SearchBrowseAboutContactDonate
Page Preview
Page 15
Loading...
Download File
Download File
Page Text
________________ ೧೦ | ಪಂಪಭಾರತಂ ಅಣಿಮಾದ್ಯಷ್ಟಗುಣಪ್ರಭೂತವಿಭವಂ, ದೇವಾಂಗನಾ ಮನ್ಮಥ ಪ್ರಣಯಪ್ರಿಣಿತಮಾನಸಂ, ಸುರವಧೂಲೀಲಾವಧೂತಪ್ರತಿ ಕ್ಷಣ ಚಂಚಚ್ಚಮರೀರುಹಂ, ಪಟುನಟಪ್ರಾರಬ್ಬಸಂಗೀತಕಂ ತಣಿದಂ ಸಂತತಮಿಂತು ದಿವ್ಯಸುಖದೊಳ್ ಸಂಸಾರಸಾರೋದಯಂ || ಆದರೆ ಈ ತಣಿವು ಎಷ್ಟು ಕಾಲ! ಆತ್ಮ ಪುಣೋಪಾರ್ಜಿತಾಮರಲೋಕವಿಭವ ಮುಗಿಯುತ್ತ ಬಂದು ಆರು ತಿಂಗಳು ಮಾತ್ರ ಉಳಿಯಿತು. ಲಲಿತಾಂಗದೇವನು ಮುಡಿದಿದ್ದ ಹೂಮಾಲೆ ಬಾಡಿತು. ದೇಹಕಾಂತಿ ಮಸುಕಾಯಿತು. ಆಭರಣಗಳು ಕಾಂತಿಹೀನವಾದವು. ತನ್ನ ಅವಸಾನಕಾಲದ ಸೂಚನೆಯುಂಟಾಯಿತು. ಅಲ್ಲಿಯ ಭೋಗವನ್ನು ಬಿಡಲಾರದೆ ಸುತ್ತಲಿನ ಕಲ್ಪವೃಕ್ಷಗಳನ್ನೂ ವಿಮಾನದ ಮಣಿಕಟ್ಟನ್ನೂ ಭೂಮಿಕೆಗಳನ್ನೂ ತನ್ನನ್ನು ಉಳಿಸಿಕೊಳ್ಳಬೇಕೆಂದು ಬೇಡಿದನು. ಕೊನೆಗೆ ತನ್ನ ಕಾಮಸಾಮ್ರಾಜ್ಯಸರ್ವಸ್ವಭೂತೆಯಾದ ನಲ್ಲಳ ಮುಖವನ್ನು ನೋಡಿ 'ಮೆಗ್ಗಳೆರಡಾದೊಡಮೇನ್ ಅಸುವೊಂದೆ ನೋå ಡೆಂಬಂತಿರೆ ಕೂಡಿ ನಿನ್ನೊಡನೆ ಭೋಗಿಸಲೀಯದೆ ಕೆಮ್ಮನೆನ್ನನುಯ್ದಂತಕನೆಂಬ ಬೂತನೆಲೆ ಮಾಣಿಸಲಾಗದೆ ಪೇಶ್ ಸ್ವಯಂಪ್ರಭೆ' ಎಂದು ಅಂಗಲಾಚಿದನು. ಆಗ ಆ ಪ್ರಲಾಪವನ್ನು ಕೇಳಿ ಸಾಮಾನಿಕದೇವರು ಬಂದು ನಿನಗೊರ್ವಂಗವಸ್ಥಾಂತರಮಮರಜನಕ್ಕೆಲ್ಲಮೀ ಪಾಂಗ, ಕಾರು ನಿನಾದಂ ನಿನ್ನನಾದಂ ನಗಿಸುಗುಮೆದುಯ್ದಂತಕಂಗಿಲ್ಲ, ದೇವಾಂ ಗನೆಯರ್ ಮಾಯಾಂಪರೇ ಪೇಮ್ ಜನನ ಮೃತಿ ಜರಾತಂಕ ಶೋಕಾಗ್ನಿಯಂದಾ ವನುಮೀ ಸಂಸಾರದೊಳ್ ಬೇಯದನೊಳನೆ, ಶರಣ್ ಧರ್ಮದಿಂದೊಂದುಮುಂಟೆ! “ಅಘಮೋರಿಯಲ್ಲದುಳೆದ ಗೆಲಲಾರ್ಕುಮೆ ಮೃತ್ಯುರಾಜನಂ' ಎಂದು ಎಚ್ಚರಿಸಲು ಲಲಿತಾಂಗನು ತನ್ನ ಉಳಿದ ಆಯಸ್ಸನ್ನು ಜಿನಾರ್ಚನೆಯಲ್ಲಿಯೇ ಕಳೆದು ಶರತ್ಸಮಯದ ಮೋಡದಂತೆ ಕರಗಿ ಉತ್ಪಲಖೇಟವೆಂಬ ಪುರದಲ್ಲಿ ವಜ್ರಬಾಹು ಮತ್ತು ವಸುಂಧರೆಯರಿಗೆ ವಜ್ರಜಂಘನೆಂಬ ಮಗನಾಗಿ ಹುಟ್ಟಿದನು. ಸ್ವಯಂಪ್ರಭೆಯೂ ಇನಿಯನಗಿಯನ್ನು ಸಹಿಸಲಾರದೆ ಮದನನ ಕೈದುವದನ್, ಅನಂಗನ ಕೈಪೊಡೆಯೆಲ್ಲಿದಂ, ವಿಳಾ ಸದ ಕಣಿಯಲ್ಲಿದಂ, ಚದುರ ಪುಟ್ಟದನೆಲ್ಲಿದನೆಲ್ಲಿದಂ, ಎನೋ ದದ ಮೊದಲೆಲ್ಲಿದಂ, ಸೊಬಗಿನಾಗರಮೆಲಿದನ್, ಇಚ್ಛೆಯಾಣನೆ ಇದನ್, ಎರ್ದೆಯಾಣನನ್ನರಸನಲ್ಲಿದನೋ ಲಲಿತಾಂಗವಲ್ಲಭಂ || ಎಂದು ಪ್ರಾಣವಲ್ಲಭವಿಯೋಗಶೋಕೊದ್ರೇಕವ್ಯಾಕುಳೆಯಾಗಿ ಮಹತ್ತರ ದೇವಿಯರ ಸೂಚನೆಯ ಪ್ರಕಾರ ಮರುಭವದಲ್ಲಿ ಇನಿಯನನ್ನು ಪಡೆಯುವುದಕ್ಕಾಗಿ ಜಿನಪತಿಯನ್ನು ಪೂಜಿಸಿ ಗುರುಪಂಚಕವನ್ನು ನೆನೆದು ಉತ್ಪನ್ನಶರೀರೆಯಾಗಿ ಪುಂಡರೀಕಿಣಿಯಲ್ಲಿ ವಜ್ರದಂತನಿಗೂ ಲಕ್ಷಿಮತೀಮಹಾದೇವಿಗೂ ಕಾಮನ ಮಂತ್ರ ದೇವತೆಯಂತೆ ಅತ್ಯಂತ ಸೌಂದರ್ಯದಿಂದ ಕೂಡಿದ ಶ್ರೀಮತಿಯೆಂಬ ಮಗಳಾಗಿ ಹುಟ್ಟಿ ನವಯವ್ವನಲಕ್ಷ್ಮಿಯನ್ನು ತಾಳಿದಳು. ಹಿಂದಿನ ಜನ್ಮದ ವಾಸನೆ ಶ್ರೀಮತಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy