SearchBrowseAboutContactDonate
Page Preview
Page 115
Loading...
Download File
Download File
Page Text
________________ ೧೧೦ | ಪಂಪಭಾರತಂ ಉ ಜ್ಞಾನದಿನಿರ್ದು ನಿಟ್ಟಿಪೊಡೆ ದಿವ್ಯ ಮುನೀಂದ್ರನ ಕೊಟ್ಟ ಮಂತ್ರ ಸಂ ತಾನಮನೋದಿಯೋದಿ ಯಮರಾಜನನದ್ಭುತತೇಜನಂ ಸರೋ 1 'ಜಾನನೆ ಜಾನದಿಂ ಬರಿಸಿ ಬಂದು ಯಮಂ ಬೆಸನಾವುದಾವುದಾ ತ್ಯಾನುಗತಾರ್ಥವೆಂದೊಡೆನಗೀವುದು ನಿನ್ನನೆ ಪೋಲ್ವ ಪುತ್ರನಂ || ೧೧೯ ವ|| ಎಂಬುದುಂ ತಥಾಸ್ತುವೆಂದು ತನ್ನಂಶಮನಾಕೆಯ ಗರ್ಭದೊಳವತರಿಸಿ ಯಮಭಟ್ಟಾರಕನಂತರ್ಧಾನಕ್ಕೆ ಸಂದನನ್ನೆಗಮಾ ಕಾಂತೆಗೆ ಚಂ || ಹಿಮ ಧವಳಾತಪತ್ರಮನ ಪೋಲೆ ಮುಖೇಂದುವ ಬೆಳು ಪೂರ್ಣ ಕುಂ ಭಮನೆ ನಿರಂತರಂ ಗೆಲೆ ಕುಚಂಗಳ ತೋರ್ಪ ಪತಾಕೆಯೊಂದು ವಿ| ಭ್ರಮಮನೆ ಪೋಲೆ ಪುರ್ವಿನ ಪೊಡರ್ಪೊಳಗೊಂಡುದವಳೆ ಗರ್ಭ ಚಿ, ಹಮ ಗಳ ಗರ್ಭದರ್ಭಕನ ಸೂಚಿಪ ಮುಂದಣ ರಾಜ್ಯಚಿಹ್ನಮಂ || ೧೨೦ ವ|| ಅಂತು ಕೊಂತಿಯ ಗರ್ಭಭಾರಮುಂ ತಾಪಸಾಶ್ರಮದನುರಾಗಮುಮೊಡನೊಡನೆ ಬಳೆಯ ಬಂಧುಜನದ ಮನೋರಥಂಗಳುಮೊಂಬತ್ತನೆಯ ತಿಂಗಳುಮೊಡನೊಡನೆ ನೆಲೆಯ ಕಂ ವನನಿಧಿಯಿಂದ ಚಂದ್ರ ವಿನತೋದರದಿಂ ಗರುತನುದಯಾಚಳದಿಂ | ದಿನಪನೊಗವಂತ ಪುಟ್ಟದ ನನಿವಾರ್ಯ ಸುತ್ತೇಜನೆನಿಪನಿನಜನ ತನಯಂ ।। 360 ೧೧೯, ಋಷಿಶ್ರೇಷ್ಠನಾದ ದುರ್ವಾಸನು ಕೊಟ್ಟ ಮಂತ್ರಸಮೂಹವನ್ನು ಜ್ಞಾನದಿಂದ ಏಕಾಗ್ರಚಿತ್ತದಿಂದ ಪಠನಮಾಡಿ ಕಮಲಮುಖಿಯಾದ ಆ ಕುಂತಿಯು ಅದ್ಭುತವಾದ ತೇಜಸ್ಸಿನಿಂದ ಕೂಡಿದ ಯಮರಾಜನನ್ನು ಆಹ್ವಾನಿಸಿದಳು. ಯಮನು ಬಂದು 'ಮಾಡಬೇಕಾದ ಕಾರ್ಯವಾವುದು ನಿನ್ನ ಇಷ್ಟಾರ್ಥವೇನು' ಎಂದನು. 'ನಿನ್ನನ್ನು ಹೋಲುವ ಮಗನನ್ನು ನನಗೆ ದಯಪಾಲಿಸಬೇಕು' ಎಂದಳು. ವl ಯಮಭಟ್ಟಾರಕನ 'ತಥಾಸ್ತು' ಎಂದು ತನ್ನಂಶವನ್ನು ಅವಳ ಗರ್ಭದಲ್ಲಿ ಇಳಿಸಿಟ್ಟು ಮರೆಯಾದನು. ಆಗ ೧೨೦. ಅವಳ ಮುಖಕಮಲದ ಬಿಳುಪು ಹಿಮದಂತೆ ಬೆಳ್ಳಗಿರುವ ಶ್ವೇತಚ್ಛತ್ರವನ್ನು ಸೂಚಿಸಿತು. ಕಪ್ಪು ಸ್ತನಗಳು ಪೂರ್ಣಕುಂಭಗಳ ಆಕಾರವನ್ನು ಪಡೆದವು. ಹುಬ್ಬಿನ ವಿಸ್ತಾರವು ಧ್ವಜದ ವಿಸ್ತಾರವನ್ನು ಪ್ರದರ್ಶಿಸಿತು. ಅವಳ ಗರ್ಭದಲ್ಲಿರುವ ಬಾಲಕನ ಮುಂದಣ ರಾಜ್ಯಚಿಹ್ನವನ್ನು ಸೂಚಿಸುವಂತೆ ಅವಳಿಗೆ ಗರ್ಭಚಿಹ್ನೆಗಳುಂಟಾದವು. ವ|| ಹಾಗೆ ಕುಂತಿಯ ಗರ್ಭಭಾಗವೂ ಆ ತಪಸ್ವಿಗಳ ಆಶ್ರಮದ ಪ್ರೀತಿಯೂ ಜೊತೆಜೊತೆಯಲ್ಲಿಯೇ ಅಭಿವೃದ್ಧಿಯಾಗುತ್ತಿರಲು ಅವಳ ಬಂಧುಜನದ ಇಷ್ಟಾರ್ಥವೂ ಒಂಬತ್ತನೆಯ ತಿಂಗಳೂ ಒಟ್ಟಿಗೆ ಪೂರ್ಣವಾದುವು. ೧೨೧. ಸಮುದ್ರದಿಂದ ಚಂದ್ರನೂ ವಿನತಾದೇವಿಯ ಹೊಟ್ಟೆಯಿಂದ ಗರಿಡನ ಉದಯಪರ್ವತದಿಂದ ಸೂರ್ಯನೂ ಹುಟ್ಟುವಂತೆ ತೇಜೋಮೂರ್ತಿಯಾದ ಯಮಪುತ್ರನು ಜನಿಸಿದನು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy