SearchBrowseAboutContactDonate
Page Preview
Page 252
Loading...
Download File
Download File
Page Text
________________ ಚತುರ್ಥಾಶ್ಚಾಸಂ | ೨೪೭ ವl ಮತ್ತಮೊರ್ವಳೂರ್ವಶಿಯನ್ ಪೋಲ್ಯಾಕೆ ತನ್ನ ಗಂಭೀರನವಾವನ ಮದದೊಳಂ ಮದಿರಾಮದದೊಳಮಳವಿಗತಿಯ ಸೊರ್ಕಿಚಂ ಮುಡಿ ಮಕರಧ್ವಜಂಬೊಲ್ಲಲುತ್ತಿರೆ ಬೆಂಬಿಡದೊಯ್ಯನೊಯ್ಯನು ಟ್ರುಡೆ ಕಟಸೂತ್ರದೊತ್ತಿನೊಳೆ ಜೋರೆ ನಾಣ್‌ ತಲೆದೋಕ್ತಿ ಕೂಡ ಕೂ | , ಕಿಡುವ ಕುಕಿಲ್ಬ ಬಿಕ್ಕುಳಿಪ ತೇಗುವ ತನ್ನ ತೊಡಂಕದೆಯೇ ನೂ ರ್ಮಡಿ ಮನದೊಳ್‌ ಪಳಂಚಲೆಯೆ ಡಕ್ಕೆಯೊಳಜವಾಗೆಯಾಡಿದಳ್ ೯೦ ವ!ಅಂತಾಕೆಗಳ್ ತೂಗಿ ತೊನೆವ ತೊನೆಪಂಗಳುಮಂ ಮರಸರಿಗೆವಿಡಿದು ಬಡಿದಾಡುವ ಬೂತಾಟಂಗಳುಮಂ ನೋಡಿ ಗಂಧೇಭವಿದ್ಯಾಧರನಿಂತೆಂದಂಚಂit ನುಡಿವರೆ ನೋಡ ಕುಡಿವರೆಂಬುದಿದಾಗದ ಸೂರುವಂತದ ಕುಡಿವನುಮಂತೆ ಕುಡಿವರೆಂದೊಡೆ ನಾಣುವರಂತುಟಪುದಂ | ಕುಡಿದುಮಿವಂದಿರಾರೆರ್ದಯುಮಂ ಸಗೆಯ್ಯಪರೆಯ ದೋಷದೊಳ್ ತೊಡರ್ವುದುಮೊಂದುಪಾಶ್ರಯವಿಶೇಷದೊಳೊಳನೆ ತಳ್ಳುದಾಗದೇ || ೯೧ ವ|| ಎನುತುಂ ಬರ್ಪನೊಂದೆಡೆಯೊಳೊರ್ವಂ ಪತಿಕೆಯ ನಲ್ಗಳನುಡಿಯಲಾಟದ ಸುಟಿಯ ಮುಳಿದಾತನ ಕಳೆಯನಿಂತೆಂದಂ ಸೂರ್ಯಪಾನೆ (ಬಿಸಿಲನ್ನು ಮರೆಮಾಡಲು ಉಪಯೋಗಿಸುವ ಒಂದು ಸಾಧನ) ಯಂತಾಗಲು ಲಜ್ಜೆಯಿಲ್ಲದೆ ನೋಡುವವರನ್ನು ಮೆಟ್ಟಿ ತಾಳಕ್ಕೆ ಸರಿಯಾಗಿ ಕುಣಿದಳು. ವ|| ಊರ್ವಶಿಯನ್ನೇ ಹೋಲುವ ಮತ್ತೊಬ್ಬಳು ಗಂಭೀರವಾದ ತನ್ನ ಹೊಸಯವ್ವನದ ಮದದಿಂದಲೂ ಮದ್ಯಪಾನ ಮದದಿಂದಲೂ ಅಳತೆ ಮೀರಿ ಸೊಕ್ಕಿ- ೯೦. ತನ್ನ ತುರುಬು ಮನ್ಮಥನ ಮೀನಿನ ಬಾವುಟದಂತೆ ಮೆಲ್ಲಮೆಲ್ಲಗೆ ಜೋಲಾಡುತ್ತಿರಲು ಒಳಉಡುಪು ಉಡಿದಾರದ ಹತ್ತಿರವೇ ಸಡಿಲವಾಗಿ ಜೋತುಬಿದ್ದಿರಲು ಮರ್ಮಸ್ಥಳವು ಹೊರಗೆ ಕಾಣಿಸುತ್ತಿರಲು ಒಡನೆಯೇ ಮೇಲಕ್ಕೆ ನೆಗೆದು ಹಕ್ಕಿಯಂತೆ ಶಬ್ದಮಾಡಿ ಬಿಕ್ಕಳಿಸುವ ತೇಗುವ ತನ್ನ ತೊಡಕುಗಳೇ ಮನಸ್ಸನ್ನು ನೂರು ಬಾರಿ ತಗುಲಿ ಹಿಂಸಿಸುತ್ತಿರಲು ಢಕ್ಕಾವಾದ್ಯಕ್ಕನುಗುಣವಾಗಿ ಆಶ್ಚರ್ಯವಾಗುವ ಹಾಗೆ ಕುಣಿದಳು. ವll ಹಾಗೆ ಅವರು ಆ ಕಡೆಗೂ ಈ ಕಡೆಗೂ ಅಳ್ಳಾಡುವ ತೂಗಾಟಗಳನ್ನೂ ಮರಸರಿಗೆ(?)ಯನ್ನೂ ಬಿಲ್ಲನ್ನೂ ಹಿಡಿದು ಭೂತಗಳ ಆಟವನ್ನು (ಬೂತಾಟಂ ?) ಆಡುವುದನ್ನೂ ಗಂಭವಿದ್ಯಾಧರನಾದ ಅರ್ಜುನನು ನೋಡಿ ಹೀಗೆಂದನು - ೯೧. ಕುಡಿಯುವವರನ್ನು ಕಳ್ ಕುಡಿಯುವವರು ಎಂದು ಹೇಳಬಹುದೇ? ಆಗದು. ಕುಡಿಯುವವರನ್ನು ಹಾಗೆ ಕುಡುಕರೆಂದರೆ ಅವರು ಲಜ್ಜಿತರಾಗುತ್ತಾರೆ. ಹಾಗೆ ಕುಡಿದರೂ ಅವರು ಎಲ್ಲರ ಹೃದಯವನ್ನೂ ಸೆರೆಹಿಡಿಯುತ್ತಾರಲ್ಲವೇ. ದೋಷವಾದುದೂ ಅವಲಂಬನದಿಂದ ಒಳ್ಳೆಯದೇ ಆಗುವುದಿಲ್ಲವೇ ? ವ|| ಎನ್ನುತ್ತ ಬರುತ್ತಿದ್ದವನು ಒಂದೆಡೆಯಲ್ಲಿ ತನ್ನನ್ನು ಬಯ್ಯುತ್ತಿದ್ದ ಪ್ರಿಯಳನ್ನು ಬಿಡಲಾರದೆ ಅವಳ ಮನೆಯ ಮುಂದೆಯೇ ಸುಳಿದಾಡುತ್ತಿರಲು ಕೋಪಿಸಿಕೊಂಡ ಅವನ ಸ್ನೇಹಿತನು ಹೀಗೆಂದು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy