SearchBrowseAboutContactDonate
Page Preview
Page 172
Loading...
Download File
Download File
Page Text
________________ ಕಂ !! ನಡಪಿಯುಮೋದಿಸಿಯುಂ ಬಿ ದ್ವಿತೀಯಾಶ್ವಾಸಂ |೧೬೭ ಊಡಿಯಿಸಿಯುಂ ಕೆಚ್ಚುವಿರ್ದ ಕೂರ್ಮಗಳೆರ್ದೆಯಂ | ನಡೆ ಪಾಂಡುಸುತರಗಲೆಗೆ ನಿಡುಸುಯ್ದ‌ ದ್ರೋಣ ಭೀಷ್ಮ ಕೃಪ ವಿದುರರ್ಕಳ್ || ೯೬ ವ|| ಆಗಳ್ ಎದುರಂ ಕೆಲನಟಿಯದಂತುಮವರವಂತುಂ ಸಾಮಾನ್ಯ ಸ್ಥಿತಿಯೊಳೆ ಬಟ್ಟೆಯ ನಂಜಿನ ಕಿರ್ಚಿನ ದೆಸೆಗೆ ಕರಂ ಪ್ರಯತ್ನಪರರಾಗಿಮೆಂದೊಡಂತೆ ಗೆಲ್ವಮೆಂದವರನಿರಲ್ವೇಯ್ದು ಪಯಣ೦ಬೋಗಿ ಕಂ ಪೊಳಪಿನ ಕಿರಣದ ಗಾಳಿಯ ಪೊಳಪನೆ ಸೈರಿಸದ ಕುಸುಮದಳ ಸುಕುಮಾರರ್ | ತಳರ್ದು ನೆಲೆಯಿಂದಮಾಗಳ ಕೊಳದಿಂ ಪೊಜಮಟ್ಟ ಹಂಸೆಗಳೆಣೆಯಾದರ್ 62 ವll ಆಗಿ ತಾವಾದಿಗರ್ಭೇಶ್ವರರಪುದಂ ತಳರ್ದೆಡೆಯೆಡೆಯ ಮರಂಗಳ ತೊಗಳ ಬಾಡಂಗಳ ಪೆಸರ್ಗಳಂ ಬೆಸಗೊಳುತ್ತುಂ ಮಹಾಗ್ರಹಾರಂಗಳ ಮಹಾಜನಂಗಳ ಕೊಟ್ಟ ಪೊನ್ನ ಜನ್ನವಿರಂಗಳುಮನವರ ಪರಕೆಯುಮಂ ಕೆಯೊಳುತ್ತುಮವರ್ಗ ಬಾಧೆಯಾಗದಂತು ಕಾಪಂ ನಿಯಮಿಸುತ್ತುಂ ಕಾಲೂರ್ಗಳ ಗಂಡರ ಹೆಂಡಿರ ನಡೆಯುಡೆಯ ನುಡಿಯ ಮುಡಿಯ ಗಾಂಪಿಂಗ ಮುಗುಳಗೆ ನಗುತ್ತು ಮಲ್ಲಿಗಲ್ಲಿಗೊಡದ ಕೆಲಗಮಲೆದಾಯತನಕ್ಕಂ ಧನಮನಿತ್ತು ೯೬. ಬಾಲ್ಯದಿಂದ ಸಲಹಿಯೂ ವಿದ್ಯಾಭ್ಯಾಸ ಮಾಡಿಸಿಯೂ ಬಿಲ್ವಿದ್ಯೆಯನ್ನು ಕಲಿಸಿಯೂ ನಿಕಟವಾಗಿ ಅಂಟಿಕೊಂಡು ಗಾಢವಾಗಿದ್ದ ಪ್ರೇಮವು ಮನಸ್ಸನ್ನು ನಾಟಿರಲು ಭೀಷ್ಮದ್ರೋಣಕೃಪ ವಿದುರರು ಅವರ ಅಗಲಿಕೆಗಾಗಿ ನಿಟ್ಟುಸಿರನ್ನು ಸೆಳೆದರು. ವ ಆಗ ವಿದುರನು ಪಕ್ಕದವರಿಗೆ ತಿಳಿಯದಂತೆಯೂ ಅವರಿಗರ್ಥವಾಗುವಂತೆಯೂ ಸರಳವಾದ ರೀತಿಯಲ್ಲಿಯೇ 'ದಾರಿಯಲ್ಲಿ ಪ್ರಾಪ್ತವಾಗಬಹುದಾದ ವಿಷ, ಅಗ್ನಿ ಮೊದಲಾದುವುಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ' ಎಂದು ಹೇಳಲು ಅವರು ಹಾಗೆಯೇ ಮಾಡುತ್ತೇವೆಂದು ಹೇಳಿ ಅವರನ್ನು ಅಲ್ಲಿಯೇ ನಿಲ್ಲಿಸಿ ಮುಂದೆ ಪ್ರಯಾಣಮಾಡಿದರು. ೯೭. ಕಿರಣದ ಹೊಳಪನ್ನೂ ಗಾಳಿಯ ಸುಳಿವನ್ನೂ ಸೈರಿಸದೆ, ಹೂವಿನೆಸಳಿನಂತೆ ಕೋಮಲವಾಗಿದ್ದ ಆ ಸುಕುಮಾರರು ತಮ್ಮ ವಾಸಸ್ಥಳದಿಂದ ಹೊರಟು ಸರೋವರವನ್ನು ಬಿಟ್ಟು ಹೊರಟ ಹಂಸಗಳಿಗೆ ಸಮಾನರಾದರು. ವ|| ತಾವು ಆಗರ್ಭ ಶ್ರೀಮಂತರಾದುದರಿಂದ ಅಲ್ಲಿಂದ ಹೊರಟು ಪಕ್ಕಪಕ್ಕದಲ್ಲಿಯೇ ಸಿಕ್ಕಿದ ಮರಗಳ ನದಿಗಳ ಹಳ್ಳಿಗಳ ಹೆಸರುಗಳನ್ನು ವಿಚಾರಮಾಡುತ್ತಲೂ ಶ್ರೇಷ್ಠವಾದ ಅಗ್ರಹಾರದ ಮಹಾಜನಗಳು ಕೊಟ್ಟಂತಹ ಚಿನ್ನದ ಯಜ್ಯೋಪವೀತಗಳನ್ನೂ ಆಶೀರ್ವಾದಗಳನ್ನೂ ಸ್ವೀಕರಿಸುತ್ತಲೂ ಅವರಿಗೆ ಯಾವ ತೊಂದರೆಯೂ ಆಗದಂತೆ ರಕ್ಷಣೆಯನ್ನು ಏರ್ಪಡಿಸುತ್ತಲೂ ಸಣ್ಣ ಹಳ್ಳಿಗಳ ಗಂಡಸರ ಹೆಂಗಸರ ಆಚಾರ, ಉಡುಪು ಮಾತು ಮತ್ತು ತುರುಬುಗಳ ದಡ್ಡತನಕ್ಕೆ ಹುಸಿನಗುತ್ತಲೂ ಅಲ್ಲಲ್ಲಿ ಒಡೆದುಹೋಗಿದ್ದ ಕೆರೆಗೂ ಪಾಳಾಗಿದ್ದ ದೇವಾಲಯಗಳಿಗೂ ಹಣವನ್ನೂ ಕೊಟ್ಟು ಮೊದಲಿದ್ದ ಸ್ಥಿತಿಗೆ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy