SearchBrowseAboutContactDonate
Page Preview
Page 236
Loading...
Download File
Download File
Page Text
________________ ಕಂll ವ|| ಆಗಳ್ ಕಂ ಚತುರ್ಥಾಶ್ವಾಸಂ | ೨೩೧ ಆವರಿಸಿತ್ತೋ ನಭೋಂತ ರ್ಭೂವಿವರಮನಮರ್ದಿನೆಸಕಮನ ವಿರಹಿಗಳೂ 1 ವೋವಿದು ಮದನನ ಸೋದನ ದೀವಿಗೆಯನ ತೊಳಗಿ ಬೆಳಗಿದಂ ತುಹಿನಕರಂ || ವ|| ಅಂತು ಸೊಗಯಿಸುವಚಬೆಟ್ಟಿಂಗಳೊಳ್ ಸುಧಾಧವಳಿತೋತ್ತುಂಗ ರಮ್ಯಹರ್ಮ್ಯ ದೆರಡನೆಯ ನೆಲೆಯ ಚೌಪಳಿಗೆಯ ಮುಂದಣ ರಮ್ಮ ಹರ್ಮಾಗ್ರದೊಳೆ ಸಿರಿಯೋಲಗಂಗೊಟ್ಟು ವಿನೋದಂಗಳೊಳ್ ವಿಕ್ರಮಾರ್ಜುನಂ ಬೆರಸು ಕಂ ಆಗಳನಂತನನಂತಫ ಣಾಗಣಮಣಿಕಿರಣಮಸೆಯೆ ದುಗ್ಗಾರ್ಣವದೊಳ್ | ರಾಗದಿನಿರ್ಪಂತಿರ್ದ ಭೋಗಿ ತಲತ್ತದೆಸಿ ಬೆಳಗೆ ಕೆಯ್ಯಾವಿಗೆಗಳ " ೫೨ ಅತ್ತ ಸುಭದ್ರೆಯುಮೊಡಲುರಿ ಯುತ್ತಿರೆ ಮರವಟ್ಟು ವಿಜಯನಿರ್ದತ್ತಲೆ ನೋ | ಡುತ್ತಿರ ಸುಸಾಳಭಂಜಿಕೆ ಗೆತ್ತುದು ಕೆಳದಿಯರ ತಂಡಮಾಕೆಯ ರೂಪಂ || 982 ೫೪ ಹೋಲುತ್ತಿತ್ತು. ೫೨. (ಬೆಳದಿಂಗಳು) ಭೂಮ್ಯಂತರಿಕ್ಷಗಳ ಮಧ್ಯಭಾಗವನ್ನು ಅಮೃತದ ಕಾಂತಿ ಆವರಿಸಿತೊ ಎನ್ನುವ ಹಾಗಿರಲು ವಿರಹಿಗಳು (ಪ್ರೇಮಿಗಳನ್ನು ಅಗಲಿರುವವರು) ಇದು ಮನ್ಮಥನು ನಮ್ಮನ್ನು ಹುಡುಕಲು ತಂದಿರುವ ಹುಡುಕುದೀಪ; ಕಾಪಾಡಿ ಕಾಪಾಡಿ ಎಂದು ಕೂಗಿಕೊಳ್ಳುವಂತೆ ಚಂದ್ರನು ತೊಳಗಿ ಪ್ರಕಾಶಿಸಿದನು. ೫೩, ಹಾಗೆ ಸೊಗಯಿಸುವ ಸ್ವಚ್ಛವಾದ ಬೆಳದಿಂಗಳಿನಲ್ಲಿ ಸುಣ್ಣದಿಂದ ಬಿಳುಪುಮಾಡಲ್ಪಟ್ಟ ಎತ್ತರವೂ ಮನೋಹರವೂ ಆದ ಉಪ್ಪರಿಗೆಯ ಎರಡನೆಯ ಅಂತಸ್ತಿನ ಆಕರ್ಷಕವಾದ ಚಚೌಕದ ಮುಂದಿನ ಮಹಡಿಯ ಮುಂಭಾಗದಲ್ಲಿ ವಿಜೃಂಭಣೆಯಿಂದ ಕೃಷ್ಣನು ಓಲಗದಿಂದಿದ್ದು ಅರ್ಜುನನೊಡನೆ ಅನೇಕ ವಿನೋದಗಳಿಂದ ಕೂಡಿದನು. ಆದಿಶೇಷನ ಅನಂತವಾದ ಹೆಡೆಯ ರತ್ನಗಳ ಸಮೂಹವು ಪ್ರಕಾಶಿಸುತ್ತಿರಲು ನಾರಾಯಣನು ಕ್ಷೀರಸಮುದ್ರದಲ್ಲಿ ಸಂತೋಷದಿಂದಿರುವ ಹಾಗೆ (ಇಲ್ಲಿ ಕೈದೀವಿಗೆಗಳ ಸಮೂಹವು ಪ್ರಕಾಶಿಸಿ ಬೆಳಗುತ್ತಿರಲು ಅರ್ಜುನನು ಸುಖದಿಂದ ಇದ್ದನು. ೫೪. ಆ ಕಡೆ ಸುಭದ್ರೆಯು ಕೂಡ ವಿರಹತಾಪದಿಂದ ಮೈಸುಡುತ್ತಿರಲು ನಿಶ್ಚಷ್ಟಳಾಗಿ ಅರ್ಜುನನು ಇದ್ದ ಕಡೆಯೇ ನೋಡುತ್ತಿರಲು ಅವಳ ಸಖಿಯರ ಸಮೂಹವು ಅವಳ ರೂಪವನ್ನು ಸುಂದರವಾದ ಸಾಲುಬೊಂಬೆಯೆಂದು ಭ್ರಮಿಸಿತು. ೫೫. ನಾಚಿಕೆಯು ಕನ್ಯಾಭಾವವನ್ನು ಪ್ರದರ್ಶಿಸಲು ಇಚ್ಛಿಸುತ್ತದೆ. ಮನಸ್ಸಾದರೋ ವಿಶೇಷವಾಗಿ(ಅರ್ಜುನನ ಕಡೆ) ಸೆಳೆದುಕೊಂಡು ಹೋಗಲು ಆಶಿಸುತ್ತದೆ. ತನ್ನ ಪ್ರೇಮವನ್ನು ವಿಶದಪಡಿಸುತ್ತದೆ ಎಂದು ಕನೈಯಾದ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy