SearchBrowseAboutContactDonate
Page Preview
Page 22
Loading...
Download File
Download File
Page Text
________________ ಉಪೋದ್ಘಾತ | ೧೭ ಕೇಳದೆ ಭರತನು 'ಎಮ್ಮ ದಾಯಾದನುಂ ಕೋಪದಿನೆನ್ನೊಳ್ ಕಾದಲೆಂದು ಬರಿಸಿದ ಸಮರಾಟೋಪದಿಂ ನಿಂದೊಡಂ ಮಾಣ್ಣುದು ಸೂತ್ತು, ಎಮ್ಮಸಾಪತನ ಭುಜಬಲಮಂ ನೋಂ' ಎಂದು ಯುದ್ಧವನ್ನೇ ನಿಶ್ಚಯಿಸಿದನು. ಘೋರಸಂಗ್ರಾಮಕ್ಕೆ ಸಿದ್ಧತೆಗಳಾದುವು. ಆಗ ಮಂತ್ರಿಮುಖ್ಯರು ಚರಮದೇಹಧಾರಿಗಳಾದ ಇವರ ಯುದ್ಧದಲ್ಲಿ ಅನೇಕ ಪ್ರಜಾನಾಶವಾಗುವುದರಿಂದ ಅದನ್ನುಳಿದು ಧರ್ಮಯುದ್ಧಗಳಾದ ದೃಷ್ಟಿಯುದ್ಧ, ಜಲಯುದ್ಧ ಮತ್ತು ಬಾಹುಯುದ್ಧಗಳಲ್ಲಿ ಅಣ್ಣತಮ್ಮಂದಿರು ತಮ್ಮ ಜಯಾಪಜಯಗಳನ್ನು ನಿಷ್ಕರ್ಷಿಸಿಕೊಳ್ಳಬೇಕೆಂದು ಪ್ರಾರ್ಥಿಸಿಕೊಂಡರು. ಅದಕ್ಕೆ ಇಬ್ಬರೂ ಒಪ್ಪಿದರು. ದೃಷ್ಟಿಜಲ ಯುದ್ಧಗಳಲ್ಲಿ ಬಾಹುಬಲಿಗೇ ನಿರಾಯಾಸವಾಗಿ ಜಯ ಲಭಿಸಿತು. ಬಾಹುಯುದ್ಧದಲ್ಲಿ ಬಾಹುಬಲಿಯು ಅಣ್ಣನನ್ನು ಒಂದೇ ಸಲ ಮೇಲಕ್ಕೆತ್ತಿ ಬಡಿಯುವಷ್ಟರಲ್ಲಿ ವಿವೇಕಯುತವಾಗಿ ಭರತಾವನೀಶ್ವರಂ, ಗುರು ಪಿರಿಯಣ್ಣಂ ಚಕ್ರವರ್ತಿ ಮಹಿಮಾಕರನೀ ದೊರೆಯನುಮಳವಡೆಯ ವಸುಂ ಧರೆಯೊಳ್ ತಂದಿಕ್ಕಿ ಭಂಗಮಂ ಮಾಡುವೆನೇ ಎಂದು ನಿಧಾನವಾಗಿ ಕೆಳಕ್ಕಿಳಿಸಿದನು. ಭರತನಿಗೆ ಕೋಪವು ಮೇರೆಮೀರಿತು. ತಮ್ಮನ ಮೇಲೆ ಚಕ್ರವನ್ನೇ ಪ್ರಯೋಗಿಸಿ ಬಿಟ್ಟನು. ಚಕ್ರವು ಆತನಿಗೆ ಸ್ವಲ್ಪವೂ ಘಾತ ಮಾಡದೆ ಆತನನ್ನು ಮೂರು ಪ್ರದಕ್ಷಿಣೆ ಮಾಡಿ ಅವನ ಬಲಪಾರ್ಶ್ವದಲ್ಲಿ ನಿಂತಿತು. ದೇವಲೋಕದಿಂದ ಪುಷ್ಪವೃಷ್ಟಿಯಾಯಿತು. ಭರತನು ಮಾಡಬಾರದುದನ್ನು ಮಾಡಿದನೆಂದು ಹೇಳುತ್ತಿದ್ದ ಕುಲವೃದ್ಧರ ಮಾತುಗಳು ಭರತನನ್ನು ನಾಚಿಸಿದುವು. ಭರತನು ತಲೆತಗ್ಗಿಸಿ ನಿಂತುಕೊಂಡನು. ಆಗ ಬಾಹುಬಲಿಗೆ ಅದ್ಭುತವಾದ ವೈರಾಗ್ಯವು ತಲೆದೋರಿತು. ಸೋದರರೊಳ್ ಸೋದರರಂ ಕಾದಿಸುವುದು ಸುತನ ತಂದೆಯೆಡೆಯೊಳ್ ಬಿಡದು ತ್ಪಾದಿಸುವುದು ಕೋಪಮನ್ ಅಳ ವೀ ದೊರತನೆ ತೊಡರ್ವುದೆಂತು ರಾಜ್ಯಶ್ರೀಯೊಳ್ ಕಿಡುವೊಡಲ ಕಿಡುವ ರಾಜ್ಯದ ಪಡೆಮಾತುಗೊಳಲಮನ್ನ ಮಯ್ಯಗಿದಪುದೀ ಗಡೆ ಜೈನದೀಕ್ಷೆಯಂ ಕೊಂ ಡಡಿಗರಿಗಿಸುವಂ ಸಮಸ್ತಸುರಸಮುದಯಮಂ || ಎಂದು ನಿಶ್ಚಯಿಸಿ ಅಣ್ಣನನ್ನು ಕುರಿತು 'ನೆಲಸುಗೆ ನಿನ್ನ ವಕ್ಷದೊಳ್ ನಿಶ್ಚಲಮಾ ರಾಜ್ಯಲಕ್ಷ್ಮಿ', 'ಭೂವಲಯಮನಯ್ಯನಿತ್ತುದುಮಾಂ ನಿನಗಿತ್ತೆಂ ನೀನೊಲಿದ ಲತಾಂಗಿಗಂ ಧರೆಗಮಾಟಿಸಿದಂದು ನೆಗಡಿ ಮಾಸದೇ' ಎಂದು ವಿಜ್ಞಾಪಿಸಿ ತಪಸ್ಸಿಗೆ ಹೊರಟು ತಂದೆಯಾದ ಆದಿದೇವನ ಸಮೀಪಕ್ಕೆ ಬಂದು ನಮಸ್ಕರಿಸಿ 'ಹಿಂದೆ ಯುವರಾಜ ಪದವಿಯನ್ನು ದಯಪಾಲಿಸಿದ್ದಿರಿ; ಈಗ ಅಭ್ಯುದಯಕರವಾದ ಪ್ರವ್ರಜ್ಯದ ಪದವಿಯ ಯುವರಾಜಪದವಿಯನ್ನು ದಯಪಾಲಿಸಿ ಎಂದು ಪ್ರಾರ್ಥಿಸಿ ಪಡೆದು ಘೋರತಪಸ್ಸಿನಲ್ಲಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy