SearchBrowseAboutContactDonate
Page Preview
Page 185
Loading...
Download File
Download File
Page Text
________________ ೧೮೦ | ಪಂಪಭಾರತ ನೆಗೆದು ಸೊಗಯಿಸುವ ಕೋಂಟೆಯೊಳಿನಿಂ | ವಿವಿಧ ದೇವ ಗೃಹದಾಟಪಾಟದಿಂ ಮಲಗಿ ಬಟ್ಟೆಯರ ನೋಟ್ಟಿ ನೋಟದಿಂ || ಪಂಚರತುನದೋಳೆ ನಳದ ಪಸರದಿಂ ತೋರಣಂಗಳೊಳೆ ತೊಡರ್ದ ತಿಸರದಿಂ | ಧನದರನ್ನರಿವರೆನಿಪ ಪರದರಿಂ ದೇವರನ್ನರಿವರೆನಿಪ ಬಿರುದರಿ೦ || ನೆಯ ಹೊಗಯಿಷಾ ಯೇಕಚಕ್ರಮಂ ಮೆಚ್ಚಿದಂ ಹರಿಗನಮಿತ ವಿಕ್ರಮಂ | - ೨೨ ವಗ ಅಂತು ಮಚ್ಚಿ ತಮುತಯ್ಯರುಮಿನ್ನವು ಪೊಳಿಲ್ಲಿ ಪೊಲಕ್ಕೆ ನಾಲ್ಕು ಯುಗದೊಳಂ ವಸುಮತಿ ಪದ್ಮನಗರಮೇಕಚಕ್ರಂ ಬಹುಧಾನ್ಯವೆಂಬ ನಾಲ್ಕು ಹೆಸರಾದುದೆಂದು ಮನಂಗೊಂಡು ನೋಡುತ್ತುಂ ಬಂದು ಚತುರ್ವೆದಪಾರಗರ ಮನೆಯ ಮುಂದಣ ಚತುಶ್ಯಾಲೆಯೊಳ್ ಬೀಡು ಬಿಟ್ಟು ಧರಾಮರ ವೇಷದೊಳೊಂದು ವರುಷಮಿರ್ಪನ್ನೆಗಮೊಂದುದಿವಸಂ ನೋಡಿ ಸಂತೋಷಪಟ್ಟನು. ಝರಿಯ ಪ್ರವಾಹಗಳಿಂದಲೂ ಎಲ್ಲ ಕಡೆಯಲ್ಲಿಯೂ ನಲಿದಾಡುತ್ತಿರುವ ಹೊಸನವಿಲುಗಳಿಂದಲೂ ಕೊಬ್ಬಿ ಬೆಳೆದು ವಾಸನೆಯನ್ನು ಬೀರುತ್ತಿರುವ ಕಂಪು ಬತ್ತದಿಂದಲೂ ಅಲ್ಲಿ ಸಂಚರಿಸುತ್ತಿರುವ ಗಿಳಿಯ ಹಿಂಡುಗಳ ಸಮೂಹದಿಂದಲೂ ಕುಡಿಯುವುದಕ್ಕೆ ಯೋಗ್ಯವಾದ ಸಮುದ್ರವೆನಿಸಿಕೊಂಡಿರುವ ಕಂದಕಗಳ ದೀರ್ಘತೆಯಿಂದಲೂ ಮೇಲಕ್ಕೆ ಹಾರಿ ಕೋಟೆಯ ಸೊಗಸಾಗಿ ಕಾಣುವ ಶ್ರೇಷ್ಠತೆಯಿಂದಲೂ ಬಗೆ ಬಗೆಯ ದೇವಾಲಯ ಕ್ರೀಡಾವಿನೋದಗಳಿಂದಲೂ ದಾರಿಹೋಕರನ್ನು ಕರುಣೆಯಿಂದ ನೋಡುವ ನೋಟದಿಂದಲೂ ಅಯ್ಡು ರೀತಿಯ ರತ್ನಗಳಿಂದ ತುಂಬಿದ ಅಂಗಡಿಗಳಿಂದಲೂ ತೋರಣಗಳಲ್ಲಿ ಸೇರಿಕೊಂಡಿರುವ ಮೂರೆಳೆಯಹಾರಗಳಿಂದಲೂ ಕುಬೇರನಂತಹವರಿವರು ಎನ್ನಿಸಿಕೊಂಡ ವ್ಯಾಪಾರಿ ಗಳಿಂದಲೂ ದೇವರಂತಹರಿವರು ಎನ್ನಿಸಿಕೊಂಡಿರುವ ಬಿರುದಾಂಕಿತರಿಂದಲೂ ಪೂರ್ಣವಾಗಿ ಸೊಗಯಿಸುವ ಏಕಚಕ್ರಪುರವನ್ನು ಎಲ್ಲೆಯಿಲ್ಲದ ಪರಾಕ್ರಮವುಳ್ಳ ಹರಿಗನು (ಅರ್ಜುನ-ಅರಿಕೇಸರಿಯು) ಮೆಚ್ಚಿದನು. ವರ ಹೀಗೆ ಮೆಚ್ಚಿ ತಾವೈದು ಜನಗಳೂ ಇಂತಹ ಪಟ್ಟಣಗಳೇ ಇಲ್ಲ; ಈ ಪಟ್ಟಣಕ್ಕೆ ನಾಲ್ಕು ಯುಗದಲ್ಲಿಯೂ ಕ್ರಮವಾಗಿ ವಸುಮತಿ, ಪದ್ಮನಗರ, ಏಕಚಕ್ರ, ಬಹುಧಾನ್ಯ ಎಂಬ ಹೆಸರುಗಳಾದುವು. ಎಂದು ಸಂತೋಷಪಟ್ಟು ನೋಡುತ್ತ ಬಂದು ನಾಲ್ಕು ವೇದಗಳಲ್ಲಿಯೂ ಪಂಡಿತರಾದವರೊಬ್ಬರ ಮನೆಯ ಮುಂಭಾಗದ ತೊಟ್ಟಿಯಲ್ಲಿ ಬೀಡುಬಿಟ್ಟು ಬ್ರಾಹ್ಮಣವೇಷದಿಂದ ಒಂದು ವರ್ಷ ಕಾಲವಿದ್ದರು. ಆ ಕಾಲದಲ್ಲಿ ಒಂದು ದಿನ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy