SearchBrowseAboutContactDonate
Page Preview
Page 13
Loading...
Download File
Download File
Page Text
________________ ೮ ) ಪಂಪಭಾರತಂ ಖೇಚರೇಂದ್ರವಿಭವ, ಭೋಗೀಂದ್ರ ಭೋಗ ಇವೆಲ್ಲಮಧ್ರುವ, ಅಭೀಷ್ಟಸುಖಪ್ರದಮ ದೊಂದೆ ಮುಕ್ತಿಸ್ಥಾನಂ' ಅದಕ್ಕೆ ಭೋಗವನ್ನು ತ್ಯಾಗದಲ್ಲಿಯೂ ವೈಭವವನ್ನು ವೈರಾಗ್ಯದಲ್ಲಿಯೂ ಲೀನಗೊಳಿಸುವುದೇ ಸಾಧನ 'ಜಿನಧರ್ಮಮಾರ್ಮಂ' 'ಜನಚರಣಮ ಶರಣಂ' ಇದೇ ಕಾವ್ಯದುದ್ದಕ್ಕೂ ಅನುರಣಿತವಾಗುತ್ತಿರುವ ಪಲ್ಲವಿ. ಈ ಭಾವವನ್ನು ವಾಚಕರ ಹೃದಯದಲ್ಲಿ ಪ್ರವೇಶಮಾಡಿಸುವ ಕಾರ್ಯದಲ್ಲಿ ಕವಿ ಕೃತಕೃತ್ಯನಾಗಿದ್ದಾನೆ. ಈ ಗ್ರಂಥದಲ್ಲಿ ಬರುವ ಚಿತ್ರಪರಂಪರೆ, ಭಾವಗಳ ಒಳತೋಟಿ, ಪಾತ್ರಗಳ ವ್ಯಕ್ತಿತ್ವವರ್ಣನಾ ವೈಖರಿ, ನಾಟಕೀಯತೆ ಇವು ಎಂತಹವನನ್ನಾದರೂ ಮುಗ್ಧಗೊಳಿಸುತ್ತವೆ. ಅದರ ಸ್ವಾರಸ್ಯದ ಸವಿಯನ್ನು ಅನುಭವಿಸುವುದಕ್ಕೆ ಕಾವ್ಯವನ್ನು ಸಿಂಹಾವಲೋಕನಕ್ರಮದಿಂದಲಾದರೂ ಪರಿಚಯಮಾಡಿಕೊಳ್ಳುವುದೊಂದೇ ಮಾರ್ಗ. ಆದಿಪುರಾಣದ ವಿಹಾರವಿಮರ್ಶೆ: ವೈರಾಗ್ಯಮೂರ್ತಿಯಾದ ಆದಿ ತೀರ್ಥಂಕರನಿಗೆ ಆ ಪರಿಪಾಕವುಂಟಾಗಬೇಕಾದರೆ ಹತ್ತು ಜನ್ಮಗಳಲ್ಲಿ ತೊಳಲಬೇಕಾಯಿತು. ಮೊದಲನೆಯ ಜನ್ಮದಲ್ಲಿ ಆತನು ಸಿಂಹಪುರದಲ್ಲಿ ಶ್ರೀಷೇಣ ಮತ್ತು ಸೌಂದರಿಯರ ಮಗನಾಗಿ ಹುಟ್ಟಿದನು. ಪ್ರಾಪ್ತವಯಸ್ಕನಾಗಲು ತಂದೆಯು ರಾಜ್ಯವನ್ನು ನ್ಯಾಯಪ್ರಾಪ್ತವಾಗಿ ತನಗೆ ಕೊಡದೆ ಜನಪ್ರಿಯನಾದ ಕಿರಿಯ ಮಗನಿಗೆ ಕೊಟ್ಟನು. ಇದರಿಂದ ಜಯವರ್ಮನಿಗೆ ವಿಶೇಷ ನೋವುಂಟಾಯಿತು. ಈ ಜನ್ಮದಲ್ಲಿ ಪಡೆಯಲಾರದ ವೈಭವವನ್ನು ಮುಂದಿನ ಜನ್ಮದಲ್ಲಾದರೂ ಪಡೆದು ಈಗ ನನಗುಂಟಾದ ಅಭಿಭವವನ್ನು ನೀಗುತ್ತೇನೆಂದು, ಸ್ವಯಂಪ್ರಭುಗುರು ಪಾದಮೂಲದಲ್ಲಿ ಜಿನದೀಕ್ಷೆಯನ್ನು ಪಡೆದು ಘೋರತಪಸ್ಸಿನಲ್ಲಿ ನಿರತನಾದನು. ಆ ಕಾಲಕ್ಕೆ ಸರಿಯಾಗಿ ಅಂತರಿಕ್ಷದಲ್ಲಿ ನಳೊಡಗೂಡಿ ಸಮಸ್ತ ವೈಭವದಿಂದ ಹೋಗುತ್ತಿದ್ದ ವಿದ್ಯಾಧರನ ವಿಲಾಸಕ್ಕೆ ಮಾರುಹೋಗಿ ತಾನೂ ಅದನ್ನು ಪಡೆಯಬೇಕೆಂದಾಸ ಪಟ್ಟನು. ತಪಸ್ಸಿನಿಂದ ಪಡೆಯಬೇಕಾಗಿದ್ದ ಅನಲ್ಪಸುಖವನ್ನು ಮಾರಿ ಅಲ್ಪಸುಖಕ್ಕೆ ಮನಸೋತು ಗತಜೀವಿತನಾಗಿ ಅಳಕಾಪುರದ ಅತಿಬಳರಾಜನಿಗೂ ಆತನ ಮಹಾದೇವಿ ನಯನಮನೋಹರಿ ಮನೋಹರಿಗೂ ಮಹಾಬಳನೆಂಬ ಮಗನಾಗಿ ಹುಟ್ಟಿದನು. ತನು ಸಮಸ್ತ ವಿದ್ಯಾಧರ ವಿದ್ಯಾಸಾಗರನೂ ಅಶೇಷ ಶಾಸ್ತಪರಿಣತನೂ ಯವ್ವನಪರಿಪೂರ್ಣನೂ ಆಗಲಾಗಿ ಪೂರ್ವಜನ್ಮದ ತಪಸ್ಸಿನ ಫಲದಿಂದ ಮೊಗಮುತ್ತುಲ್ಲ ಸರೋಜಹಾಸಿ, ನಯನಂ ನೀಲಾಂಬುಜಸ್ಪರ್ಧಿ, ಬಾ ಹುಗಳಾಜಾನುವಿಳಂಬಿಗಳ, ತೊಡೆಗಳುಂ ರಂಭಾಮ್ಮದುಸ್ತಂಭ ಶೋ ಭೆಗಳಂ ಗೆಲವು, ವಕ್ಷಮಂಬರಚರ ಶ್ರೀ ಗೇಹವೆಂಬೊಂದೆ ರೂ ಪ ಗಡಂ, ನೋಡಲೊಡಂ ಮರುಳೊಳಿಸುಗುಂ ವಿದ್ಯಾಧರಸ್ತೀಯರಂ ಹೀಗೆ ವಿದ್ಯಾರೂಪಬಲಸಂಪನ್ನನಾದ ಕುಮಾರನಿಗೆ ಅತಿಬಳನು ಯುವರಾಜ ಪಟ್ಟವನ್ನು ಕಟ್ಟಲು ಲಲಿತಾಲಂಕರಣಪ್ರಸನ್ನ ರಸವತ್ತೇಯಂಗಳೊಳ್ ಮೂಡುತುಂ, ಮುಲುಗುತ್ತು, ಖಚರೀಜನಾನನನವಾಂಭೋಜಂಗಳೊಳ್ ಕಂಪನೀ
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy