SearchBrowseAboutContactDonate
Page Preview
Page 153
Loading...
Download File
Download File
Page Text
________________ ೨ ೧೪೮ / ಪಂಪಭಾರತಂ ವ|| ಎಂದು ಸೈರಿಸದೆಚಂ|| ಖಳ ನೊಳವಿಂಗೆ ಕುಪ್ಪೆ ವರಮಂಬವೊಲಾಂಬರವುಂಟೆ ನಿನ್ನದೊಂ ದಳವೊಡನೋದಿದೂಂದು ಬೆರಗಿಂಗ ಕೋಲಿನಗಾಗದೀ ಸಭಾ | ವಳಯದೊಳನ್ನವೇಚಿಸಿದ ನಿನ್ನನನಾಕುಳಮನ್ನ ಚಟ್ಟರಿಂ ತಳವೆಳಗಾಗೆ ಕಟ್ಟಿಸದೆ ಮಾಕೊಡೆ ಕಮ್ಮನ ಮಾಸವೊತ್ತೆನೇ || ೫೦ ವಗಿ ಎಂದಾರೂಢಪ್ರತಿಜ್ಞನಾಗಿ ನಾಗಪುರಕ್ಕೆ ಎಂದು ತಮ್ಮ ಭಾವ ಕೃಪನ ಮನೆಯೊಳಪ ಗತಪರಿಶ್ರಮನಾಗಿರ್ದೊಂದು ದಿವಸಂ ಪಾಂಡವರು ಕೌರವರುಂ ಪೊವೊಲಿಕ್ಕಂtl. ನರದಿಸುತಿರೆ ತೊಲ್ವುಲೆಯ ನಿರದದು ಬಿಡ ಪುರಾಣ ಕೂಪದೊಳದನಿ | ಸ್ನರಿದು ತೆಗೆವಂದಮಂದವ ರಿರೆ ಬಳಸಿಯುಮಲ್ಲಿ ಕಂಡು ನಕ್ಕಂ ದ್ರೋಣಂ || ೫೧ ಭರತಕುಳತಿಳಕರಿರ್ ವರ ಶರಾಸನ ವಗಹಸರಿರ್ ಬಳಯುತರಿರ್ | ನೆರೆದಿನಿಬರುಮಿಾ ಲಕ್ಷ ಮ ನಿರದಕ್ಕಟ ಸರದೆ ತೆಗೆಯಲಾರ್ತಿರುಮಿಲ್ಲಾ || ವ|| ಎಂದು ತನ್ನ ಮಗನಪ್ಪಶ್ವತ್ಥಾಮನಂ ಕರೆದೀ ಲಕ್ಷ ಮಂ ತಗೆಯೆಂಬುದುಮಾತ ನಂತೆ ಗಯ್ಯನೆಂದು ನೈಷ್ಠಿಕವೆಂಬ ಮುಷ್ಟಿಯೊಳಂ ಪುಂಖಾನುಪುಂಖವಂಬ ಐಶ್ವರ್ಯವು ಕಳ್ಳಿನೊಡನೆ ಹುಟ್ಟಿತು ಎಂಬುದನ್ನು ನಿಸ್ಸಂಶಯವಾಗಿ ಈಗ ವಿಶದವಾಗಿ ತಿಳಿದೆನು' ವಎಂದು ಹೇಳಿ ಅಷ್ಟಕ್ಕೇ ಸಹಿಸಲಾರದೆ ೫೦. "ಎಲೋ ಖಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು' ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ. ಈ ಸಭಾಮಂಡಲದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನಿರಾಯಾಸವಾಗಿ ನನ್ನ ಶಿಷ್ಯರಿಂದ ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ? ವ|ಎಂದು ಪಣತೊಟ್ಟವನಾಗಿ ಹಸ್ತಿನಾಪುರಕ್ಕೆ ಬಂದು ತನ್ನ ಭಾವನಾದ ಕೃಪನ ಮನೆಯಲ್ಲಿ ಶ್ರಮಪರಿಹಾರಮಾಡಿಕೊಂಡನು. ಒಂದು ದಿನ ಪಾಂಡವರೂ ಕೌರವರೂ ಪಟ್ಟಣದ ಹೊರಭಾಗದಲ್ಲಿ ೫೧. ಒಟ್ಟುಗೂಡಿ ಚಕ್ಕಳದ ಜಿಂಕೆಯೊಂದನ್ನು ಬಾಣಗಳಿಂದ ಹೊಡೆಯುತ್ತಿರಲು ಅದು ಹಳೆಯ ಬಾವಿಯಲ್ಲಿ ಬಿದ್ದುಬಿಟ್ಟಿತು. ಅದನ್ನು ತಿಳಿದು ಮೇಲಕ್ಕೆ ತೆಗೆಯುವ ರೀತಿ ಸಾಧ್ಯವಿಲ್ಲವೆಂದವರಿರಲಾಗಿ ಅಲ್ಲಿ ಸುತ್ತಾಡುತ್ತಿದ್ದ ದ್ರೋಣನು ಅದನ್ನು ಕಂಡು ನಕ್ಕನು. ೫೨. 'ಭರತವಂಶತಿಲಕರಾಗಿದ್ದೀರಿ; ಬಿಲ್ವಿದ್ಯೆಯಲ್ಲಿ ಪರಿಣತರಾಗಿದ್ದೀರಿ; ಬಲಿಷ್ಠರಾಗಿದ್ದೀರಿ; ಅಯ್ಯೋ ಒಟ್ಟುಗೂಡಿದ ನೀವಿಷ್ಟು ಜನವೂ ಈ ಗುರಿಯನ್ನು (ಚಕ್ಕಳದ ಜಿಂಕೆಯನ್ನು) ಬಾಣದಿಂದ ಮೇಲಕ್ಕೆ ತೆಗೆಯಲು 'ಸಮರ್ಥರಾಗಲಿಲ್ಲವೆ? ವ|| ಎಂದು ತನ್ನ ಮಗನಾದ ಅಶ್ವತ್ಥಾಮನನ್ನು ಕರೆದು ಈ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy