________________
ಕಂ || ತಾಪಸನ ಶಾಪವೆಂಬುದು
ದ್ವಿತೀಯಾಶ್ವಾಸಂ | ೧೩೧
ಪಾಪದ ರೂಪತುಮಳೆಯದಂತೇಕೆ ಮನಂ || ಗಾಪಡೆದು ಬಂದು ಮುಟ್ಟಿದ ಯೋಪನೆ ನೀನೆನ್ನ ಪಾಪಕರ್ಮಿಯ ಮೆಯ್ಯಂ ।।
ನೀನ್ನಿನ್ನ ಸಾವನದನನ ಸುನ್ನೆನೆಯದ ನೆರವನೆಂಬ ಬಗೆಯೊಳ್ ಬಂದೈ 1 ನಿನ್ನೊಡನೆ ವಂದು ದಿವದೊಳ್
ನಿನ್ನ ಮನೋರಥಮನರಸ ನೆಪದ ಮಾಣೆಂ ||
ಉನ್ನತ ಧವಳಚ್ಛತ್ರ
ಚನ್ನ ವಿಯತ್ತಳನನಿಂದುಕುಳತಿಳಕನನಿಂ | ತನ್ನೆಯದಿಂದೀ ಪಟುವಿನೊ
ಇನ್ನರಸನನಿಂತು ಬಿದಿಯೆ ತಂದಿಕ್ಕುವುದೇ ||
OG
ಆ ದೆಸೆಯೊಳ್ ಭೂಭುಜನೋ
ಆ ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಮಂ |
ತಾ ದೆಸೆಯೊಳ್ ಭೂಪತಿಗೇ
ನಾದುದೂ ಪೇಟ್* ಬಿದಿಯ ಕಟ್ಟಿನಡೆದನೆನುತ್ತುಂ ||
UG
وو
ವ|| ಎಂದು ವನದೇವತೆಗಳೆಲ್ಲಂ ಕರುಣಮಾಗೆ ಪಳಯಿಸುವ ಮಾದ್ರಿಯ ಸರಮಂ ಕುಂತಿ ಕೇಳು ಭೋಂಕನೆರ್ದದಯದು
ಕಂ
೨೩
ಸತ್ತನೆಂದು ತಿಳಿದಳು. ೨೦. ಪ್ರಿಯನಾದ ಪಾಂಡುರಾಜನೇ ಋಷಿಯ ಶಾಪವು ಪಾಪದ ರೂಪವನ್ನು ತಾಳಿರುವುದು; ತಿಳಿದೂ ತಿಳಿಯದೆ ನಿನ್ನ ಮನಸ್ಸಿನ ಸಂಯಮವನ್ನು ನಾಶಪಡಿಸಿಕೊಂಡು ಬಂದು ಪಾಪಿಷ್ಠಳಾದ ನನ್ನ ಶರೀರವನ್ನು ಏಕೆ ಮುಟ್ಟಿದೆ? ೨೧. ನೀನು ನಿನ್ನ ಸಾವನ್ನು ಸ್ವಲ್ಪವೂ ಯೋಚಿಸದೆ ನಿನ್ನೊಡನೆ ಕೂಡುತ್ತೇನೆ ಎಂದು ಬಂದಿದ್ದೀಯೇ. (ಹಾಗೆಯೇ) ನಾನೂ ನಿನ್ನೊಡನೆ ಬಂದು ಸ್ವರ್ಗದಲ್ಲಿ ನಿನ್ನಿಷ್ಟಾರ್ಥವನ್ನು ಸಲ್ಲಿಸದೆ ಬಿಡುವುದಿಲ್ಲ ೨೨. ಅಯ್ಯೋ ವಿಧಿಯೇ, ಎತ್ತರವಾದ (ರಾಜಸೂಚಕವಾದ) ತನ್ನ ಶ್ವೇತಚ್ಛತ್ರದಿಂದ ಆಕಾಶಪ್ರದೇಶವನ್ನೆಲ್ಲ ಮುಚ್ಚಿದವನೂ ಚಂದ್ರವಂಶಶ್ರೇಷ್ಠನಾದವನೂ ಆದ ಪತಿಯನ್ನು ಹೀಗೆ ಅನಾಯದಿಂದ ಕಾಡಿನಲ್ಲಿ ತಂದೆಸೆಯುವುದೇ ? ವ|| ಎಂದು ವನದೇವತೆಗಳಿಗೆಲ್ಲ ಮರುಕ ಹುಟ್ಟುವ ಹಾಗೆ ಅಳುತ್ತಿದ್ದ ಮಾದ್ರಿಯ ಆ ಧ್ವನಿಯನ್ನು ಕುಂತಿ ಕೇಳಿ ಥಟ್ಟನೆ ಎದೆಬಿರಿದು ೨೩. ಯಾವ ದಿಕ್ಕಿನಲ್ಲಿ ರಾಜನು ಹೋದನು ಆ ದಿಕ್ಕಿನಿಂದಲೇ ಮಾದ್ರಿಯ ಕರುಣಾಮಯವಾದ ಧ್ವನಿಯೂ (ಕೇಳಿಬರುತ್ತಿದೆ) ಅಯ್ಯೋ ದೈವವೇ ನನ್ನ ರಾಜನಿಗೆ