SearchBrowseAboutContactDonate
Page Preview
Page 103
Loading...
Download File
Download File
Page Text
________________ ೯೮ / ಪಂಪಭಾರತಂ. ಬಂದು ಸುರನದಿಯ ನೀರೊಳ? ಮಿಂದಿನನಂ ನೋಡಿ ನಿನ್ನ ದೊರೆಯನೆ ಮಗನ | ಕೈಂದಾಹ್ವಾನಂಗೆಯ್ಯಿ ಡಂ ದಲ್ ಧರೆಗಿಚಿದನಂದು ದಶಶತಕಿರಣಂ || ವ|| ಅಂತು ನಭೋಭಾಗದಿಂ ಭೂಮಿಭಾಗಕ್ಕಿಟೆದು ತನ್ನ ಮುಂದೆ ನಿಂದರವಿಂದ ಬಾಂಧವನ ನೋಡಿ ನೋಡಿಕಂ 11 ಕೊಡಗೂಸುತನದ ಭಯದಿಂ ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಿ | ಬೀುಡಿಯಲೊಡಗೂಡೆ ಗಂಗೆಯ ಮಡು ಕರೆಗಣಿದುದು ನಾಣ ಪಂಪೇಂ ಪಿರಿದೊ || ವ!| ಆಗಳಾದಿತ್ಯನಾಕೆಯ ಮನದ ಶಂಕೆಯುಮಂ ನಡುಗುವ ಮೆಯ್ಯ ನಡುಕಮುಮಂ ಕಿಡೆನುಡಿದಿಂತೆಂದಂಕಂ | ಬರಿಸಿದ ಕಾರಣವಾವುದೊ ತರುಣಿ ಮುನೀಶ್ವರನ ಮಂತ್ರಮೇ ದೊರೆಯೆಂದಾಂ | ಮರುಳಿಯನೆಯದುಮಣಿಯದೆ ಬರಿಸಿದೆನಿನ್ನೇಟಿಮೆಂದೊಡಾಗದು ಪೋಗಲ್ || ಮುಂ ಬೇಡಿದ ವರಮಂ ಕುಡ ದಂಬುಜಮುಖಿ ಪುತ್ರನನ್ನ ದೊರೆಯಂ ನಿನಗ || ಕೆಂಬುದುಮೊದವಿದ ಗರ್ಭದೊ ಳಂಬುಜಮಿತ್ರನನ ಪೋಲ್ವ ಮಗನೊಗೆತಂದಂ || ಅಲೆಗಳನ್ನುಳ್ಳ ಗಂಗಾನದಿಗೆ ಉನ್ನತಸ್ತನಿಯಾದ ಅವಳು ಒಬ್ಬಳೇ ಬಂದಳು. ೯೧. ಬಂದು ಗಂಗಾನದಿಯ ನೀರನಲ್ಲಿ ಸ್ನಾನಮಾಡಿ ಸೂರ್ಯನನ್ನು ನೋಡಿ ನಿನಗೆ ಸಮನಾದ ಮಗನಾಗಲಿ ಎಂದು ಕರೆದಾಗಲೇ ಸೂರ್ಯನು ಪ್ರತ್ಯಕ್ಷವಾದನು. ೯೨. ತಾನು ಇನ್ನೂ ಕನೈಯಲ್ಲಾ ಎಂಬ ಭಯದಿಂದ ನಡುಗುವ ಆ ಕನ್ಯಯ ಬೆವರಿನ ನೀರಿನ ಪ್ರವಾಹವು ತುಂಬಿ ಹರಿದು ಒಟ್ಟುಗೂಡಲು ಗಂಗಾನದಿಯ ಮಡುವೂ ದಡವನ್ನು ಮೀರಿ ಹರಿಯಿತು. ಆಕೆಯ ನಾಚಿಕೆಯ ಆಧಿಕ್ಯವು ಎಷ್ಟು ಹಿರಿದೊ! ವ|| ಆಗ ಸೂರ್ಯನು ಅವಳ ಮನಸ್ಸಿನ ಸಂದೇಹವೂ ನಡುಗುತ್ತಿರುವ ಶರೀರದ ನಡುಕವೂ ಹೋಗುವ ಹಾಗೆ (ನಯದಿಂದ) ಮಾತನಾಡಿ ೯೩-೯೪. ಎಲೆ ತರುಣಿ ನನ್ನನ್ನು ಬರಿಸಿದ ಕಾರಣವೇನು (ಎಂದು ಸೂರ್ಯನು ಪ್ರಶ್ನಿಸಲು ಕುಂತಿಯು) ಆ ಋಷಿಶ್ರೇಷ್ಠನು ಕೊಟ್ಟ ಮಂತ್ರವು ಎಂಥಾದ್ದು ಎಂದು ಪರೀಕ್ಷಿಸಲು (ಬರಿಸಿದೆನು) ನಾನು ಅರಿಯದವಳೂ ಭ್ರಮೆಗೊಂಡವಳೂ ಆಗಿದ್ದೇನೆ. ತಿಳಿದೂ ತಿಳಿಯದೆ ಬರಮಾಡಿದೆನು. ಇನ್ನು ಎದ್ದುಹೋಗಿ ಎಂದಳು. (ಸೂರ್ಯನು) ಎಲ್‌ ಕಮಲಮುಖಿಯೇ ನೀನು ಮೊದಲು ಬೇಡಿದ ವರವನ್ನು ಕೊಡದೆ ನಾನು
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy