SearchBrowseAboutContactDonate
Page Preview
Page 217
Loading...
Download File
Download File
Page Text
________________ ೨೧೨) ಪಂಪಭಾರತಂ ಮಗ ಒಡವರ್ಪುಗ್ರ ಮದೇಭ ವಾಜಿ ಗಣಿಕಾನರ್ಫ್ಯಾದಿ ರತ್ನಂಗಳೊಳ್ ತೊಡರ್ದೊಪುತ್ತಿರೆ ಲಕ್ಷ್ಮಿ ದಂತಿ ತುರಗಂ ಶ್ರೀ ದಿವ್ಯಕಾಂತಾಜನಂ | ತೊಡೆವೆಂಬೊಂದುಮನಾ ಸುರಾಸುರರಿನಾ ಗೋವಿಂದನಿಂ ಮುನ್ನ ಕೋ ಛಡೆದಂಭೋನಿಧಿಯಂತೆ ಬಂದು ನೆಗಣ್ಣಿಂದ್ರಪ್ರಸ್ಥಮಂ ಧರ್ಮಜಂ || ೯ ಮಟ್ಟಿರಗಳೆ ಎನ್ನುವುದುಂ ತತ್ತುರದುವವನಂಗಳವಿರಳ ಮಳಯಾವಿಳಕಂಪಿತಂಗ | ಳವಿರಳ ಕುಸುಮಾವಳಿ ಕಂಪುವೇಜ ಸೊಗಯಿಪ ಕಿಜು ಮಿಡಿಗಳೊಳೊಪ್ಪಿ ತೋಜ | ಲವಣಾಬಿಯ ಬಳಸಿದುದೆನಿಸುವಗಲ ಬಳಸದಿರೆ ಕೊಂಟೆಯ ಚಲು ಪೊಗಟ | ಲರಿಡೆನಿಸಿರೆ ನೆಗೆದುದು ನಭಮನೆಯ ಮಿಳಿರ್ವ ಪತಾಕಾವಳಿ ದಿವಮನೆಯ ಬಳಸಿದ ಕೆಂಬೊನ್ನ ಮದಿಲ್ಲಳೊಳಗೆ ಮಣಿಮಯ ಭವನಾವಳಿ ತೊಳಗಿ ಬೆಳಗೆ ರಸ ರಸದ ಬಾವಿ ಮನೆ ಮನೆಗೆ ಬೇಜ ಕಿಸುಗಳ ರಜದ ಕಣಿವೆರಸು ತೋಜಿತ ಸುರಕುಜದ ನೆಲೋಳಂಗಣದೊಳೇನುಮಲಪಿಲ್ಲದ ಕಟ್ಟರೆ ಕಾಮಧೇನು ಪರದರ ಪಾರ್ವರ ಸೂಳೆಯರ ಮನೆಗಳವು ಧನದನ ಮನೆಯುಮನೇಟಪ ಮನೆಗಳವು ಪೂಬಲ ಬೆಡಂಗಂ ಮೆಚ್ಚಿ ಮೆಚ್ಚಿ ನೋಡಿ ದಿವಿಜೇಂದ್ರ ವಿಳಾಸದೊಳಿಂತು ಕೂಡಿ ಪರಿತಂದಾಗಳ್ ಪಿರಿದೊಸಗೆವೆರಸಿ ಪುರಕಾಂತಯರಾದರದಿಂದ ಪರಸಿ ೯. ಜೊತೆಯಲ್ಲಿ ಬರುತ್ತಿದ್ದ ಭಯಂಕರವಾದ ಆನೆ, ಕುದುರೆ, ವೇಶೈಯರು, ವಿಶೇಷ ಬೆಲೆಯುಳ್ಳ ರತ್ನ ಇವೆಲ್ಲವೂ ಜೊತೆಯಲ್ಲಿ ಪ್ರಕಾಶಿಸುತ್ತಿರಲು ಆ ಪಾಂಡವರು ದೇವದಾನವರಿಂದಲೂ ಶ್ರೀಕೃಷ್ಣನಿಂದಲೂ ಲಕ್ಷ್ಮಿ ಐರಾವತ, ಉಚ್ಚೆ ಶ್ರವಸ್ಸು, ಅಪ್ಪರಸ್ತ್ರೀಯರು, ಚಿಂತಾಮಣಿ ಮೊದಲಾದವುಗಳು ಸೂರೆಯಾಗುವುದಕ್ಕೆ ಮೊದಲಿದ್ದ ಸಮುದ್ರದ ಹಾಗೆ ಸಂಪೂರ್ಣವಾದ ಐಶ್ವರ್ಯದಿಂದ ಬಂದು ಧರ್ಮರಾಯನು ಇಂದ್ರಪ್ರಸ್ಥಪುರವನ್ನು ಸೇರಿದನು. ೧೦. ಆ ಪಟ್ಟಣದ ತೋಟಗಳು ದಟ್ಟವಾದ ಮಲಯಮಾರುತದಿಂದ ಅಲುಗಾಡಿಸಲ್ಪಟ್ಟು ಸಾಂದ್ರವಾದ ಪುಷ್ಪರಾಶಿಯು ಸುಗಂಧವನ್ನು ಬೀರುತ್ತಿತ್ತು. ಸೊಗಸಾಗಿ ಕಾಣುವ ಸಣ್ಣ ಹೀಚುಗಳು ಒಪ್ಪಿ ತೋರುತ್ತಿದ್ದುವು, ಉಪ್ಪಿನ ಸಮುದ್ರವೇ ಸುತ್ತುವರಿದಿದೆಯೋ ಎಂಬಂತಿದ್ದ ಕಂದಕಗಳು ಸುತ್ತಿ ಪ್ರಕಾಶಿಸುತ್ತಿರಲು ಕೋಟೆಯ ಸೌಂದರ್ಯವು ಹೊಗಳುವುದಕ್ಕೆ ಅಸಾಧ್ಯವೆನಿಸಿತ್ತು, ಆಕಾಶದವರೆಗೆ ಮೇಲಕ್ಕೆದ್ದು ಅಲುಗಾಡುತ್ತಿರುವ ಬಾವುಟಗಳ ಸಾಲು ಸ್ವರ್ಗದವರೆಗೂ ಹೋಗಿದ್ದುವು. ಸುತ್ತುವರಿದಿರುವ ಕೋಟೆಯ ಗೋಡೆಗಳೊಳಗೆ ರತ್ನಖಚಿತವಾದ ಅರಮನೆಗಳ ಸಮೂಹಗಳು ತೊಳಗಿ ಬೆಳಗುತ್ತಿದ್ದುವು, ರಸಯುಕ್ತ ಬಾವಿಗಳು ಪ್ರತಿಮನೆಯಿಂದಲೂ ಬೇರೆ ಬೇರೆ ಕೆಂಪುರತ್ನಗಳ ಧೂಳಿನ ಗಣಿಯಿಂದ ಕೂಡಿ ತೋರುತ್ತಿದ್ದುವು. ಕಲ್ಪವೃಕ್ಷದ ನೆರಳಿನಲ್ಲಿ ಕಾಮಧೇನುವು ಯಾವ ಅಲೆತವೂ ಇಲ್ಲದೆ ಸುಖವಾಗಿದ್ದಿತು. ವ್ಯಾಪಾರಿಗಳ, ಬ್ರಾಹ್ಮಣರ, ವೇಶ್ಯಾಜನರ ಮನೆಗಳು ಕುಬೇರನ ಮನೆಯನ್ನು ತಿರಸ್ಕರಿಸುತ್ತಿದ್ದುವು. ಆ ಪಟ್ಟಣದ ಬೆಡಗನ್ನು ವಿಶೇಷವಾಗಿ ಮೆಚ್ಚಿ ದೇವೇಂದ್ರನ ವೈಭವದಿಂದ ಕೂಡಿ ಪಾಂಡವರು ನಡೆದುಬಂದಾಗ ಪಟ್ಟಣದ ಸೀಜನರು ವಿಶೇಷಸಂತೋಷದಿಂದ ಕೂಡಿ ಆದರದಿಂದ ಹರಸಿದರು. ಅವರು ಚೆಲ್ಲುವ ಮಂತ್ರಾಕ್ಷತೆಗಳನ್ನೂ ಸಂಪೂರ್ಣವಾಗಿ ಮನಸ್ಸಂತೋಷದಿಂದ ಸ್ವೀಕರಿಸಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy