SearchBrowseAboutContactDonate
Page Preview
Page 26
Loading...
Download File
Download File
Page Text
________________ ಉಪೋದ್ಘಾತ | ೨೧ ನರಸಿಂಗಂಗಂ ಜಾಕ ಬರಸಿಗಮಳವೊದವೆ ಪುಟ್ಟ ಪುಟ್ಟಿಯುಮರಿಕೇ. * ಸರಿಯೆನೆ ನೆಗಟ್ಟುಮರಾತಿಯ ಸರಿದೊರೆಗಂ ಬಂದೆನಪ್ರೊಡಾಗಳ ನಗಿರೇ | ಎಂದು ಹೇಳುವುದನ್ನು ನೋಡಿದರೆ ಈ ಅಭೇದಕಲ್ಪನೆ ವಿಶದವಾಗುವುದು. ಅಲ್ಲದೆ ಕುಂತಿಯೂ ಪಾಂಡುವೂ ಅರ್ಜುನನಿಗೆ ನಾಮಕರಣವನ್ನು ಮಾಡುವಾಗ ಅವನ ಅಷ್ಟೋತ್ತರ ಶತನಾಮಗಳಲ್ಲಿ 'ಚಾಳುಕ್ಯವಂಶೋದ್ಭವಂ', 'ರಿಪುಕುರಂಗ ಕಂಠೀರವಂ', 'ಅಮ್ಮನ ಗಂಧವಾರಣಂ', 'ಸಾಮಂತ ಚೂಡಾಮಣಿ' ಮೊದಲಾದ ಅರಿಕೇಸರಿಯ ನಾಮಾವಳಿಗಳನ್ನು ಇಟ್ಟು ಆಶೀರ್ವದಿಸುವರು. ಪ್ರಪಂಚವನ್ನೆಲ್ಲ ಏಕಚಕ್ರಾಧಿಪತ್ಯದಿಂದ ಆಳಿದ ಮೂರುಲೋಕದ ಗಂಡನಾದ ಸವ್ಯಸಾಚಿಯು ಒಮ್ಮೊಮ್ಮೆ ಸಾಮಂತ ಚೂಡಾಮಣಿಯಾಗುವನು. ಇದು ಕೆಲವೆಡೆಗಳಲ್ಲಿ ಆಭಾಸವಾಗಿ ಕಾಣುವುದು. ಅರ್ಜುನನು ದೇಶಾಟನೆಗೆ ಹೊರಟು ದ್ವಾರಕಾಪಟ್ಟಣದಲ್ಲಿ ಕೃಷ್ಣನ ಅನುಮತಿಯ ಪ್ರಕಾರ ಸುಭದ್ರೆಯನ್ನು ಅಪಹರಿಸಿಕೊಂಡು ಹೋಗುವನಷ್ಟೆ. ಆ ಸಂದರ್ಭದಲ್ಲಿ ಪಂಪನು ಸುಭದ್ರೆಯನ್ನು ಅರ್ಜುನನು ಕೊಂಡು ಹೋದರೆಂದು ಹೇಳದೆ ಸಾಮಂತಚೂಡಾಮಣಿಯು ಕೊಂಡೊಯ್ದನೆಂದು ಹೇಳುವುದು ಮನಸ್ಸಿಗೆ ಅಷ್ಟು ಸಮರ್ಪಕವಾಗಿಲ್ಲ. ಪಂಪನು ಅರಿಕೇಸರಿಯನ್ನು ಅರ್ಜುನನಲ್ಲಿ ಹೋಲಿಸಿರುವುದು ಮನದೊಲವಿನಿಂದಲ್ಲವೆಂದೂ ಅವನಲ್ಲಿ ನಿಜವಾಗಿಯೂ 'ವಿಪುಳಯಶೋವಿತಾನಗುಣ'ವಿದ್ದಿತೆಂದೂ ಹೇಳುವನಾದರೂ ಮೂರುಲೋಕದ ಗಂಡನು ಸಾಮಂತ ಚೂಡಾಮಣಿಯಾದುದೇಕೆ ಎಂದು ಯೋಚಿಸಬೇಕಾಗುವುದು. ಅರಿಕೇಸರಿಯಾದ ಅರ್ಜುನನು ಸೋಲುವ ಪ್ರಸಂಗ ಬಂದಾಗಲೂ ಪ್ರತಿಪಕ್ಷದ ಇದುರಲ್ಲಿ ಅವನ ಸಾಹಸವು ಸಾಗದ ಸಂದರ್ಭವೊದಗಿದಾಗಲೂ ಪಂಪನು ಬಹುಕಾಲ ವಿಳಂಬಮಾಡದೆ ಅಲ್ಲಿಂದ ಬಲು ಬೇಗ ನುಸುಳಿಕೊಳ್ಳುವನು. ಆಗ ವೈರಿಗಜಘಟಾರಿಘಟನಂ', 'ವಿದ್ವಿಷ್ಟವಿದ್ರಾವಣಂ', 'ಅರಾತಿಕಾಲಾನಲಂ,' 'ರಿಪುಕುರಂಗ ಕಂಠೀರವಂ' ಎಂಬ ಬಿರುದುಗಳು ಮಾಯವಾಗುವುವು. ಅಷ್ಟಮಾಶ್ವಾಸದಲ್ಲಿ ಯಕ್ಷನ ಮಾಯೆಯಿಂದ ಕೊಳದ ತಡಿಯಲ್ಲಿ ನೀರು ಕುಡಿದು ಆರೂಢಸರ್ವಜ್ಞನು ನಿಶ್ಲೇಷ್ಟಿತನಾಗಿ ನೆಲದಲ್ಲೊರಗಿದಾಗ ಪಂಪನು ಹೇಳುವುದು ಬಹು ಚಮತ್ಕಾರವಾಗಿದೆ. ಆ ಕಮಳಾಕರಮಂ ಪೊ ಕ್ಯಾಕಾಶಧ್ವನಿಯನುಜದ ಕುಡಿದರಿಭೂಪಾ ನೀಕಭಯಂಕರನುಂ ಗಡ ಮೇಕೆಂದಳೆಯಂ ಬುಲ್ಲು ಜೊಲ್ಲಂ ಧರೆಯೊಳ್' ಎಂದು ಹೇಳುವನು. ಹಾಗೆಯೇ ಅರ್ಜುನನ ಸಾಹಸಕಾರ್ಯಗಳನ್ನು ವರ್ಣಿಸುವಾಗ ಅವನ ವಾಗೈಖರಿ ಪ್ರಜ್ವಲಿತವಾಗುವುದು. ಒಂದೆರಡು ಪದ್ಯಗಳಲ್ಲಾದರೂ ಬಹು ಹೃದಯಂಗಮವಾಗಿ ವರ್ಣಿಸುವನು. ವಿದ್ವಿಷ್ಟ ವಿದ್ರಾವಣನು ಮತ್ಯಯಂತ್ರಭೇದನ ಮಾಡಿದುದೂ ಅಂಗಾರವರ್ಮನನ್ನು ಅಂಗದಪರ್ಣನನ್ನೂ ಸೋಲಿಸಿದುದೂ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy