SearchBrowseAboutContactDonate
Page Preview
Page 163
Loading...
Download File
Download File
Page Text
________________ ೧೫೮ / ಪಂಪಭಾರತಂ ವll ಮತ್ತಮ್ಮೆಂದ್ರ ವಾರುಣ ವಾಯವ್ಯಾಗ್ನೆಯ ಪಾರ್ವತಾದಿ ಬಾಣಂಗಳಂ ತುಡ ಚಂ|| ಕವಿದುವು ಕಾಳ ನೀಳ ಜಳದಾವಳಿ ವಾರಿಧಿಗಳ ಧರಿತ್ರಿಯಂ ಕವಿದುವು ಗಾಳಿಗಳ ಪ್ರಳಯಕಾಲಮನಾಗಿಸಲೆಂದೆ ಲೋಕಮಂ | ಕವಿದುವು ಮೊಕ್ಕಳಂ ಕವಿದುವುಗ, ಲಯಾಗ್ನಿಗಳಂತೆ ಬೆಟ್ಟುಗಳ ಕವಿದುವಿವೆಂಬನಿತ್ತು ಭಗಮಾಯು ಗುಣಾರ್ಣವನಸ್ತಕೌಶಲಂ || ೭೭ ವ|| ಆಗಳಾ ಪರಾಕ್ರಮಧವಳನ ಶರಪರಿಣತಿಯಂ ಕಂಡು ದುರ್ಯೋಧನನ ಮಗು ತಲೆನವಿರ ಗಂಟಂ ಕಿದಾಗೆ ದೊಣ ಭಪ್ಪ ಕೃಪ ವಿದುರ ಪ್ರಕೃತಿಗಳ ಮೊಗಮರಲ್ಲ ತಜು: ಪಿರಿದಾಗ ತೋಳಗುವ ತೇಜ ಓಹಿಳೆ ತೊಳಗುವ ದಿವ್ಯಾಸ್ತಮಮರ್ದ ಕೋದಂಡಮಸುಂ | ಗೊಳಿಸಿ ಮನಂಗೊಳಿಸ Jಯಂ ಗೋಳಿಸೆ ಸಭಾಸದರನುಜದ ಕರ್ಣ೦ ಬಂದ | ವ|| ಬಂದು ದ್ರೋಣಾಚಾರ್ಯಂಗೆ ಪೊಡಮಟ್ಟು ಶರಧಿಯಿಂ ದಿವ್ಯಾಸ್ತಂಗಳನುರ್ಚಿ ಕೊಂಡು ಪಂಜರವನ್ನು ಕಟ್ಟಿದನು. ವರ ಮತ್ತು ಐಂದ್ರ, ವಾರುಣ, ವಾಯವ್ಯ, ಆಗ್ನೆಯ, ಪಾರ್ವತವೇ ಮೊದಲಾದ ಆಸ್ತಗಳನ್ನು ಪ್ರಯೋಗಿಸಲು-೭೭. ಪ್ರಳಯಕಾಲದ ಕಪ್ಪುಮೋಡಗಳು ಮುಚ್ಚಿಕೊಂಡವು. ಸಮುದ್ರಗಳು ಭೂಮಿಯನ್ನು ಮುಚ್ಚಿದುವು. ಪ್ರಳಯಕಾಲವನ್ನುಂಟುಮಾಡಬೇಕೆಂದೇ ಬಿರುಗಾಳಿಗಳು ಭೂಮಿಯನ್ನಾವರಿಸಿ ಕೊಂಡವು. ಪ್ರಳಯಕಾಲದ ಬೆಂಕಿಗಳು ವಿಶೇಷವಾಗಿ ಮುಚ್ಚಿಕೊಂಡವು. ಹಾಗೆಯೇ ಬೆಟ್ಟಗಳು ಕವಿದುಕೊಂಡವು ಎನ್ನುವಷ್ಟು ಮಟ್ಟಿಗೆ ಅರ್ಜುನನ ಅಸ್ತವಿದ್ಯಾ ಕೌಶಲವು ಭಯಂಕರವಾಯಿತು. ವ|| ಆಗ ಆ ಸಾಕ್ರಮಧವಳನಾದ ಅರ್ಜುನನ ಬಿಲ್ವಿದ್ಯೆಯ ಪಾಂಡಿತ್ಯವನ್ನು ನೋಡಿ ದುರ್ಯೋಧನನ ಮುಖವು ತಲೆಯಕೂದಲಿನ ಗಂಟಿಗಿಂತ ಚಿಕ್ಕದಾಗಲು, ದೊಣ, ಭೀಷ್ಮ, ಕೃಪ, ಎದುರರೇ ಮೊದಲಾದವರ ಮುಖಗಳು ಅರಳಿದ ತಾವರೆಗಿಂತ ಹಿರಿದಾದುವು. ೭೮. ಈ ಮಧ್ಯೆ ಪ್ರಕಾಶಮಾನವಾದ ತೇಜಸ್ಪೂ ಅತ್ಯಂತ ಜಾಜ್ವಲ್ಯಮಾನವಾದ ದಿವ್ಯಾಸ್ತದಿಂದ ಕೂಡಿಕೊಂಡಿರುವ ಬಿಲ್ಲೂ ಸಭೆಯ ಜನರನ್ನು ಉತ್ಸಾಹಗೊಳಿಸಿ ಆಕರ್ಷಿಸಿ ಭಯವನ್ನುಂಟುಮಾಡುತ್ತಿರಲು ಕರ್ಣನು ವೇಗವಾಗಿ ಬಂದನು. ವ! ದ್ರೋಣಾ ಚಾರ್ಯರಿಗೆ ನಮಸ್ಕಾರಮಾಡಿ ಬತ್ತಳಿಕೆಯಿಂದ ದಿವ್ಯಾಸ್ತಗಳನ್ನು ಸೆಳೆದುಕೊಂಡು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy