SearchBrowseAboutContactDonate
Page Preview
Page 191
Loading...
Download File
Download File
Page Text
________________ ೧೮೬ / ಪಂಪಭಾರತಂ ಪಯೋವ್ರತನೆಂಬ ದಿವ್ಯ ಮುನಿಪತಿಯಿಂ ಪುತ್ರಕಾಮೇಷ್ಠಿಗೆಯೇ ಹೋಮಕುಂಡದಲ್ಲಿ ಧಗಧಗಿಸುವ ಜ್ವಾಲಾಮಾಲೆಗಳೊಳ್ ಕಿಬಾಳುಮತ್ತಪರಮುಮಭೇದ ಕವಚಮುಂಬೆರಸೊಗೆದ ಧೃಷ್ಟದ್ಯುಮ್ನನೆಂಬ ಮಗನುಮಂ ಜ್ವಾಳಾಮಾಳಿನಿಯೊಗೆವಂತೊಗೆದ ಕೃಷ್ಣಯೆಂಬ ಮಗಳುಮಂ ಪಡೆದನಾ ಹೋಮಾಗ್ನಿಯೊಳ್ ಪುಟ್ಟದೊಂದು ದಿವ್ಯ ಚಾಪಮುಮಣ್ಣು ದಿವ್ಯ ಶರಮೊಳವಾ ಬಿಲ್ಲನೇಶಿಸಿ ಆ ಸರಲ್ಗಳಿಂದಾತನ ಮನೆಯ ಮುಂದೆ ನಭದೊಳ್ ನಲಿನಲಿದಾಡುವ ಜಂತದ ಮಾನನೆಚ್ಚನು ಮಾಕೆಗೆ ಗಂಡನಕ್ಕುಮಂದಾದೇಶಮಂತಪ್ಪ ಸಾಹಸಪುರುಷಂ ವಿಕ್ರಮಾರ್ಜುನನಲ್ಲದ ಪೆರಿಲ್ಲೆಂಬರದಹಿಂದಿನ್ನುಂ ಪಾಂಡವರೊಳರೆಂಬ ಮಾತುಗಳು ಬುದ್ಧಿಯೊಡೆಯರಾರಾನುಂ ನುಡಿವ‌ ದ್ರುಪದನುಮಾಗಳಾ ಕೂಸಿಂಗೆ ಸಯಂಬರಮಂ ಮಾಡಲೆಂದು ನೆಲದೊಳುಳ್ಳರಸು ಮಕ್ಕಳೆಲ್ಲರ್ಗಂ ಬಟೆಯನಟ್ಟಿದೊಡೆ ದುರ್ಯೋಧನಾದಿಗಳ ಮೊದಲಾದನೇಕ ದೇಶಾಧೀಶ್ವರರೆಲ್ಲಂ ಛತ್ರವತಿಯೆಂಬುದು ದ್ರುಪದನ ಪೋಲಾ ಪೊಲೈ ವಂದಿರ್ದರಾನಲ್ಲಿಂದಂ ಬಂದನೆಂದು ಪೇಟೆ ತನ್ನ ತಾಂತಮೆಲ್ಲಮಂ ಕೇಳು ತಮ್ಮೊಳಾಳೋಚಿಸಿ ಮ|| ತಲೆಯೊಳ್ ಸೀರೆಯನಿಕ್ಕಿ ಕಮ್ಮನೆನಿತಂ ಪೂಣ್ರ್ಪಮುಗ್ರಾರಿ ವಂ ಶ ಲತಾವಲ್ಲರಿಗಳ ದಾವಶಿಖವೊಲ್ ಮೆಯೋತಿ ತದೌಪದೀ | ಲಲನಾವ್ಯಾಜದಿನೀಗಳೊಂದೆ ಪೊಲೊಳ್ ಸಂದಿರ್ದ ಭಾಸ್ವತ್ತುಹ ದಲಕಂ ಮಾರ್ವಲಕಂ ಗುಣಾರ್ಣವ ಶರಪ್ರಾಗ ಮಂ ತೋರುವಂ ||೩೩ ಮಾಡಿದನು. ಪಯೋವ್ರತನೆಂಬ ದೇವಋಷಿಯಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸಿದನು. ಹೋಮಕುಂಡದಲ್ಲಿ ಧಗಧಗಿಸಿ ಉರಿಯುವ ಜ್ವಾಲೆಗಳ ಸಮೂಹದಲ್ಲಿ ಒರೆಯಿಂದ ಹೊರಸೆಳೆದ ಕತ್ತಿಯನ್ನೂ ಗುರಾಣಿಯನ್ನೂ (ಭೇದಿಸಲಾಗದ) ಒಡೆಯಲಾಗದ ಕವಚವನ್ನೂ ಕೂಡಿಕೊಂಡು ಧೃಷ್ಟದ್ಯುಮ್ನನೆಂಬ ಮಗನೂ ಜ್ವಾಲಾಮಾಲಿನೀದೇವಿಯಂತಿರುವ ಕೃಷ್ಣಯೆಂಬ ಮಗಳೂ ಹುಟ್ಟಿದರು. ಆ ಹೋಮಾಗ್ನಿಯಲ್ಲಿಯೇ ಒಂದು ಶ್ರೇಷ್ಠವಾದ ಬಿಲ್ಲೂ ಅಯ್ದು ಶ್ರೇಷ್ಠವಾದ ಬಾಣಗಳೂ ಉದ್ಭವಿಸಿದವು. ಆ ಬಿಲ್ಲನ್ನು ಹೆದೆಯೇರಿಸಿ ಆ ಬಾಣಗಳಿಂದ ಆತನ ಮನೆಯ ಮುಂದೆ ಆಕಾಶದಲ್ಲಿ ನಲಿನಲಿದು ಆಡುವ ಯಂತ್ರದ ಮೀನನ್ನು ಹೊಡೆಯುವವನು ಆಕೆಗೆ ಗಂಡನಾಗುತ್ತಾನೆ ಎಂಬುದು (ಆದೇಶ) ನಿಯಮ. ಅಂತಹ ಸಾಹಸ ಪುರುಷನು ವಿಕ್ರಮಾರ್ಜನನಲ್ಲದೆ ಬೇರೆಯವರಿಲ್ಲ ಎನ್ನುವುದರಿಂದ ಪಾಂಡವರು ಇನ್ನೂ ಇದ್ದಾರೆ ಎಂಬ ಮಾತುಗಳನ್ನು ಬುದ್ಧಿವಂತರೆಲ್ಲರೂ ಹೇಳುತ್ತಿದ್ದಾರೆ. ಈಗ ದ್ರುಪದನು ಆ ಕನ್ಯಗೆ ಸ್ವಯಂವರವನ್ನು ಮಾಡಬೇಕೆಂದು ಭೂಮಿಯಲ್ಲಿರುವ ಎಲ್ಲ ರಾಜಕುಮಾರರಿಗೂ ದೂತರ ಮೂಲಕ ಸಮಾಚಾರವನ್ನು ಕಳುಹಿಸಿದ್ದಾನೆ. ದುರ್ಯೋಧನನೇ ಮೊದಲಾದ ಅನೇಕ ರಾಜರುಗಳೆಲ್ಲ ದ್ರುಪದನ ಆ ಛತ್ರವತಿ ಎಂಬ ಪಟ್ಟಣಕ್ಕೆ ಬಂದಿದ್ದಾರೆ. ನಾನು ಅಲ್ಲಿಂದಲೇ ಬಂದೆ ಎಂದನು. ಆ ವೃತ್ತಾಂತವನ್ನೆಲ್ಲ ಕೇಳಿ ಪಾಂಡವರು ತಮ್ಮಲ್ಲಿ ಆಲೋಚಿಸಿದರು ೩೩. ಅರ್ಜುನ, ನಾವು ತಲೆಯ ಮೇಲೆ ಬಟ್ಟೆಯನ್ನೂ ಹಾಕಿಕೊಂಡು ಎಷ್ಟು ಕಾಲ ಸುಮ್ಮನೆ ಪ್ರತಿಜ್ಞೆ ಮಾಡಿಕೊಂಡಿರುವುದು? ಭಯಂಕರವಾದ ಶತ್ರುಗಳೆಂಬ ಬಳ್ಳಿಯ ಕುಡಿಗಳಿಗೆ ಕಾಡುಗಿಚ್ಚಿನಂತೆ ನಮ್ಮನ್ನು ಪ್ರಕಟಿಸಿಕೊಂಡು ಆ ದೌಪದೀಕನೆಯ ನೆಪದಿಂದ ಈಗ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy