SearchBrowseAboutContactDonate
Page Preview
Page 160
Loading...
Download File
Download File
Page Text
________________ , ದ್ವಿತೀಯಾಶ್ವಾಸಂ | ೧೫೫ ವ|| ಆಗಳ್ ಕುಂಭಸಂಭವಂ- : : . ಕoll ಪೊಸ ಮುತ್ತಿನ ತುಡಿಗೆ ಪೊದ ಆಸೆಯ ದುಕೂಲಾಂಬರಂ ನಿಜಾಂಗದೊಳಂ ಸಂ | ದೆಸೆದಿರೆ ಬೆಳುಗಿಲಿಂದಂ ಮುಸುಕಿದ ನೀಲಾದ್ರಿ ಬರ್ಪ ತಳದೊಳ್ ಬಂದಂ || ೬೮ ವ|| ಅಂತು ಬಂದು ರಂಗಭೂಮಿಯ ನಡುವೆ ನಿಂದು. ಕಂ11 ನೆಗಟ್ಟಿರೆ ಪುಣ್ಯಾಹ ಸ್ವರ - ಮೊಗೆದಿರೆ ಪಟು ಪಟಹ ಕಾಹಳಾ ರವವಾಗಳ್ | ಪುಗವೇಲ್ಡಂ ವಿವಿಧಾಸ್ತ್ರ ಪ್ರಗಲ್ಕರಂ ತನ್ನ ಚಟ್ಟರಂ ಕಳಶಭವ ! ಅಂತು ಪುಗಟ್ಟುದುಂ ದಿ ಗಂತಿಗಳುಂ ಕುಲನಗಂಗಳುಂ ಗಡಣಂಗೊ 1 ಡೆಂತು ಕವಿತರ್ಕುಮಂತೆ ನೆ ಲಂ ತಳರ್ವಿನೆಗಂ ಪ್ರಚಂಡ ಕೋದಂಡಧರರ್ | ವ|| ಅಂತು ಧರ್ಮಪುತ್ರನಂ ಮುಂತಿಟ್ಟು ಭೀಮಾರ್ಜುನ ನಕುಲ ಸಹದೇವರುಂ ದುರ್ಯೊಧನನಂ ಮುಂತಿಟ್ಟು ಯುಯುತ್ಸು ದುಶ್ಯಾಸನ ದುಸ್ಸಹ ದುಸ್ಸಳ ಜರಾಸಂಧ ಸತ್ಯ ಸಂಧ ನಿಸ್ಸಹ ರಾಜಸಂಧ ವಿಂದಅನುವಿಂದ ದುರ್ಮತಿ ಸುಬಾಹು ದುಷ್ಟರ್ಶನ ದುರ್ಮಷ್ರಣ ದುರ್ಮುಖ ದುಷ್ಕರ್ಣ ವಿಕರ್ಣ ವಿವಿಂಶತಿ ಸುಲೋಚನ ಸುನಾಭ ಚಿತ್ರ ಉಪಚಿತ್ರ ನಂದ ಉಪನದ ಸುಚಿತ್ರಾಂಗದ ಚಿತ್ರಕುಂಡು ಸುಹಸ್ತ ದೃಢಹಸ್ತ ಪ್ರಮಾಥಿ ದೀರ್ಘಬಾಹು ಮಹಾಬಾಹು ಪ್ರತಿಮ ಸುಪ್ರತಿಮ ಸಪ್ತಮಾಧಿ ದುರ್ಧಷ್ರಣ ದುಪ್ಪರಾಜಯ ಮಿತ್ರ ಉಪಮಿತ್ರ ಚಲೋಪ ೬೮. ಆಗ ದ್ರೋಣನು ಹೊಸಮುತ್ತಿನ ಆಭರಣಗಳು ವ್ಯಾಪಿಸಿ ಶೋಭಾಯ ಮಾನವಾಗಿರಲು, ರೇಷ್ಮೆಯ ವಸ್ತವು ತನ್ನ ಶರೀರವನ್ನು ಸೇರಿ ಸುಂದರವಾಗಿರಲು ಬಿಳಿಯ ಮೋಡದಿಂದ ಮುಚ್ಚಿದ ನೀಲಪರ್ವತವು ಬರುವ ಹಾಗೆ ಬಂದನು. ವರ ಬಂದು ರಂಗಸ್ಥಳದ ಮಧ್ಯೆ ನಿಂತುಕೊಂಡು - ೬೯. ಪುಣ್ಯಾಹವಾಚನ ಮಂತ್ರನಾದವೂ ತಮಟೆ ಕೊಂಬು ಮೊದಲಾದ ವಾದ್ಯಧ್ವನಿಗಳೂ ಮೊಳಗುತ್ತಿರಲು ಬಗೆಬಗೆಯಾದ ಶಸ್ತ್ರಾಸ್ತ್ರಗಳಲ್ಲಿ ಪರಿಣತರಾದ ತನ್ನ ಶಿಷ್ಯರನ್ನು ದ್ರೋಣನು ಪ್ರವೇಶಮಾಡಹೇಳಿದನು. ೭೦. ದಿಗ್ಗಜಗಳೂ ಕುಲಪರ್ವತಗಳೂ ಗುಂಪುಗೂಡಿ ಮುತ್ತುವ ಹಾಗೆಯೂ ಭೂಮಿ ನಡುಗುವ ಹಾಗೆಯೂ ಉದ್ದಾಮರಾದ ಬಿಲ್ದಾರರು ವ|| ಧರ್ಮರಾಯನನ್ನು ಮುಂದಿಟ್ಟುಕೊಂಡು ಭೀಮಾರ್ಜುನ ನಕುಲಸಹದೇವರೂ ದುರ್ಯೊಧನನನ್ನು ಮುಂದಿಟ್ಟುಕೊಂಡು ಯುಯುತ್ಸು, ದುಶ್ಯಾಸನ, ದುಸ್ಸಳ, ಜರಾಸಂಧ, ಸತ್ಯಸಂಧ, ನಿಸ್ಸಹ, ರಾಜಸಂಧ, ವಿಂದ, ಅನುವಿಂದ, ದುರ್ಮತಿ, ಸುಬಾಹು, ದುಸ್ಪರ್ಶನ, ದುರ್ಮಷ್ರಣ, ದುರ್ಮುಖ, ದುಷ್ಕರ್ಣ, ವಿಕರ್ಣ, ವಿವಿಂಶತಿ, ಸುಲೋಚನ, ಸುನಾಭ,ಚಿತ್ರ, ಉಪಚಿತ್ರ, ನಂದ, ಉಪನಂದ, ಸುಚಿತ್ರಾಂಗದ, ಚಿತ್ರಕುಂಡಲ,
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy