SearchBrowseAboutContactDonate
Page Preview
Page 233
Loading...
Download File
Download File
Page Text
________________ ೨೨೮ / ಪಂಪಭಾರತ ಕಂ|| ಆಯತಿಯಿಂದಂ ನರ ನಾ ರಾಯಣರನೆ ನಗದವರಿಗ ನಾವಿರ್ವರುಮಿಂ | ತೀ ಯುಗದೊಳೀಗಳಾಂ ನಾ ರಾಯಣನಂ ನೀನುದಾತ್ತನಾರಾಯಣನೆ || ೪೫ ವ|| ಅದಜೆಂ ನಿನಗಮೆನಗಮೇತಳಂ ವಿಕಲಮುಂ ವಿಚ್ಚಿನ್ನಮುಮಿಲ್ಲೆಂದು ನುಡಿಯುತಿರ್ಪನ್ನೆಗಮಿತ್ತಲ್ಚಂ| ನವ ನಳಿನೀ ವನಂಗಳ ಪರಾಗರಜಂಗಳನುಂಡು ಮುನ್ನಮಂ ತವನೆ ವಿಯತ್ತಳ ಭ್ರಮಣ ವಿಹ್ವಲನಾಗಿ ಬಲ್ಕು ಕಾಣುವಂ | ತೆವೊಲಿರೆ ಕೆಂಪು ತತ್ಕಮಲ ಕಾನನ ಕಂಟಕ ಲಗ್ನಪಾದನಾ ದವೊಲುಡುಗುತ್ತುಮಾತ್ಮ ಕರಮಂ ರವಿ ಪೊರ್ದಿದನಸ್ತಶೈಲಮಂ || ೪೬ ವ|| ಆ ಪ್ರಸ್ತಾವದೊಳ್ಉll ಆ ಸರಸೀಜ ಬಾಂಧವನ ಪಿಂಬದಿನೊಳ್ ಕಡುವಿನ್ನನಾದುವಿರಿ ತೀ ಸರಸೀರುಹಂಗಳವನೀ ಪದದೊಳ್ ಬಿಸುಟೆಂತು ಪೊಪವಂ | ಬೀ ಸಮಕಟ್ಟಿನೊಳ್ ನೆಲಸಿದಂತಜಗಿರ್ದುವು ಪಟ್ಟದಂಗಳು ತೇಸರ ಕೋಟಿ ಸಂಕಟ ಕುಶೇಶಯಕೋಶ ಕುಟೀರಕಂಗಳೊಳ್ | ೪೭ ಚಂಡಮರೀಚಿಗಸ್ತಮಯವಿಲ್ಲದುದೂಂದೆಡೆ ನಿಮ್ಮ ಕೇಳುದುಂ ಕಂಡುದುಮುಳ್ಕೊಡಿನ್ ಬೆಸಸಿಮಾಮಿರದಲ್ಲಿಗೆ ಪೋಪವೆಂದು ಮ | ಯೌಂಡೋಲವಿಂದಗಿಗಣಮಾಜದ ಪಕ್ಕಿಗಳೆಲ್ಲಮಂ ಮರು ಆ್ಯಂಡಿಲೂಳು ಕೂಡ ಬೆಸಗೊಂಡು ಬಲುವು ಜಕ್ಕವಕ್ಕಿಗಳ ೪೮ . ಆಟಪಾಟಗಳನ್ನು ತೋರಿ ಕೃಷ್ಣನು ಅರ್ಜುನನಿಗೆ ಹೀಗೆಂದನು - ಅರ್ಜುನ! ಹಿಂದೆ ಬದರಿಕಾಶ್ರಮದಲ್ಲಿ-೪೫ ಹಿಂದೆ ನಾವು ಪರಸ್ಪರಾವಲಂಬನದಿಂದ ಸುಪ್ರಸಿದ್ದರಾದ ನರನಾರಾಯಣರಾಗಿದ್ದೆವು. ಈಗ ನಾವಿಬ್ಬರೂ ಈ ಯುಗದಲ್ಲಿಯೂ ಹಾಗೆಯೇ; ನಾನು ನಾರಾಯಣ (ಶ್ರೀಕೃಷ್ಣ, ನೀನು ಉದಾತ್ತನಾರಾಯಣನಾದ ಅರಿಕೇಸರಿ ವಗ ಆದುದರಿಂದ ನಿನಗೂ ನನಗೂ ಯಾವ ವಿಧದಲ್ಲಿಯೂ ವ್ಯತ್ಯಾಸವೂ ವಿಚ್ಚಿ (ವಿಚ್ಛಿನ್ನಯೂ ಇಲ್ಲವೆಂದು ಹೇಳುತ್ತಿರುವಲ್ಲಿ ಸಾಯಂಕಾಲವಾಯಿತು. ೪೬. ಸೂರ್ಯನು ಮೊದಲು ಹೊಸದಾಗಿ ಅರಳಿದ ತಾವರೆಯ ತೋಟದ ಧೂಳನ್ನು (ಪರಾಗವನ್ನು ತಿಂದು, ಆಕಾಶದಲ್ಲಿ ಸುತ್ತಿದ ಶ್ರಮದಿಂದ ಬಳಲಿ ಆ ತಿಂದ ಧೂಳನ್ನೇ ವಾಂತಿ ಮಾಡುತ್ತಿರುವ ಹಾಗೆ ಸಂಜೆಗೆಂಪು ತೋರುತ್ತಿರಲು ಆ ತಾವರೆಯ ಕಾಡಿನ ಮುಳ್ಳುಗಳಲ್ಲಿ ಕಾಲು ಸಿಕ್ಕಿಕೊಂಡ ಕಿರಣವುಳ್ಳವನಾಗಿ ತನ್ನ ಕಿರಣಗಳನ್ನು ಉಡುಗಿಸಿಕೊಂಡು ಅಸ್ತಾಚಲವನ್ನು ಸೇರಿದನು (ಮುಳುಗಿದನು). ವ|| ಆ ಸಮಯದಲ್ಲಿ ೪೭. ಕಮಲಬಂಧುವಾದ ಸೂರ್ಯನ ಹಿಂದೆಯೇ ಈ ತಾವರೆಗಳೂ ಬಹಳ ಖಿನ್ನವಾಗಿವೆ (ಬಾಡಿವೆ). ಈ ಸಮಯದಲ್ಲಿ ಇವುಗಳನ್ನು ಬಿಸುಟು ನಾವು ಹೇಗೆ ಹೋಗುವೆವು ಎಂದು ದುರವಸ್ಥೆಯಲ್ಲಿ ನಿಂತಂತೆ ದುಂಬಿಗಳು ಅನೇಕ ಕೇಸರಗಳ ಇಕ್ಕಟ್ಟಿನ ಸಂಕಟಕ್ಕೊಳಗಾಗಿ ತಾವರೆಯ ಮೊಗ್ಲೆಂಬ ಗುಡಿಸಲಿನ ಒಳಗೆ ಸಿಕ್ಕಿಬಿದ್ದುವು. ೪೮. ಸೂರ್ಯನಿಗೆ ಅಸ್ತಮಯವೇ ಇಲ್ಲದ ಸ್ಥಳವೊಂದನ್ನು ನೀವು ಕೇಳಿದ್ದರೆ ಅಥವಾ.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy