SearchBrowseAboutContactDonate
Page Preview
Page 209
Loading...
Download File
Download File
Page Text
________________ ೨೦೪ | ಪಂಪಭಾರತಂ ಚoll ಅದಜಿ ಪೊದಳು ನೀಳ ಪೊಗೆಯಂ ಲುಳಿತಾಳಕೆ ತನ್ನ ವಕ್ತ ಪ ದಿನೊಸದಾಂತೂಡಾಕಯ ಕಪೋಲದೊಳಾ ನವ ಧೂಮಲೇಖ ಚ | ಆದಿರ್ಗೋಳಿ ಗಾಡಿವೆತ್ತಡರ್ದು ಕತ್ತುರಿಯೊಳ್ ಮದವಟ್ಟೆಯಂ ವಿಳಾ ಸದ ತೆಗೆದಂತೆ ಕಣ್ಣೆಗೆದು ತೊಳೆದುದಾ ಕದನತ್ರಿಣೇತ್ರನಾ || ೭೬ ವ|| ಅಂತು ಸೊಗಯಿಸೆ ಪಾಡುವ ಮಂಗಳರವಂಗಳುಮೋದುವ ಋಚಗಳುಂ ಪರಸುವ ಪರಕೆಗಳುಮಸೆಯ ಪಸೆಯೊಳಿರ್ದುಚಂil ಪರಿಜೆಯನಂಟು ) ಕೆನ್ನೆಗಳನೊಯ್ಯನೆ ನೀವುವ ಚಿನ್ನಪೂವನೋ ಸರಿಸುವ ಹಾರಮಂ ಪಿಡಿದು ನೋಡುವ ಕಟ್ಟಿದ ನೂಲ ತೊಂಗಲಂ | ತಿರಿಪುವ ಕೆಮ್ಮದೊಂದು ನೆವದಿಂ ಲಲಿತಾಂಗಿಯ ಶಂಕೆಯಂ ಭಯಂ ಬೆರಸಿದ ನಾಣುಮಂ ಕ್ರಮದ ಪಿಂಗಿಸು ಬೇಸಅದಿರ್ ಗುಣಾರ್ಣವಾ IIt ೭೭ ವ|| ಎಂದು ಕೆಲದೊಳಿರ್ದ ದಂಡುರುಂಬೆಗಳ ಬುದ್ಧಿವೇಟಿಉll 'ಕಾಂತ ಪೊದಳ ನಾಣ ಭರದಿಂದಧರೀಕೃತ ಚಂದ್ರಬಿಂಬ ಸ. ತ್ಯಾಂತಿಯನಾನನಾಂಬುಜಮನೊಯ್ಯನೆ ಬಾಗಿರೆ ಕಾದಲಂಗ ಸ | ಯಂತಿರು ನಾಣ್ಯದಂದಣುಗೆಯರ್ ಪಿಡಿದುಳೆತ್ತಿ ಬುದ್ಧಿ ವೇ ಆಂತ ಕದ೦ಪಿನೊಳ್ ಪೊಳೆದುವಾಕೆಯ ಹಾರ ಮರೀಚಿ ಮಾಲೆಗಳ್ || ೭೮ ೭೬. ಕೊಂಕುಗೂದಲಿನ ಆ ಬ್ರೌಪದಿಯು ದಟ್ಟವೂ ದೀರ್ಘವೂ ಆದ ಅರಳಿನ ಹೊಗೆಯನ್ನು ತನ್ನ ಮುಖಕಮಲದಲ್ಲಿ ಪ್ರೀತಿಯಿಂದ ಧರಿಸಿರುವ ಅವಳ ಕೆನ್ನೆಯಲ್ಲಿ ಆ ಹೊಸಹೊಗೆಯ ರೇಖೆಯು ಸೌಂದರ್ಯದಿಂದ ಕೂಡಿ ಊರ್ಧ್ವಮುಖವಾಗಿ, ಕಸ್ತೂರಿಯಿಂದ ರಚಿಸಿದ ಪತ್ರಲೇಖೆ (ಕಪೋಲಪತ್ರ - ಅಲಂಕಾರಕ್ಕಾಗಿ ಕೆನ್ನೆಯ ಮೇಲೆ ಬರೆದುಕೊಳ್ಳುವ ಚಿತ್ರ)ಯಂತೆ ಆ ಕದನತ್ರಿಣೇತ್ರನ ಕಣ್ಣಿಗೆ ಸೊಗಸಾಗಿ ಕಂಡಿತು. ವl ಸೊಗಸಾಗಿರುವ ಹಾಗೆ ಹಾಡುತ್ತಿರುವ ಮಂಗಳಧ್ವನಿಗಳೂ ಪಠಿಸುತ್ತಿರುವ ವೇದಮಂತ್ರಗಳೂ ಹರಸುವ ಹರಕೆಗಳೂ ಪ್ರಕಾಶಿಸುತ್ತಿರಲು ಹಸೆಯಲ್ಲಿದ್ದ ತುಂಟಸಖಿಯರು ಗುಣಾರ್ಣವನಿಗೆ ಹೀಗೆಂದು ಸೂಚಿಸಿದರು. ೭೭. ಕೆನ್ನೆಯನ್ನು ಸವರು, ಚಿನ್ನದ ಹೂವನ್ನು ಓರೆಮಾಡು, ಹಾರವನ್ನು ಹಿಡಿದು ಪರೀಕ್ಷೆಮಾಡು, ಅಲಂಕಾರಕ್ಕಾಗಿರುವ ನೂಲಿನ ಕುಚ್ಚನ್ನು ತಿರುಗಿಸು, ಕಾರ್ಯಗಳ (ಚೇಷ್ಟೆಯನೆಪದಿಂದ ಕೋಮಲಶರೀರೆಯಾದ ಆ ಬ್ರೌಪದಿಯ ಸಂಶಯವನ್ನೂ ಭಯದಿಂದ ಕೂಡಿದ ನಾಚಿಕೆಯನ್ನೂ ಗುಣಾರ್ಣವನೇ ನೀನು ಕ್ರಮಕ್ರಮವಾಗಿ ಹೋಗಲಾಡಿಸು. ಈ ಕಾರ್ಯದಲ್ಲಿ ನೀನು ಬೇಸರಪಡಬೇಡ, ವll ಎಂದು ಪಕ್ಕದಲ್ಲಿದ್ದ ತುಂಟದಾಸಿಯರು ಬುದ್ದಿಹೇಳಲು - ೭೮. ಬ್ರೌಪದಿಯು ಲಜ್ಜಾಭಾರದಿಂದ ಚಂದ್ರಬಿಂಬದ ಕಾಂತಿಯನ್ನೂ ಕೀಳುಮಾಡಿದ್ದ ತನ್ನ ಮುಖಕಮಲವನ್ನು ನಿಧಾನವಾಗಿ ಬಗ್ಗಿಸಿರಲು ಅವಳ ಸಖಿಯರು ಪ್ರೀತಿಯಿಂದ ಅವಳ ಮುಖವನ್ನೆತ್ತಿ 'ನಿನ್ನ ಪ್ರಿಯನಿಗೆ ಸರಿಯಾಗಿರು' ಎಂದು ಬುದ್ದಿಹೇಳುತ್ತಿದ್ದಾರೆಯೋ ಎನ್ನುವ ರೀತಿಯಲ್ಲಿ ಅವಳ ಕೆನ್ನೆಯಲ್ಲಿ ಅವಳ ಹಾರದ * ಇಲ್ಲಿ ಪರಿಜೆಯಂಬ ಶಬ್ದಕ್ಕೆ ಅರ್ಥ ದುರವಗಾಹ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy