SearchBrowseAboutContactDonate
Page Preview
Page 107
Loading...
Download File
Download File
Page Text
________________ ೧೦೨ ಪಂಪಭಾರತಂ ವl ಅಂತಿಂದ್ರನಿತ್ತ ಶಕ್ತಿಯಂ ಕೈಕೊಂಡು ನಿಜಭುಜಶಕ್ತಿಯಂ ಪ್ರಕಟಂ ಮಾಡಲೆಂದು ರೇಣುಕಾನಂದನನಲ್ಲಿಗೆ ಪೋಗಿಕಂ || ಕೂರಿಸಿ ಗುರು ಶುಷಿ ಳಾ ರಾಮನನುಗ್ರ ಪರಶು ಪಾಟಿತ ರಿಪು ವಂ | ಶಾರಾಮನನಿಷುವಿದ್ಯಾ ಪಾರಗಳೆನಿಸಿದುದು ಬಿ ವೈಕರ್ತನನಾ | ೧೦೪ ವll ಅಂತು ಧನುರ್ಧರಾಗ್ರಗಣ್ಯನಾಗಿರ್ದೊಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮದೋಜಿಗಿದಾ ಪ್ರಸ್ತಾವದೂಳಾ ಮುನಿಗೆ ಮುನಿಸಂ ' .. ಮಾಡಲೆಂದಿಂದ್ರನುಪಾಯದೊಳಟ್ಟದ ವಜ್ರಕೀಟಂಗಳ್ ಕರ್ಣನೆರಡುಂ ತೂಡೆಯುವ ನುಳಿಯನೂ ಕೊಡಂತಿಯೊಳ್ ಬೆಟ್ಟದಂತತಮಿತ್ತಮುರ್ತಿ ಪೋಗಯುಮದನನಯದಂತೆ ಗುರುಗೆ ನಿದ್ರಾಭಿಘಾತಮಕ್ಕುಮೆಂದು ತಲೆಯನುಗುರಿಸುತ್ತುಮಿರೆಯಿರಕಂ|| ಅತಿ ವಿಶದ ವಿಶಾಲೋರು. ಕೃತದಿಂದೊಜದನಿತು ಜಡೆಯುಮಂ ನಾಂದಿ ಮನಃ | ಉತದೊಡನೆಬ್ಬಳಸಿದುದು ತಮಾ ವಂದನ್ನ ಮಿತ್ರ ಗಂಧಂ ಮುನಿಯಂ || ೧೦೫ ವ|| ಅಂತೆಲ್ಕತ್ತು ನೆತ್ತರ ಪೊನಲೊಳ್ ನಾಂದುನನೆದ ಮಯ್ಯುಮಂ ತೊಯ್ದು ತಳ್ಕೊಯ್ದ ಜಡೆಯುಮಂ ಕಂಡೀ ಧೈರ್ಯಂ ಕೃತಿಯಂಗಲ್ಲದಾಗದು ಪಾರ್ವನೆಂದೆನ್ನೋಲ್ ಶಕ್ಕಾಯುಧವು ಗ್ರಹ ಹಿಡಿದ ಹಾಗೆ ಅವರನ್ನು ಕೊಲ್ಲುತ್ತದೆ ಎಂದು ಅವನಿಗೆ ಶಕ್ಕಾಯುಧವನ್ನು ಕೊಟ್ಟನು. ವ|| ಹಾಗೆ ಇಂದ್ರನು ಕೊಟ್ಟ ಶಕ್ಕಾಯುಧವನ್ನು ಸ್ವೀಕರಿಸಿ ತನ್ನ ಬಾಹುಬಲವನ್ನು ಪ್ರಕಟಮಾಡಬೇಕೆಂದು ಪರಶುರಾಮನ ಹತ್ತಿರಕ್ಕೆ ಹೋದನು. ೧೦೪. ಭಯಂಕರವಾದ ಕೊಡಲಿಯಿಂದ ಸೀಳಲ್ಪಟ್ಟ ವೈರಿಗಳೆಂಬ ತೋಟವನ್ನುಳ್ಳ ಆ ಪರಶುರಾಮನನ್ನು ಕರ್ಣನು ಗುರುಶುಶೂಷೆಯ ಮೂಲಕ ಪ್ರೀತಿಸುವಂತೆ ಮಾಡಲು ಕರ್ಣನ ಬಿಲ್‌ಬಿಯು ಅವನನ್ನು ಧನುರ್ವಿದ್ಯೆಯಲ್ಲಿ ಪಾರಂಗತನೆನ್ನುವ ಹಾಗೆ ಮಾಡಿತು. ವ|| ಹಾಗೆ ಬಿಲ್ಲು ಹಿಡಿದಿರುವವರಲ್ಲೆಲ್ಲ ಮೊದಲಿಗನಾಗಿದ್ದು ಒಂದು ದಿನ ಪರಶುರಾಮನು ತನ್ನ ತೊಡೆಯ ಮೇಲೆ ತಲೆಯನ್ನು * ಮಡಗಿ ಎಚ್ಚರತಪ್ಪಿ ಮಲಗಿದ ಸಂದರ್ಭದಲ್ಲಿ ಆ ಋಷಿಗೆ ಕೋಪವನ್ನುಂಟು ಮಾಡಬೇಕೆಂದು ಇಂದ್ರನು ಉಪಾಯದಿಂದ ಕಳುಹಿಸಿದ ವಜ್ರಕೀಟಗಳೇ ಕರ್ಣನೆರಡು ತೊಡಗಳನ್ನೂ ಉಳಿಯನ್ನು ನಾಟಿ ಕೊಡಲಿಯಿಂದ ಹೊಡೆದ ಹಾಗೆ ಆ ಕಡೆಯಿಂದ ಈ ಕಡೆಗೆ ಕೊರೆದುಕೊಂಡು ಹೋದರೂ ಕರ್ಣನು ಅದನ್ನು ತಿಳಿಯದವನಂತೆ * ಗುರುವಿಗೆ ನಿದ್ರಾಭಂಗವಾಗುತ್ತದೆಂದು ಗುರುವಿನ ತಲೆಯನ್ನು ತನ್ನ ಉಗುರಿನಿಂದ ಸವರುತ್ತಿದ್ದನು. ೧೦೫. ವಿಶೇಷವೂ ಸ್ಪಷ್ಟವೂ ಅಗಲವೂ ಆದ ತೊಡೆಯ ಗಾಯದಿಂದ ಜಿನುಗಿ ಹೆಚ್ಚುತ್ತಿರುವ ರಕ್ತದಿಂದ ಕೂಡಿದ ದುರ್ಗಂಧವು ಜಡೆಯಷ್ಟನ್ನೂ ಒದ್ದೆಮಾಡಿ ಋಷಿಯನ್ನು ಮನಸ್ಸಿನ ಏರುತ್ತಿರುವ ಕೋಪದೊಡನೆ ಎಚ್ಚರವಾಗುವ ಹಾಗೆ ಮಾಡಿತು.
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy