SearchBrowseAboutContactDonate
Page Preview
Page 122
Loading...
Download File
Download File
Page Text
________________ ಪ್ರಥಮಾಶ್ವಾಸಂ | ೧೧೭ ಸೌಭಾಗ್ಯಮುಮಂ ಕಲ್ಬತರುವಿನುದಾರಶಕ್ತಿಯುಮನೀಶ್ವರನ ಪ್ರಭುಶಕ್ತಿಯುಮಂ ಜವನ ಬಲ್ಲಾಳನಮುಮಂ ಸಿಂಹದ ಕಲಿತನಮುಮನವರವರ ದೆಸೆಗಳಿಂ ತೆಗೆದೊಂದುಮಾಡಿ ಕೊಂತಿಯ ದಿವ್ಯಗರ್ಭೋದರಮೆಂಬ ಶುಕ್ಕಿಪುಡೋದರದೊಳ್ ತನ್ನ ದಿವ್ಯಾಂಶಮಂಬ ಮುಕ್ತಾಫಲೋದ ಬಿಂದುವನಿಂದ ಸಂಕ್ರಮಿಸಿ ನಿಜನಿವಾಸಕ್ಕೆ ಪೋದನನ್ನೆಗಮಿತ್ತ ಕೊಂತಿಯುಮಂದಿನ ಬೆಳಗಪ್ಪ ಜಾವದೊಳ್ ಸುಖನಿದ್ರೆಯಾಗಿಚಂ 1 ಕುಡಿವುದನೇಣುಮಂಬುಧಿಯುಮಂ ಕುಲಶೈಲಕುಳಂಗಳಂ ತರು ಛಡರ್ವುದನೊಂದು ಬಾಳ ರವಿ ತನ್ನಯ ಸೋಗಿಲ ಮಗ ರಾಗದಿಂ | ಪೊಡರ್ವುದನಂತ ದಿಕ್ಕರಿಗಳಂಬುಜಪತ್ರ ಪುಟಾಂಬುವಿಂ ಬೆಡಂ ಗಡಸಿರೆ ಮಜನಂಬುಗಿಪುದಂ ಸತಿ ಕಂಡೊಸೆದ ನಿಶಾಂತದೂಳ್ lo೪೦ ವ|| ಅಂತು ಕಂಡು ಮುನಿಕುಮಾರರೋದುವ ವೇದನಿನಾದದಿಂ ವಿಗತ ನಿದ್ರಯಾಗಿ ಪಾಂಡುರಾಜಂಗಮಲ್ಲಿಯ ಮುನಿಜನಂಗಳಮುಪಿದೊಡವರಾ ಕನಸುಗಳೆ ಸಂತೋಷಂಬಟ್ಟುಚoll ಕುಡಿವುದಕೆಂದಮಬ್ದಗಳನಬಿಪರೀತ ಮಹೀಶನಂ ತಗು ಛಡರ್ವುದಂ ಕುಲಾದ್ರಿ ಪರಿವೇಷ್ಟಿತನಂ ತರುಣಾರ್ಕನಂ | ಪೊಡರ್ವುದಂದಮಂದುಮುದಿತೋದಿತನಂ ದಿಗಿಭಂಗಳೆಂಟು ತೊಡರಿಸಿ ಮಜನಂಬುಗಿಸೆ ಕಂಡುದಂ ಕಮಲಾಭಿರಾಮನ೦ | ೧೪೧ ಆಧಿಕ್ಯವನ್ನೂ ಚಂದ್ರನ ಕಾಂತಿಯನ್ನೂ ಮನ್ಮಥನ ಸೌಭಾಗ್ಯವನ್ನೂ ಕಲ್ಪವೃಕ್ಷದ ಔದಾರ್ಯವನ್ನೂ ಈಶ್ವರನ ಪ್ರಭುಶಕ್ತಿಯನ್ನೂ ಯಮನ ಶೌರ್ಯವನ್ನೂ ಸಿಂಹದ ಪರಾಕ್ರಮವನ್ನೂ ಅವು ಒಂದೊಂದರಿಂದಲೂ ತೆಗೆದು ಒಟ್ಟಿಗೆ ಶೇಖರಿಸಿ ಕುಂತಿಯ ಶ್ರೇಷ್ಠವಾದ ಗರ್ಭವೆಂಬ ಮುತ್ತಿನ ಚಿಪ್ಪಿನ ಒಳಗಡೆ ತನ್ನ ದಿವ್ಯಾಂಶವೆಂಬ ಮುತ್ತಿನ ಹನಿಯನ್ನು ಬೆರಸಿಟ್ಟು ಇಂದ್ರನು ತನ್ನ ವಾಸಸ್ಥಳಕ್ಕೆ ಹೋದನು. ಅಷ್ಟರಲ್ಲಿ ಈ ಕಡೆ ಕುಂತಿಯು ಮುಂದಿನ ಬೆಳಗಿನ ಜಾವದಲ್ಲಿ ಸುಖನಿದ್ರೆಯನ್ನು ಹೊಂದಿ ೧೪೦. ರಾತ್ರಿಯ ಕೊನೆಯ ಭಾಗದಲ್ಲಿ ತಾನು ಸಪ್ತಸಮುದ್ರಗಳನ್ನು ಕುಡಿಯುವುದನ್ನೂ ಸಪಕುಲಪರ್ವತಗಳನ್ನು ಕ್ರಮವಾಗಿ ಹತ್ತುವುದನ್ನೂ ಬಾಲಸೂರ್ಯನು ತನ್ನ ಮಡಲಿನಲ್ಲಿ ಸಂತೋಷವಾಗಿ ಹೊರಳಾಡುವುದನ್ನೂ ಹಾಗೆಯೇ ದಿಗ್ಗಜಗಳನ್ನೂ ಕಮಲಪತ್ರದ ಮೇಲಿರುವ ನೀರಿನಿಂದ ಸುಂದರವಾಗಿ ಕಾಣುತ್ತಿರುವ ಸರೋವರದಲ್ಲಿ ಸ್ನಾನಮಾಡಿಸುತ್ತಿರುವುದನ್ನೂ ಸ್ವಪ್ನದಲ್ಲಿ ಕಂಡು ಸಂತೋಷಪಟ್ಟಳು. ವ ಹಾಗೆ ಕನಸನ್ನು ಕಂಡು ಋಷಿಕುಮಾರರು ಪಠಿಸುವ ವೇದಘೋಷದಿಂದ ಎಚ್ಚೆತ್ತು ಪಾಂಡುರಾಜನಿಗೂ ಅಲ್ಲಿದ್ದ ಋಷಿಸಮೂಹಕ್ಕೂ ಆ ಕನಸಿನ ವಿಷಯವನ್ನು ತಿಳಿಸಲು ಅವರು ಆ ಕನಸುಗಳಿಗೆ ಸಂತೋಷಪಟ್ಟು ಅದರ ಅರ್ಥವನ್ನು (ಸಂಕೇತ) ವಿವರಿಸಿದರು. ೧೪೧. ಸಪ್ತಸಮುದ್ರಗಳನ್ನು ಕುಡಿಯುವುದರಿಂದ ಸಮುದ್ರವು ಬಳಸಿದ ಭೂಮಿಗೆ ಒಡೆಯನನ್ನೂ ಕುಲಪರ್ವತಗಳನ್ನು ಹತ್ತುವುದರಿಂದ ಕುಲಪರ್ವತಗಳಿಂದ ಸುತ್ತುವರಿಯಲ್ಪಟ್ಟ ರಾಜ್ಯವನ್ನುಳ್ಳವನನ್ನೂ ಬಾಲಸೂರ್ಯನು ಮಡಿಲಿನಲ್ಲಿ ಹೊರಳಾಡುವುದರಿಂದ ಏಕಪ್ರಕಾರದ ಅಭಿವೃದ್ಧಿಯನ್ನು ಪಡೆಯುವನನ್ನೂ ಎಂಟು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy