SearchBrowseAboutContactDonate
Page Preview
Page 249
Loading...
Download File
Download File
Page Text
________________ ೨೪೪) ಪಂಪಭಾರತಂ ತಿರಮಿದಾವುದಕ್ಕೆ ಧರಣೀಂದ್ರನ ಕೊಟ್ಟುದು ವಜ್ರದಾಳಿ ಕ ಸೈಸೆವುದಿದಾವುದೊಲದುಟಿದಟ್ಟಿದೊಡಂದು ಕುಬೇರನಿತ್ತುದೆ | ಕೃಸರಮಿದಾವುದಾಂ ಮುಳಿಯ ಕಾಲ್ವಿಡಿದಿಂದ್ರನ ಕೊಟ್ಟುದ ಪೋ ಪುಸಿಯದಿರೆಂಬ ಸೂಳೆಯರೆ ಸೂಳೆಯರಲ್ಲಿಯ ಪಂಡವಾಸದಾ || ೮೬ ವ|| ಎಂಬುದಂ ಕೇಳುತುಂ ಬರೆವರೆ ಮತ್ತಮಾ ಪಂಡವಾಸಗೇರಿಯೊಳಗೆ ಸೌಭಾಗದ ಭೋಗದ ಚಾಗದ ರೂಪುಗಳ ಮಾನಸರೂಪಾದಂತೆಉ11 ಸೀಗುರಿ ಚಾಪಿ ನಾಣುಣಿದು ಮೆಟ್ಟುವ ಗುಜರಿಗ ಬೀರಮಂ ಚಾಗದ ಪೆಂಪುಮಂ ಪೊಗಟ್ಟ ಸಂಗಡವರ್ಪವರೋಳಿನಿಂದ ಮ | ಯೋಗಮಳುಂಬಮಪ್ಪ ಬಿಯಮಾರ್ಗಗಂ ಬರೆ ಬರ್ಪ ಪಾಂಗಗು ರ್ವಾಗಿರೆ ಚೆಲ್ವನಾಯ್ತುರಬೊಜಂಗರ ಲೀಲೆ ಸುರೇಂದ್ರ ಲೀಲೆಯಿಂ || ೮೭ ವll ಮತ್ತಮಲ್ಲಿ ಕೋಟಿ ಪೊಂಗೆ ಘಂಟೆಯಲುಗುವ ಕಿರುಕುಳ ಬೊಜಂಗರುಮಂ ಸುಣ್ಣದೆಲೆಯನೊತ್ತೆಯಿಟ್ಟು ಮದದಾನೆಯುಮಂ ಮಾಣಿಕಮುಮನೊತ್ತವಿಡಿಸಲಟ್ಟುವ ಚಿಕ್ಕ ಮನ್ಮಥನು (ತನ್ನ ಪ್ರಿಯಪತ್ನಿಯಾದ) ರತಿಯನ್ನೂ ಬಿಸುಟಿದ್ದಾನೆ. ಈಶ್ವರನ್ನು ಇವಳನ್ನು ನೋಡಿ ನೂತನವಧುವಾದ ಪಾರ್ವತಿಯನ್ನು ತೊರೆದಿದ್ದಾನೆ. ಆ ನರಕಾಸುರನಿಗೆ ಮೃತ್ಯುವಾದ ವಿಷ್ಣುವು ಇದ್ದಕ್ಕಿದ್ದ ಹಾಗೆ ತನ್ನ ಲಕ್ಷ್ಮಿಯನ್ನೂ ಮರೆತಿದ್ದಾನೆ ಎಂಬ ಪ್ರಸಿದ್ದಿಯನ್ನು ಪಡೆದು ಯವ್ವನದ ವಿಳಾಸದ ಬೆಡಗಿನಿಂದ ಕೂಡಿದ ಸ್ತ್ರೀಯರೇ ಅಲ್ಲಿರುವ ಸ್ತ್ರೀಯರೆಲ್ಲ. ಮುಂದಿನ ಅವರ ಸಂಭಾಷಣೆಯು ಈ ರೀತಿಯಲ್ಲಿದ್ದಿತು. ೮೬. ಈ ಮೂರೆಳೆಯ ಹಾರವಾವುದಕ್ಕ? ಧರಣೀಂದ್ರನೆಂಬ ಸರ್ಪರಾಜನು ಕೊಟ್ಟುದು; ಕಣ್ಣಿಗೆ ಪ್ರಕಾಶಮಾನವಾಗಿರುವ ಈ ವಜ್ರದ ತಾಲಿ ಯಾವುದು ? ನೀನು ಒಪ್ಪದೆ ತಿರಸ್ಕರಿಸಿ ಕಳುಹಿಸಲು ಆ ದಿನ ಕುಬೇರನು ಕೊಟ್ಟುದು. ಈ ಒಂದೆಳೆಯ ಸರ ಯಾವುದು? ನಾನು ಕೋಪಿಸಿಕೊಳ್ಳಲು ನನ್ನ ಕಾಲನ್ನು ಕಟ್ಟಿಕೊಂಡು ಇಂದ್ರನು ಕೊಟ್ಟುದಲ್ಲವೇ? ಹೋಗು ಸುಳ್ಳು ಹೇಳಬೇಡ ಎಂಬ ಪ್ರಸಿದ್ದಿಯನ್ನು ಪಡೆದಿರುವ ಸೂಳೆಯರೇ ಆ ಸೂಳೆಗೇರಿಯ ಎಲ್ಲ ಕಡೆಯೂ. ವ|| ಎನ್ನುವುದನ್ನು ಕೇಳುತ್ತ ಬರುತ್ತಿರಲು ಪುನಃ ಆ ಸೂಳೆಗೇರಿಯೊಳಗೆ ಸೌಭಾಗ್ಯದ, ಭೋಗದ, ತ್ಯಾಗದ ರೂಪಗಳು ಮನುಷ್ಯಾಕಾರವನ್ನು ತಾಳಿದಂತೆ - ೮೭. ಸೀಗುರಿಯೆಂಬ ಛತ್ರಿ, ಅಂಗರಕ್ಷಕರು, ನೆಗೆದು ಹಾರುತ್ತ ಬರುತ್ತಿರುವ ಗುರ್ಜರದೇಶದ ಕತ್ತೆ, ತಮ್ಮವೀರದ ಮತ್ತು ತ್ಯಾಗದ ವೈಭವವನ್ನು ಹೊಗಳುತ್ತ ಬರುತ್ತಿರುವ ಸಂಗಡಿಗರು, ಸರಿಯಾದ ರೀತಿಯಲ್ಲಿ ಮಾಡಿಕೊಂಡಿರುವ ದೇಹಾಲಂಕಾರ ಅತ್ಯತಿಶಯವಾದ ದ್ರವ್ಯವ್ಯಯಇವು ಹೃದಯಸ್ಪರ್ಶಿಯಾಗಿರಲು ಆಶ್ಚರ್ಯಕರವಾದ ರೀತಿಯ ಠೀವಿಯಿಂದ ಬರುತ್ತಿರುವ ರಾಜವಿಟರ ಲೀಲೆಯು ದೇವೇಂದ್ರನ ಲೀಲೆಗಿಂತ ಸುಂದರವಾಗಿದ್ದಿತು. ವಗೆ ಪುನಃ ಅಲ್ಲಿ ಕೋಟಿಹೊನ್ನುಗಳನ್ನು ಕೊಡುತ್ತೇವೆ ಎಂದು ಸೂಳೆಯರ ಮನೆಯ ಮುಂದಿನ ಗಂಟೆಯನ್ನು ಬಾರಿಸುವ ಸಾಮಾನ್ಯವಿಟರನ್ನೂ ಸುಣ್ಣದೆಲೆಯನ್ನು ಒತ್ತೆಯಿಟ್ಟು ಮದ್ದಾನೆಯನ್ನೂ ಮಾಣಿಕ್ಯವನ್ನೂ ಒತ್ತೆಯಾಗಿಡಲು ಹೇಳಿಕಳುಹಿಸುವ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy