SearchBrowseAboutContactDonate
Page Preview
Page 238
Loading...
Download File
Download File
Page Text
________________ ಚತುರ್ಥಾಶ್ವಾಸಂ | ೨೩೩ ವ|| ಅಂತು ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂ ಭಂಗೊಂಡ ದಿವ್ಯ ಗ್ರಹದಂತೆ ಕಾಮಗ್ರಹ ಗೃಹೀತೆಯಾಗಿರೆ ಮನೋವೈಕಲ್ಯ ರೋಮಾಂಚಕ ಸಂಭಕ ಕಂಪ ಸ್ಟೇದ ವೈವರ್ಣ್ಯ ಸಂತಾಪನಾಹಾರ ವ್ಯಾಮೋಹ ಗದ್ದದಾಶ್ರುಮೋಕ್ಷ ಮೂರ್ಛಾದಿ ನಾನಾ ವಿಕಾರಂಗಳನೊಡನೊಡನೆ ತೋಜುವುದುಮಾಕೆಯ ದಾದಿಯ ಮಗಳ್ ಚೂತಲತಿಕೆಯೆಂಬಲ್ ಕಂಡುಚoll ಪದವೆರ್ದ ಬತ್ತೆ ಕೆತ್ತುವಧರಂ ದೆಸೆಗೆಟ್ಟಲರ್ಗಣ್ಣ ನೋಟಮು ಣಿದ ಬೆಮರೋಳಿವಟ್ಟ ನಿಡುಸುಯ್ ತೊದಳಿಂಗೆಡೆಗೊಂಡ ಮಾತು ಕುಂ || - - ದಿದ ಲತಿಕಾಂಗಮೋಂದಿದ ವಿಕಾರಮದೀಕೆಯೊಳೀಗಳಾದುದಿಂ ತಿದು ಕುಸುಮಾಸ್ತನೆಂಬದಟನಿಕ್ಕಿದ ಸೊರ್ಕಿನ ಗೊಡ್ಡಮಾಗದೇ ll ..೬೦ .... ವ|| ಎಂದು ತನ್ನೊಳೆ ಬಗೆದು ಮತ್ತಮಿಂತೆಂದಳಕಳೆಯಲರಾದ ಸಂಪಗೆಯ ಬಣ್ಣದವೋಲೆ ಬೆಳರ್ತ ಬಣ್ಣದೊಳ್ ಗಟೆಯಿಸೆ ಕೆಂಪು ಕಣ್ಣಳ ಮೊದಲ್ಗಳೊಳೊಯ್ಯನೆ ತೋಜಿತ ಬಾಡಿ ಪಾ | ಡಟಿದು ಬಬಿಲ್ಲು ಜೋಲ್ಲಿರವು ಮೆಯ್ಯೋಳೆ ಮೆಯ್ದಿಡಿದೆನ್ನ ಕಣ್ಣಳೊಳ್ ಸುಟಿದುವು ತಾಮೆ ಕನ್ನಡಿಸಿದಪ್ಪುವು ಕನ್ನೆಯ ಕನ್ನೆವೇಟಮಂ || ೬೧ ಕಾಮಾಗ್ನಿಯೇ ಹೋಮಾಗ್ನಿ, ಶ್ರೀಗಂಧ, ಕರ್ಪೂರ, ತಾವರೆಯ ದಂಟುಗಳೇ ಅಲ್ಲಿ ಹರಡಿರುವ ಸಮಿತ್ತುಗಳ ಕಟ್ಟುಗಳು, ಹೀಗಾಗಲು ಇವಿಷ್ಟೂ ಕಾಮನ ಯಜ್ಞವೆಂದು , ಸುಭದ್ರೆಯು ಬೆಳದಿಂಗಳಿನಲ್ಲಿ ಭಯಗೊಂಡಳು. ವ! ಹಾಗೆ ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂದ ಸ್ತಂಭಿತಳಾದ (ತಡೆಯಲ್ಪಟ್ಟ) ದಿವ್ಯಗ್ರಹದ ಹಾಗೆ ಕಾಮಗ್ರಹದಿಂದ ಹಿಡಿಯಲ್ಪಟ್ಟು ಬುದ್ಧಿಭ್ರಮಣೆ, ರೋಮಾಂಚ, ಸ್ತಂಭನ, ನಡುಕ, ಬೆವರುವುದು, ವರ್ಣವ್ಯತ್ಯಾಸ, ಚಿಂತೆ, ಆಹಾರವಿಲ್ಲದಿರುವಿಕೆ, ಪ್ರೇಮಾತಿಶಯ, ಗಂಟತಗಿದ ಮಾತು, ಕಣ್ಣೀರುಸುರಿಯುವಿಕೆ, ಮೂರ್ಛಹೋಗುವುದು ಮೊದಲಾದ ನಾನಾ ವಿಕಾರಗಳನ್ನು (ಸುಭದ್ರೆಯು) ಮೇಲೆ ಮೇಲೆ ತೋರುತ್ತಿರಲು ಆಕೆಯ ದಾದಿಯ ಮಗಳಾದ ಚೂತಲತಿಕೆಯೆಂಬವಳು ಇದನ್ನು ಕಂಡಳು, ೬೦. ಈಕೆಯ ಬತ್ತಿದ ಎದೆ, ನಡುಗುವ ತುಟಿ, ಹೂವಿನಂತಿರುವ ಕಣ್ಣಿನ ದೆಸೆಗೆಟ್ಟ ದೃಷ್ಟಿ, ಹೆಚ್ಚಾದ ಬೆವರಿನ ಸಾಲಿಂದ ಕೂಡಿದ ದೀರ್ಘಶ್ವಾಸ, (ನಿಟ್ಟುಸಿರು), ತೊದಳಿನಿಂದ ಕೂಡಿದ ಮಾತು, ಕೃಶವಾದ ಲತೆಯಂತಿರುವ ಶರೀರ, ತೋರಿಬರುತ್ತಿರುವ ವಿಕಾರಗಳು ಇವೆಲ್ಲ ಈಗ ಇವಳಲ್ಲಿ ಉಂಟಾಗುತ್ತಿವೆ, ಇವು ಪುಷ್ಪಬಾಣನಾದ ಮನ್ಮಥನೆಂಬ ದುಷ್ಟನು ಉಂಟುಮಾಡಿರುವ ಸೊಕ್ಕಿನ ಚೇಷ್ಟೆಯೇ ಸರಿ ವli ಎಂದು ತನ್ನಲ್ಲಿಯೇ ಯೋಚಿಸಿ ಪುನಃ ಹೀಗೆಂದಳು-೬೧. ಕಳಿತುಹೋಗಿರುವ (ಅಜ್ಜಿಯಾದ) ಸಂಪಗೆಯ ಬಣ್ಣದ ಹಾಗೆ ಬೆಳ್ಳಗಿರುವ ಕಣ್ಣಿನ ಮೊದಲಿನಲ್ಲಿ ಕೆಂಪುಬಣ್ಣವು ನಿಧಾನವಾಗಿ ವ್ಯಾಪಿಸಿ ತೋರುತ್ತಿರಲು ಬಾಡಿ ಹಿಂದಿನ ಸ್ಥಿತಿಯನ್ನು ಕಳೆದುಕೊಂಡು ಜೋತುಹೋಗಿರುವ ಈಕೆಯ ಶರೀರಸ್ಥಿತಿಯೇ ನನ್ನ ಕಣ್ಣಿನಲ್ಲಿ ಈ ಕಸ್ಯೆಯ ಪ್ರೇಮಾತಿಶಯವನ್ನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy