SearchBrowseAboutContactDonate
Page Preview
Page 255
Loading...
Download File
Download File
Page Text
________________ ೨೫೦ / ಪಂಪಭಾರತಂ ವ|| ಎನೆ ನಗುತ್ತುಂ ಬರೆಯೊಂದೆಡೆಯೊಳ್ ನಾಲ್ವರಯ್ಯರ್ ಗಾಟರಿರ್ದಗೊರ್ವ ನೆಗ್ಗಂ ಗೊಟ್ಟಿಗೆ ಎಂದು ಕಣ್ಣಳಿಯದೆ ಸೋಂಕೆಯುಂ ಮನಮಣಿಯದ ನುಡಿಯಯುಮಾತನ ನಾಕೆಗಳ ಬಾಸೆಯೊಳಿಂತೆಂದರ್ ಉll ಭಾವಕನೆಂದೊಡಂ ಚದುರನೆಂದೊಡಮಾರ್ ಪೆರಾರೊ ನೀನೆ ನಿ ನ್ಯಾವ ಗುಣಂಗಳಂ ಪೊಗಚಿಡಲ್ಲವಂ ನೆಜದಮೊಳಿಂತು ಸ | * ದ್ಯಾವದೆ ಗೊಟ್ಟಿರಲ್ ಬಯಸಿ ಬಂದೆಯದೀಗಳಿದೊಳ್ಳಿತಾಯ್ತು ಮಾ ದೇವರ ಮುಂದಣಾತನನಲಲ್ಲದ ಪೇಸ್ ಪೆಜತೇನನೆಂಬುದೋ | ೯೬ ವ|| ಎಂದಾತನನಾಕೆಗಳ ಕಾಡಿ ಕೊಂಚಾಡಿ ಕಳೆದರ್ ಮತ್ತಮೊಂದೆಡೆಯೊಳೊರ್ವಳ ತನ್ನನುಟಿದ ಪೊಸ ಬೇಟದಾಣ್ಣನನೇಗೆಯುಂ ಪೋಗಲೀಯದೆ ತನ್ನಳಿಪನೆ ತೋಟಿ ಚಂ|| ಮನೆಯನಿವಂ ಮನೋಭವನಿವಂ ಪೊಸ ಸುಗ್ಗಿಯೊಳಾದದೊಂದು ಕಿ. ತನಿವನಿದನ್ನನೇನುತಿಯಲೀಗುಮ ನೀನುಟಿದಾಗಳೆಂದು ಪೋ | ಪನನಿರದೋಪನಂ ಮಿಡುಕಲೀಯದ ಕಾಲ್ಕಿಡಿದು ತೋರ ಕ ಇನಿಗಳನಿಕ್ಕಿದ ತರಳಲೋಚನ ಸಂಕಲೆಯಿಕ್ಕಿದಂತವೋಲ್ | ವlು ಮತ್ತೊರ್ವಂ ತನ್ನ ಸೂಳೆಯೊಳಾದ ಬೇಸeಂ ತನ್ನ ಕೆಳೆಯಂಗಿಂತೆಂದಂ ವ|| ಎನ್ನಲು ಅದನ್ನು ಕೇಳಿ ನಗುತ್ತ ಬರುತ್ತಿರಲು ಒಂದು ಕಡೆಯಲ್ಲಿ ನಾಲ್ಕದು ಜನ ತಂಟಲುದಾಸಿಯರಿದ್ದ ಕಡೆಗೆ ಒಬ್ಬ ದಡ್ಡನು ಬಂದು ಕೂಡಲು ಅವರ ಅಭಿಪ್ರಾಯವನ್ನು ತಿಳಿಯದೆ ಮುಟ್ಟಿ ಇಷ್ಟವನ್ನು ತಿಳಿಯದೆ ನುಡಿಯಲು ಆ ದಾಸಿಯರು ಅವನನ್ನು ಕುರಿತು ತಮ್ಮ ರಹಸ್ಯಭಾಷೆಯಲ್ಲಿ ಹೀಗೆಂದರು - ೯೬, ನಿನಗಿಂತ ರಸಿಕರೂ ಚತುರರೂ ಯಾರಿದ್ದಾರೆ. ನಿನ್ನ ಎಲ್ಲ ಗುಣಗಳನ್ನೂ ಹೊಗಳಲು ಹೊರಟರೆ ನೀನು ಸರ್ವಗುಣಸಂಪನ್ನನೆನ್ನಲೇಬೇಕು. ನೀನು ಸದ್ಭಾವದಿಂದ ನಮ್ಮಲ್ಲಿ ಕೂಡಲು ಬಯಸಿ ಬಂದಿದ್ದೀಯೆ; ಅದೀಗ ಒಳ್ಳೆಯದಾಯಿತು. ನೀನು ಮಹಾದೇವನಾದ ಶಿವನ ಮುಂದಿರುವ ಬಸವನಲ್ಲದೆ ಮತ್ತೇನೆಂದು ಹೇಳೋಣ-ವ|| ಎಂದು ಅವರು ಆತನನ್ನು ಕಾಡಿ ಕಡೆಗಣಿಸಿ ಮಾತನಾಡಿ ಕಳುಹಿಸಲು ಬೇರೊಂದೆಡೆಯಲ್ಲಿ ಒಬ್ಬಳು ತನ್ನನ್ನು ಬಿಟ್ಟುಹೋಗುತ್ತಿದ್ದ ಹೊಸ ಪ್ರೇಮದ ಒಡೆಯನನ್ನು ಏನು ಮಾಡಿದರೂ ಹೋಗುವುದಕ್ಕೆ ಬಿಡದೆ ತನ್ನ ಪ್ರೀತಿಯನ್ನು ತೋರಿಸಿ ೯೭. ಇವನು ಮನೆಯ ಯಜಮಾನ, ಇವನು ಮನ್ಮಥ, ಪ್ರಥಮ ಪ್ರೇಮಕಾಲದ ಚಿಕ್ಕ ಹರೆಯದವ; ಇವ ನನ್ನನ್ನು ಬಿಟ್ಟಾಗ ನಾನು ಉಳಿಯುವುದು ಸಾಧ್ಯವೇ? ಎಂದು ಹೋಗುತ್ತಿರುವ ಪ್ರಿಯನನ್ನು ಸುಮ್ಮನೆ ಚಲಿಸುವುದಕ್ಕೂ ಬಿಡದೆ ಕಾಲುಗಳನ್ನು ಕಟ್ಟಿಕೊಂಡು ಅತ್ತು ಸಂಕೋಲೆ ಹಾಕಿದಂತೆ ಚಂಚಲನೇತ್ರೆಯಾದ ಅವಳು ವಿಶೇಷವಾಗಿ ಕಣ್ಣೀರನ್ನು ಸುರಿಸಿದಳು. ವ|| ಮತ್ತೊಬ್ಬನು ತನ್ನ ಸೂಳೆಯಲ್ಲಾದ ಬೇಸರವನ್ನು ತನ್ನ ಸ್ನೇಹಿತನಿಗೆ ಹೀಗೆ ಹೇಳಿದನು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy