SearchBrowseAboutContactDonate
Page Preview
Page 182
Loading...
Download File
Download File
Page Text
________________ ಸಿಡಿಲು ಚಂ ತೃತೀಯಾಶ್ವಾಸಂ | ೧೭೭ ಕಂ11 ಏಂ ಗಾವಿಲನಯೊ ನಿನ್ನಂ ನಂಗುವುದರ್ಕಿವರನೆತ್ತಲುಮ ನರಮಂ | ಸಂಗಳಿಸಲ್ವೇಟ್ಟು ಮಾ ತಂಗವಿರೋಧಿಗೆ ಕುರಂಗ ಸಂಗರ ಧರೆಯೊಳ್ || ವ|| ಎಂಬುದುಂ ಹಿಡಿಂಬನಾಡಂಬರಂಗೆಯು ತುಂಬುರುಕೊಳ್ಳಿಯತಂಬರಂಬರಂ ܧ ಕಡುಪಿನೆ ಪೊತ್ತು ಪಾಸಯನೆಯರೆ ಭೀಮನುಮೊತ್ತಿ ಕಿಟ್ಟು ಬೇ ರೊಡನೆ ಮಹೀಜವೊಂದನಿಡೆಯುಂ ಬಿಡೆ ಪೊಯ್ಕೆಯುಮಾ ಬನಂ ಪಡ। ಲ್ವಡುತಿರೆ ಕಲ್ಲೊಳಂ ಮರದೊಳಂ ಬಡಿದೊಯ್ಯನ ಜೊಲ್ಲು ದೈತ್ಯನಂ ಪಿಡಿದು ಮೃಣಾಳನಾಳಮನೆ ಸೀಳ್ವವೊಲೊರ್ಮಯ ಸೀಳು ಬೀಸಿದಂ ||೧೮ ವ|| ಆಗಳಾ ಕಳಕಳಕ್ಕೆ ಮುಲುಂದಿದಯ್ಯರುಮೆತ್ತಿದೇನೆಂದು ಬೆಸಗೊಳೆ ತದ್ವತ್ತಾಂತ ಮಲ್ಲಮನಜೆಪಿ ಹಿಡಿಂಬೆ ಡಂಬವಿಲ್ಲದೆ ಭೀಮಸೇನನೊಳಡಂಬಡಂ ನುಡಿಯೆ ಕೊಂತಿಯುಂ ಧರ್ಮಪುತ್ರನುಮಾಕೆ ಸಾಮಾನ್ಯವನಿತೆಯಲ್ಲಿವಳ್ ರಾಕ್ಷಸಸ್ತ್ರೀಯೆಂದು ಭಾವಿಸಲೇಡೀಕೆಯಂ ಕೆಯೊಳ್ಳುದ ಕಜ್ಜಮೆಂದಾಕೆಗಂ ಭೀಮಸೇನಂಗಂ ಗಂಧರ್ವವಿವಾಹಮಂ ಮಾಡಿದೊಡೆ ಹಿಡಿಂಬೆ ನೀಮಿಲ್ಲಿರಲ್ವೇಡ ಪರ್ವತದ ಮೇಲೆ ಕಲಂಗಿ ಕಲಿಸಿದ ಮರುದುಲುಗಲ ನಡುವೆ ಸುಧಾ ಕುರಿತು ಹೀಗೆಂದನು. ೧೭. ಎಂತಹ ದಡ್ಡನೊ ನೀನು ? ನಿನ್ನನ್ನು ನುಂಗುವುದಕ್ಕೆ ಇಷ್ಟು ಜನವನ್ನೂ ಎಬ್ಬಿಸಬೇಕೆ? ಜಿಂಕೆಯೊಡನೆ ಯುದ್ಧಮಾಡುವ ರಣರಂಗದಲ್ಲಿ ಗಜವಿರೋಧಿಯಾದ ಸಿಂಹಕ್ಕೆ ಸಹಾಯವನ್ನೂ ಕೊಡಿಸಬೇಕೆ? ಎಂದನು. ವ ಹಿಡಿಂಬನು ಆರ್ಭಟಿಸಿ ತೂಬರಮರದ ಸೌದೆಯ ಕೊಳ್ಳಿಯ ಹಾಗೆ ಆಕಾಶದವರೆಗೆ ನೆಗೆದು-೧೮, ಒಂದು ಹಾಸುಬಂಡೆಯನ್ನು ವೇಗದಿಂದ ಕಿತ್ತು ಹೊತ್ತು ಬರಲು ಭೀಮನೂ ಬಲಾತ್ಕಾರದಿಂದ ಒಂದು ಮರವನ್ನು ಬೇರೊಡನೆಯೇ ಕಿತ್ತು ಅವನ ಮೇಲೆ ಬೀಸುವುದರಿಂದಲೂ ಒಂದೇ ಸಮನಾಗಿ ಹೊಡೆಯುವುದರಿಂದಲೂ ಆ ಕಾಡೆಲ್ಲ ಚೆಲ್ಲಾಪಿಲ್ಲಿಯಾಗುವ ಹಾಗೆ ಕಲ್ಲಿನಿಂದಲೂ ಮರದಿಂದಲೂ ಬಡಿದು ನಿಧಾನವಾಗಿ ಜೋತುಬಿದ್ದ ಆ ರಾಕ್ಷಸನನ್ನು ಹಿಡಿದುಕೊಂಡು ತಾವರೆಯ ದಂಟನ್ನು ಸೀಳುವ ಹಾಗೆ ಒಂದೇ ಸಲ ಸೀಳಿ ಎಸೆದನು. ವ| ಆಗ ಆ ಕಲಕಲಶಬ್ದದಿಂದ ಮೈಮರೆತು ನಿದ್ದೆ ಮಾಡುತ್ತಿದ್ದ ಅಯ್ದು ಜನವೂ ಎಚ್ಚೆತ್ತು ಇದೇನೆಂದು ಪ್ರಶ್ನೆಮಾಡಲು ಆ ವಿಷಯವನ್ನೆಲ್ಲ ತಿಳಿಸಿ ಹಿಡಿಂಬೆಯು ಆಡಂಬರವಿಲ್ಲದೆ ಸರಳವಾಗಿ ಭೀಮನ ವಿಷಯದಲ್ಲಿ ತನ್ನ ಒಪ್ಪಿಗೆಯನ್ನು ತಿಳಿಸಲು ಕುಂತಿಯೂ ಧರ್ಮರಾಜನೂ ಇವಳು ಸಾಮಾನ್ಯಳಾದ ಹೆಂಗಸಲ್ಲ: ರಾಕ್ಷಸಸ್ತೀಯೆಂದು ಭಾವಿಸಬೇಡ, ಅವಳನ್ನು ಸ್ವೀಕರಿಸುವುದೇ (ನಿನಗೆ ಯೋಗ್ಯವಾದ) ಕಾರ್ಯ ಎಂದು ಅವಳಿಗೂ ಭೀಮಸೇನನಿಗೂ ಗಾಂಧರ್ವವಿವಾಹವನ್ನು ಮಾಡಿದರು. ಹಿಡಿಂಬೆಯು ನೀವು ಇಲ್ಲಿರುವುದು ಬೇಡ; ಬೆಟ್ಟದ ಮೇಲೆ ಕರಗೆ ಕಪ್ಪಾಗಿ ಕಾಣುವ ಮರಗಳ ತೋಪಿನ ಮಧ್ಯೆ ಸುಣ್ಣದಿಂದ ಬಿಳುಪಾಗಿ ಮಾಡಲ್ಪಟ್ಟು ಎತ್ತರವೂ ಮನೋಹರವೂ ಆಗಿ ನಿಮ್ಮ ಕಣ್ಣಿಗೆ ಕಾಣುತ್ತಿರುವ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy