವಿಸಿದ ಪೆಂಡಿರೆನಿಸಿದ ಸೌವಾಗ್ಯದ ಹರಿಗನಮನೇನೊಲ್ಲಪನೋ | ಎಂಬ ಬಗೆಯೊಳ್ ಸುಭದ್ರೆ ಪ ಲುಂಬಿ ಮನಂಬಸದೆ ತನುವನಾಳೆಸಲಲರಿಂ | ತುಂಬಿಗಳಿಂ ತಣ್ಣಲರಿಂ ತುಂಬಿದ ತಿಳಿಗೊಳದಿನೆಸೆವ ಬನಮಂ ಪೊಕ್ಕಳ್ || ತಳತಳಿಸಿ ಪೊಳೆವ ಮಾವಿನ ತಳಿರ್ಗಳಶೋಕೆಗಳ ಮಿಸುಪ ಲತೆಗಳ ನೆಲೆ ಬ | qಳ ಬಳೆದ ಬೇಟದುರುಳಿಯ ಬಳಗವಿದೆಂದೆಳೆಯಳೆಳಸಿ ತಳವೆಳಗಾದಳ್ || , ಕೊಳದ ತಡಿವಿಡಿದು ಬೆಳೆದೆಳ ದಳಿರ್ಗಳಶೋಕೆಗಳ ಲತೆಯು ಮನೆಗಳೊಳೆ ತೆಣಂ | ಬೋಳವಲರ ಬಸದೆ ಸುಳಿವಳಿ, ಗಳ ಬಳಗದ ದನಿಗೆ ಕಿನಿಸಿ ಕಿಂಕಿಣಿವೋದ || ಸುರಯಿಯ ಬಿರಿಮುಗುಳಳ ಪೊರೆ ಪೊರೆಯೊಳ್ ಪೊವೊರಕನಲ್ಲದಲ್ಲುಗುವ ರಜಂ | ಬೊರೆದು ಪರಕಲಿಸಿದಳಿಕುಳ ಪರಿಕರಮುಮನತನುಶಿಖಿಯ ಕಿಡಿಗಳೆ ಗೆತ್ತಳ್ || ೧. ಲಕ್ಷ್ಮಿ, ಜಯಲಕ್ಷ್ಮಿ ಕೀರ್ತಿಲಕ್ಷ್ಮಿ ವಾಕ್‌ಲಕ್ಷ್ಮಿ ಎಂಬ ಸ್ತ್ರೀಯರು ತನ್ನನ್ನು ಯಾವಾಗಲೂ ಧ್ಯಾನಿಸುತ್ತಿರುವ ಸ್ತ್ರೀಯರು ಎಂಬ ಸೌಭಾಗ್ಯವನ್ನುಳ್ಳ ಅರ್ಜುನನು ನನ್ನನ್ನು ಪ್ರೀತಿಸುತ್ತಾನೆಯೋ ಇಲ್ಲವೋ? ೨. ಎಂಬ ಮನಸ್ಸಿನಿಂದ ಕೂಡಿದ ಸುಭದ್ರೆಯು ಹಲುಬಿ ಮನಸ್ಸನ್ನು ಎರಡು ಭಾಗ ಮಾಡದೆ (ಏಕಮನಸ್ಕಳಾಗಿ) ಶರೀರದ (ವಿರಹದ) ಸಂತಾಪವನ್ನು ಆರಿಸಿಕೊಳ್ಳಲು ಹೂವಿನಿಂದಲೂ ದುಂಬಿಗಳಿಂದಲೂ ತಂಗಾಳಿಯಿಂದಲೂ ತುಂಬಿದ ತಿಳಿನೀರಿನ ಕೊಳಗಳಿಂದಲೂ ಸೊಗಯಿಸುವ ವನವನ್ನು ಪ್ರವೇಶಿಸದಳು. ೩. ತಳತಳ ಎಂದು ಹೊಳೆಯುವ ಮಾವಿನ ಚಿಗುರುಗಳ, ಅಶೋಕ ವೃಕ್ಷಗಳ, ಹೊಳೆಯುವ ಬೆಳ್ಳಿ ಮೋಡಗಳ ಈ ಪ್ರದೇಶವು ಅತ್ಯತಿಶಯವಾಗಿ ಬೆಳೆಯುವ ಪ್ರೇಮದುಂಡೆಗಳ ಸಮೂಹವೆಂದು ಬಾಲೆಯಾದ ಸುಭದ್ರೆಯು ತಳವೆಳಗಾದಳು. ೪. ಸರೋವರದ ದಡವನ್ನೇ ಅನುಸರಿಸಿ ಬೆಳೆದ ಎಳೆಯ ಚಿಗುರನ್ನುಳ್ಳ ಅಶೋಕ ಮರಗಳ ಲತಾಗೃಹಗಳಲ್ಲಿಯೇ ವಿಧವಿಧವಾಗಿ ಹೊಳೆಯುವ ಹೂವುಗಳಿಗೆ ಮುತ್ತಿ ಸುತ್ತಾಡುವ ದುಂಬಿಗಳ ಧ್ವನಿಗೆ ಕೋಪಿಸಿ ಕಿರಿಕಿರಿಯಾದಳು. ೫. ಸುರಗಿಯ ಹೂವಿನ ಅರಳಿದ ಮೊಗ್ಗುಗಳ ಒತ್ತಾದ ಪದರಗಳಲ್ಲಿ ಲಘುವಾಗಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy