SearchBrowseAboutContactDonate
Page Preview
Page 140
Loading...
Download File
Download File
Page Text
________________ ದ್ವಿತೀಯಾಶ್ವಾಸಂ | ೧೩೫ ವll ಅಂತಾ ಕೂಸುಗಳ ಕೂಸಾಟವಾಡುತ್ತಿರ್ದೊಂದು ದಿವಸ ಮರಗೆರಸಿಯಾಡಲೆಂದು ಮುಂದೆ ತಮ್ಮ ಪಗೆ ಪರ್ವುವಂತ ಪರ್ಮತ್ತರ್ ಪರ್ವಿದಾಲದ ಮರದ ಮೊದಲ್ಗೆ ವಂದು ಭೀಮನಂ ಮಜಮಾಡಿ ಕೋಲವೀಡಾಡಿ ಪಲವು ಸೂಮ್ ಕಾಡಿಕಂ || ಪರಿದನಿಬರುಮೊಡನಡರ್ದಿರೆ ಮರನಂ ಮುಟ್ಟಿ ಪಡೆಯದನಿಬರ್ಗ೦ ಕಿಂ | ಕಿರಿವೋಗಿ ಭೀಮಸೇನಂ ಮರನಂ ಪಿಡಿದ ಪನ್ಮೂಲನಿಬರುಮುದಿರ್ದರ್ || ೩೧ ವlt ಅಂತು ಬಿಟ್ಟು ಸುಲಿದ ಮೊಳಕಾಲ್ಗಳುಂ ಕಬಲ್ಲ ಪಲ್ಗಳುಮಲ್ವಡಗಾದ ಮೈಯ್ದಳು ಮುಡಿದ ಕೆಳುವಾಗಿ ಬೆರಸುತ್ತುಂ ಬಂದು ಗಾಂಗೇಯ ಧೃತರಾಷ್ಟ್ರರ್ಗ ಕಾರಣಂಬೇಡವರಿಂದಿತ್ತ ಭೀಮನೊಡನಾಡದಿರಿಮೆಂದು ಮುದುಗಲ್ ಬಾರಿಸಿ ತಮ್ಮ ನೊಂದ ಸಿಗ್ಗಿಂಗನಿಬರುಮೊಂದಾಗಿ ಪೋಗಿ ಪೊಜವೊಬಲ ಮರದ ಕೆಳಗೆ ಮಲಹೊಂದಿದ ಭೀಮನನಡಸಿ ಪಿಡಿದು ನೂರ್ವರುಂ ಗಂಟಲಂ ಮೆಟ್ಟಿಕಂ 1 ಪಾವುಗಳಂ ಕೊಳಿಸಿ ಮಹಾ ಗ್ರಾವಮನುಜದಡಸಿ ಕಟ್ಟಿ ಕೂರಲೋಳ್ ಗಂಗಾ | ದೇವಿಯ ಮಡುವಿನೊಳಟ್ಟಿದ ರಾವರಿಸದೆ ತಮ್ಮ ಕುಲಮನಡಿಗಟ್ಟುವವೋಲ್ || ಜೊತೆಯಲ್ಲಿಯೇ ಬೆಳೆದರು. ವ|| ಆ ಮಕ್ಕಳು ಮಕ್ಕಳಾಟವನ್ನಾಡುತ್ತಿದ್ದು ಒಂದು ದಿನ ಮರಗೆರಸಿಯೆಂಬ ಆಟವನ್ನು ಆಡಲೆಂದು (ಬಂದು) ಮುಂದಿನ ತಮ್ಮ ಹಗೆತನ ಹಬ್ಬುವುದನ್ನು (ಇಂದೇ) ಸೂಚಿಸುವಂತೆ ಹನ್ನೆರಡುಮತ್ತರಷ್ಟು ಅಗಲವಾಗಿ ಬೆಳೆದ ಆಲದ ಮರದ (ಕೆಳಭಾಗಕ್ಕೆ) ಬಂದ ಭೀಮನನ್ನು ಕಾಣದ ಹಾಗೆ ಇರಿಸಿ ಕೋಲನ್ನೆಸೆದು ಅನೇಕ ಸಲ ಕಾಡಿದನು. ೩೧. ಓಡಿದ ಅಷ್ಟಮಂದಿಯೂ ಒಟ್ಟಿಗೆ ಮರವನ್ನು ಹತ್ತಿರಲು ಅವರನ್ನು ಮುಟ್ಟುವುದಕ್ಕಾಗದೆ ಅಷ್ಟು ಜನರ ಮೇಲೆಯೂ ರೇಗಿ ಕೋಪಿಸಿಕೊಂಡು ಭೀಮನು ಮರವನ್ನು ಹಿಡಿದು ಅಳ್ಳಾಡಿಸಲು ಹಣ್ಣಿನ ಹಾಗೆ ಅಷ್ಟು ಜನವೂ ಕೆಳಗೆ ಉದುರಿದರು (ಬಿದ್ದರು). ವ|| ಹಾಗೆ ಬಿದ್ದು ತರೆದುಹೋದ ಮೊಣಕಾಲುಗಳಿಂದಲೂ ಕಳೆದುಹೋದ ಹಲ್ಲುಗಳಿಂದಲೂ ಜಜ್ಜಿಹೋದ ಶರೀರದಿಂದಲೂ ಮುರಿದ ಕಮ್ಮಿಂದಲೂ ಕೂಡಿ ಅಳುತ್ತಾ ಬಂದು ಭೀಷ್ಮದೃತರಾಷ್ಟರಿಗೆ ಹಾಗಾಗುವುದಕ್ಕೆ ಕಾರಣ ವನ್ನು ತಿಳಿಸಲು ಅವರು ಅಂದಿನಿಂದ ಮುಂದೆ ಭೀಮನೊಡನಾಡಬೇಡಿ ಎಂದು ವೃದ್ದರು (ಮುದಿಕಣ್ಣುಗಳು) ನಿವಾರಿಸಲು ತಾವು ನೊಂದ ನಾಚಿಕೆಗಾಗಿ ಅಷ್ಟು ಜನವೂ ಒಟ್ಟುಗೂಡಿಹೋಗಿ ಪಟ್ಟಣದ ಹೊರಭಾಗದಲ್ಲಿ ಮರದ ಕೆಳಗೆ ಮೈಮರೆತು ನಿದ್ದೆಮಾಡುತ್ತಿದ್ದ ಭೀಮನ ಮೇಲೆ ಬಿದ್ದು ಹಿಡಿದು ನೂರುಜನರೂ ಅವನ ಕತ್ತನ್ನು ತುಳಿದು ೩೨. ಹಾವುಗಳಿಂದ ಕಚ್ಚಿಸಿ ದೊಡ್ಡಕಲ್ಲನ್ನು ಕುತ್ತಿಗೆಗೆ ಬಿಗಿಯಾಗಿ ಕಟ್ಟಿ ತಮ್ಮ ವಂಶವನ್ನೇ ತಳಕ್ಕೆ ಅದ್ದುವ ಹಾಗೆ ವಿಚಾರಮಾಡದೆ ಗಂಗಾನದಿಯ ಮಡುವಿನಲ್ಲಿ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy